ಮುಸ್ಲಿಮರಿಂದ ಬ್ರಾಹ್ಮಣ ಹುಡುಗಿಯ ಬೆಲೆ 20 ಲಕ್ಷ ರೂಪಾಯಿ ಮತ್ತು ದಲಿತ ಹುಡುಗಿಯ ಬೆಲೆ 10 ಲಕ್ಷ ರೂಪಾಯಿಗೆ ನಿಗದಿಪಡಿಸಿರುವುದು ಬಹಿರಂಗ

ರಾಜಸ್ಥಾನದ ಬೇವಾರ್‍‌ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯರ ಲೈಂಗಿಕ ದೌರ್ಜನ್ಯ ಪ್ರಕರಣ

ಅಜ್ಮೇರ (ರಾಜಸ್ಥಾನ) – ರಾಜಸ್ಥಾನದ ಬೇವಾರ ಜಿಲ್ಲೆಯ ವಿಜಯನಗರದಲ್ಲಿ ಮತಾಂತರದ ಪ್ರಕರಣಗಳು ನಿರಂತರವಾಗಿ ಬಹಿರಂಗಗೊಳ್ಳುತ್ತಿವೆ. ಈ ಪ್ರಕರಣದಲ್ಲಿ ಪೊಲೀಸರು 12 ರಿಂದ 15 ಮುಸ್ಲಿಮರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈ ಮುಸ್ಲಿಮರು ಅಪ್ರಾಪ್ತ ಶಾಲಾ ಬಾಲಕಿಯರನ್ನು ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಮತ್ತು ಬಲವಂತವಾಗಿ ಮತಾಂತರಿಸಲು ಸಂಚು ರೂಪಿಸಿದ್ದರು. ಸಂತ್ರಸ್ತೆಯ ಕುಟುಂಬದವರು ಈ ಸಂದರ್ಭದಲ್ಲಿ ದೂರು ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಬೇವಾರ್ ಪ್ರಕರಣದಲ್ಲಿ ಬ್ರಾಹ್ಮಣ ಹುಡುಗಿಯನ್ನು ಬಲೆಗೆ ಬೀಳಿಸಲು 20 ಲಕ್ಷ ರೂಪಾಯಿಗಳು ಮತ್ತು ದಲಿತ ಹುಡುಗಿಗಾಗಿ 10 ಲಕ್ಷ ರೂಪಾಯಿ ನೀಡುವವರಿದ್ದರು ಎಂದು ಬಹಿರಂಗವಾಗಿದೆ. ವಿಶೇಷವೆಂದರೆ, ಎಲ್ಲಾ ಆರೋಪಿಗಳು ಅನಕ್ಷರಸ್ಥರಾಗಿದ್ದಾರೆ. (ಅನಕ್ಷರಸ್ತ ಮಕ್ಕಳು ಅಪರಾಧ ಕೃತ್ಯಗಳನ್ನು ಮಾಡುತ್ತಾರೆ, ಅದರಲ್ಲಿ ಸಂದೇಹವೇ ಇಲ್ಲ! – ಸಂಪಾದಕರು) ಈ ಸಂಪೂರ್ಣ ಪ್ರಕರಣವನ್ನು 1992 ರ ಅಜ್ಮೇರ ಬ್ಲ್ಯಾಕಮೇಲ್ ಪ್ರಕರಣಕ್ಕೆ ಹೋಲಿಸಲಾಗುತ್ತಿದೆ, ಇದರಲ್ಲಿ ಅಪ್ರಾಪ್ತ ಹಿಂದೂ ಶಾಲಾ ಬಾಲಕಿಯರನ್ನು ಸಹ ಗುರಿ ಮಾಡಲಾಗಿತ್ತು.

1. ಒಬ್ಬ ಸಂತ್ರಸ್ಥೆಯು ಆರೋಪಿ ಯುವಕನ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹುಡುಗಿಯ ಹೇಳಿಕೆಯಂತೆ, ಯುವಕನ ಗುಂಪಿನಲ್ಲಿ ಅನೇಕ ಹುಡುಗರು ಇದ್ದಾರೆ, ಅವರು ಸಂಚು ಮಾಡಿ ಹುಡುಗಿಯರನ್ನು ಮತಾಂತರಿಸುತ್ತಿದ್ದರು. ಈ ಹುಡುಗಿಯರನ್ನು ಬಲೆಗೆ ಬೀಳಿಸಲು ಹುಡುಗರು ಪ್ರತಿದಿನ ಹೊಸ ಕಾರುಗಳನ್ನು ತರುತ್ತಿದ್ದರು. ಕೆಲವೊಮ್ಮೆ ಮೋಟಾರ್ ಸೈಕಲ್, ಕೆಲವೊಮ್ಮೆ ಬುಲೆಟ್ ಹೀಗೆ ಬೇರೆ ಬೇರೆ ವಾಹನಗಳನ್ನು ತರುತ್ತಿದ್ದರು. ಒಂದುವೇಳೆ ನಾವು ಬ್ರಾಹ್ಮಣರ ಹುಡುಗಿಯನ್ನು ಮಾರಿದರೆ ನಮಗೆ 20 ಲಕ್ಷ ರೂಪಾಯಿಗಳು ಸಿಗುತ್ತವೆ ಮತ್ತು ನಿಮ್ಮನ್ನು (ದಲಿತರನ್ನು) ಮಾರಿದರೆ ಅವರಿಗೆ 10 ಲಕ್ಷ ರೂಪಾಯಿಗಳು ಸಿಗುತ್ತವೆ ಎಂದು ಹೇಳಿದ್ದರು, (ಅವರಿಗೆ ಈ ಹಣವನ್ನು ಯಾರು ನೀಡುತ್ತಿದ್ದರು? ಇದನ್ನು ಪತ್ತೆಹಚ್ಚಿ ಸಮಾಜಕ್ಕೆ ಬಹಿರಂಗಪಡಿಸಬೇಕು! – ಸಂಪಾದಕರು)

2. ಆ ಗ್ಯಾಂಗ್‌ನಲ್ಲಿದ್ದ ಮುಸ್ಲಿಮರು ಹುಡುಗಿಯರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದರು. ಈ ಯುವಕರು ಹುಡುಗಿಯರ ಮೇಲೆ ‘ಕಲಮಾ’ (ಅಲ್ಲಾಹನನ್ನು ಸ್ತುತಿಸುವ ಹೇಳಿಕೆಗಳು) ಪಠಿಸಲು ಮತ್ತು ಉಪವಾಸಗಳನ್ನು ಮಾಡಲು ಒತ್ತಡ ಹೇರಿದರು. ಇದಕ್ಕಾಗಿ ಅವರು ಈ ಹುಡುಗಿಯರ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಮಾಡುವುದಾಗಿ ಬೆದರಿಕೆ ಹಾಕಿದರು.

3. ಈ ಪ್ರಕರಣದಲ್ಲಿ ಪೊಲೀಸರು 3 ದೂರುಗಳನ್ನು ದಾಖಲಿಸಿದ್ದಾರೆ. ಪೊಲೀಸರು ಬಂಧಿಸಿದ ಆರೋಪಿಗಳಲ್ಲಿ ರಿಹಾನ ಮಹಮ್ಮದ, ಸೊಹೈಲ ಮನ್ಸೂರಿ, ಲುಕಮಾನ, ಅರ್ಮಾನ ಪಠಾಣ ಮತ್ತು ಸಾಹಿಲ ಖುರೇಷಿ ಸೇರಿದ್ದಾರೆ. ಪೊಲೀಸರು ಇನ್ನೂ ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಕೀಲರಿಂದ ಮುಸ್ಲಿಂ ಗುಂಪಿನ ಮೇಲೆ ಪುನಃ ಹಲ್ಲೆ

ಬಂಧಿತ ಆರೋಪಿಗಳನ್ನು ಪೊಲೀಸರು ಅಜ್ಮೇರ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ವಕೀಲರು ಅವರನ್ನು ಥಳಿಸಿದರು. ನಾಲ್ಕು ದಿನಗಳ ಹಿಂದೆಯೂ ಇದೇ ರೀತಿ ವಕೀಲರು ಆರೋಪಿಗಳನ್ನು ಥಳಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಇನ್ನೊಂದೆಡೆ, ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಸರ್ವ ಸಮಾಜ ಸಂಘರ್ಷ ಸಮಿತಿಯು ನಗರದಲ್ಲಿ ಬಂದ್ ಆಚರಿಸಿತು. ಈ ಪ್ರಕರಣದಲ್ಲಿ 7 ಆರೋಪಿಗಳಲ್ಲದೆ, 3 ಅಪ್ರಾಪ್ತ ಹುಡುಗರೂ ಆರೋಪಿಗಳಾಗಿದ್ದಾರೆ.

ಸಂಪಾದಕೀಯ ನಿಲುವು

ಕಳೆದ 4 ದಿನಗಳಿಂದ ಈ ಪ್ರಕರಣ ರಾಜಸ್ಥಾನದಲ್ಲಿ ಮತ್ತು ದೇಶದಲ್ಲಿ ಪ್ರಸಾರವಾಗುತ್ತಿದ್ದರೂ ಒಂದೇ ಒಂದು ಜಾತ್ಯತೀತ ರಾಜಕೀಯ ಪಕ್ಷ ಅಥವಾ ನಾಯಕರು ಇದರ ಬಗ್ಗೆ ಮಾತನಾಡಿಲ್ಲ; ಏಕೆಂದರೆ ಆರೋಪಿಗಳು ಮುಸಲ್ಮಾನರಾಗಿದ್ದು, ಸಂತ್ರಸ್ಥರು ಹಿಂದೂಗಳಾಗಿದ್ದಾರೆ !