ಮಹಾಕುಂಭಮೇಳದಲ್ಲಿ ಶ್ರೀ ಕಾಶಿ ಸುಮೇರಪೀಠದ ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಅವರಿಂದ ನಿರ್ಧಾರ
ಪ್ರಯಾಗರಾಜ – ಮಹಾಕುಂಭದಲ್ಲಿ, ಸಾಧು-ಸಂತರು ಭಾರತವನ್ನು ಸನಾತನ ರಾಷ್ಟ್ರವನ್ನಾಗಿ ಮಾಡುವತ್ತ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಅವರು ‘ಋಷಿ ಸಂವಿಧಾನ’ವನ್ನು ರಚಿಸಿದ್ದಾರೆ. ಇದರ ಅಡಿಯಲ್ಲಿ, ‘ಋಷಿ ಸಂವಿಧಾನ’ವನ್ನು ಆಧರಿಸಿ, ದೇಶದ ಐದೂವರೆ ಲಕ್ಷ ಹಳ್ಳಿಗಳನ್ನು ಸನಾತನ ಧರ್ಮದೊಂದಿಗೆ ಸಂಪರ್ಕಿಸಲು ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ. ಶ್ರೀ ಕಾಶಿ ಸುಮೇರಪೀಠದ ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಮಾತನಾಡುತ್ತಾ, “ನಾನು 2001 ರಿಂದ ‘ಋಷಿ ಸಂವಿಧಾನ’ಕ್ಕಾಗಿ ಕೆಲಸ ಮಾಡುತ್ತಿದ್ದೇ.” ಪ್ರಯಾಗರಾಜನಲ್ಲಿನ ಮಹಾಕುಂಭಮೇಳದಲ್ಲಿ ನಡೆದ 4 ಸಭೆಗಳ ನಂತರ, ಅದನ್ನು ಸಿದ್ಧಗೊಳಿಸಿ ಜನಸಾಮಾನ್ಯನೆದುರಿಗೆ ಮಂಡಿಸಲಾಗಿದೆ.
1. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದ 15 ಸಂತರ ತಂಡವು ವೈದಿಕ ಸನಾತನ ಶಾಸ್ತ್ರಗಳು ಮತ್ತು ಪುರಾಣಗಳನ್ನು ಆಧರಿಸಿ ಈ ಸಂವಿಧಾನವನ್ನು ರಚಿಸಿದೆ. ಇದರ ಅಡಿಯಲ್ಲಿ, ಪ್ರತಿಯೊಬ್ಬ ಸನಾತನ ವ್ಯಕ್ತಿಗೆ ಒಂದು ಗ್ರಾಮವನ್ನು ‘ಸನಾತನ ಗ್ರಾಮ’ವನ್ನಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಇದಕ್ಕಾಗಿ 300 ಸಂತರ ಗುಂಪನ್ನು ಸ್ಥಾಪಿಸಲಾಗಿದೆ. ಈ ಅಭಿಯಾನ ಆರಂಭ ಒಡಿಶಾ, ಪಂಜಾಬ ಮತ್ತು ಬಂಗಾಳ ರಾಜ್ಯಗಳ ಹಳ್ಳಿಗಳಿಂದ ಆಗಲಿದೆ.
2. ‘ಋಷಿ ಸಂವಿಧಾನ’ ಅಡಿಯಲ್ಲಿ 17 ಅಭಿಯಾನಗಳನ್ನು ನಡೆಸಲಾಗುವುದು. ಇವುಗಳಲ್ಲಿ ವಿಚಾರ ಕ್ರಾಂತಿ, ಆಧ್ಯಾತ್ಮಿಕ ಕ್ರಾಂತಿ, ಸಂಪರ್ಕ ಕ್ರಾಂತಿ, ಸೇವಾ ಕ್ರಾಂತಿ, ಧಾರ್ಮಿಕ ಜಾಗರಣೆ, ಸಾಂಸ್ಕೃತಿಕ ಕ್ರಾಂತಿ, ಗೋ ಕ್ರಾಂತಿ, ಯುವ ಕ್ರಾಂತಿ, ವ್ಯವಸ್ಥೆಯ ಕ್ರಾಂತಿ, ಮಹಿಳಾ ಜಾಗರಣೆ, ಸಮಾನತೆ ಕ್ರಾಂತಿ, ಶಿಕ್ಷಣ ಕ್ರಾಂತಿ, ಆರೋಗ್ಯ ಕ್ರಾಂತಿ, ವ್ಯಸನ ಮುಕ್ತಿ, ಸ್ವಾವಲಂಬನೆ, ಹಸಿರು ಕ್ರಾಂತಿ ಮತ್ತು ಸಾಮಾಜಿಕ ಸಾಮರಸ್ಯಗಳು ಸೇರಿವೆ.
3. ‘ಋಷಿ ಸಂವಿಧಾನ’ದ ಗುರಿ ವಿಶ್ವ ಶಾಂತಿಯನ್ನು ಸ್ಥಾಪಿಸುವುದಾಗಿದೆ ಮತ್ತು ಗೋವನ್ನು ಕೇಂದ್ರಸ್ಥಾನದಲ್ಲಿರಿಸಿಕೊಂಡು ವಿಶ್ವ ಶಾಂತಿ ಯೋಜನೆ ಸಿದ್ಧಪಡಿಸಲಾಗಿದೆ. ಜನಜಾಗೃತಿಯ ಮೂಲಕ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ತರುವುದಾಗಿದೆ. ಸುದರ್ಶನ ಚಕ್ರವನ್ನು ಕೇಂದ್ರಸ್ಥಾನದಲ್ಲಿರಿಸಿ ಕೊಳ್ಳುವ ಮೂಲಕ ಮಹಾಕ್ರಾಂತಿ ಆಂದೋಲನವನ್ನು ಸಿದ್ಧಪಡಿಸಲಾಗಿದೆ.