ತೆಲಂಗಾಣದ ಕಾಂಗ್ರೆಸ್ ಸರಕಾರದಿಂದ ಮುಸ್ಲಿಂ ಸರಕಾರಿ ನೌಕರರಿಗೆ ಉಡುಗೊರೆ
ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಕಾಂಗ್ರೆಸ್ ಸರಕಾರ ರಮಜಾನ್ ದಲ್ಲಿ ಮುಸ್ಲಿಂ ಸರಕಾರಿ ನೌಕರರಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಯನ್ನು ಬಿಡಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದ ಪ್ರಕಾರ, ಮುಸ್ಲಿಂ ಸರಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ನೌಕರರು, ಸರಕಾರಿ ಮಂಡಳಿಗಳು ಮತ್ತು ಸಾರ್ವಜನಿಕ ವಲಯದ ನೌಕರರು ರಮಜಾನ್ ತಿಂಗಳಲ್ಲಿ ಸಂಜೆ 4 ಗಂಟೆಗೆ ಕಚೇರಿಯಿಂದ ಹೋಗಲು ಸಾಧ್ಯವಾಗುತ್ತದೆ. ಈ ಸೌಲಭ್ಯ ಮಾರ್ಚ್ 2 ರಿಂದ ಮಾರ್ಚ್ 31 ರವರೆಗೆ ಅನ್ವಯವಾಗುತ್ತದೆ. ಆದಾಗ್ಯೂ, ಯಾವುದೇ ತುರ್ತು ಸೇವೆಯ ಅಗತ್ಯವಿದ್ದರೆ, ನೌಕರರು ಕಾಯಬೇಕಾಗುತ್ತದೆ.
ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇಂತಹ ಸವಲತ್ತುಗಳನ್ನು ಏಕೆ ನೀಡಲಾಗುವುದಿಲ್ಲ? – ಸ್ಥಳೀಯ ಭಾಜಪ ಶಾಸಕ ಟಿ. ರಾಜಾ ಸಿಂಗ
ತೆಲಂಗಾಣ ಸರಕಾರದ ಈ ನಿರ್ಣಯದ ಬಗ್ಗೆ ಭಾಗ್ಯನಗರದ ಭಾಜಪದ ಪ್ರಕರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ ಅವರು ಟೀಕಿಸಿದ್ದಾರೆ. ಅವರು, ಕಾಂಗ್ರೆಸ್ ಸರಕಾರ ರಮಜಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಸಡಿಲಿಕೆ ನೀಡಿದ ಸವಲತ್ತು ಹಿಂದೂ ಹಬ್ಬಗಳ ಸಮಯದಲ್ಲಿ ಏಕೆ ನೀಡಲಿಲ್ಲ ? ಎಂದು ಕೇಳಿದರು. ಮಹಾಶಿವರಾತ್ರಿ, ನವರಾತ್ರಿಗಳಂತಹ ಹಿಂದೂ ಹಬ್ಬಗಳ ಸಮಯದಲ್ಲಿ ಈ ಸವಲತ್ತುಗಳನ್ನು ಏಕೆ ನೀಡಲಿಲ್ಲ? ಈ ಹಿಂದಿನ ಮಾಜಿ ಮುಖ್ಯಮಂತ್ರಿ ಕೆ.ಸಿ.ಆರ್. ರಾವ್ ಸರಕಾರವನ್ನು ನಾವು 8ನೇ ನಿಜಾಮ್ ಎಂದು ಕರೆಯುತ್ತಿದ್ದೆವು; ಆದರೆ, ಈಗಿನ ಮುಖ್ಯಮಂತ್ರಿ ರೇವಂತ ರೆಡ್ಡಿ ಒಂಬತ್ತನೇ ನಿಜಾಮರಾಗಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ಸಿನಿಂದ ಬೇರಿನ್ನೇನು ನಿರೀಕ್ಷಿಸಬಹುದು? |