ನೇಪಾಳದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಸಂಸದ ಧವಲ ಶಮಶೇರ ರಾಣಾ ಇವರಿಂದ ಸಂಸತ್ತಿನಲ್ಲಿ ಆಗ್ರಹ !
ಕಾಠಮಾಂಡೂ (ನೇಪಾಳ) – ನೇಪಾಳದ ಸಂವಿಧಾನದಿಂದ ‘ಹಿಂದೂ ರಾಷ್ಟ್ರ’ ಈ ಸ್ಥಾನ ರದ್ದುಪಡಿಸಿ ಅದನ್ನು ‘ಜಾತ್ಯತೀತ ರಾಷ್ಟ್ರ’ ಘೋಷಿಸುವ ಹಿಂದೆ ಇರುವ ಅಮೆರಿಕಾದ ನಿಧಿಯ ವಿಚಾರಣೆ ನಡೆಸಲು ನೇಪಾಳದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಸಂಸದ ಧವಲ ಶಮಶೇರ ರಾಣಾ ಇವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ. ನೇಪಾಳವನ್ನು ಹಿಂದೂ ರಾಷ್ಟ್ರ ಎಂದು ನಾಶ ಮಾಡುವುದಕ್ಕಾಗಿ ಮತ್ತು ಮತಾಂತರಕ್ಕಾಗಿ ಅಮೇರಿಕಾದಿಂದ ೧೦ ಕೋಟಿ ಡಾಲರ್ಸ್ (೮೬೮ ಕೋಟೆ ರೂಪಾಯಿಕ್ಕಿಂತಲೂ ಹೆಚ್ಚಿನ ರೂಪಾಯಿ) ನಿಧಿ ಲಭ್ಯ ಇರುವ ದಾವೇ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸುವುದಕ್ಕಾಗಿ ಉನ್ನತ ಮಟ್ಟದ ವಿಚಾರಣ ಸಮಿತಿ ಸ್ಥಾಪನೆಗಾಗಿ ಅವರು ಆಗ್ರಹಿಸಿದ್ದಾರೆ. ಕಾನೂನಬದ್ಧ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ.
ಸಂಸದ ರಾಣಾ ಮಾತು ಮುಂದುವರೆಸಿ,
೧. ಯಾವ ನೇಪಾಳಿ ನಾಯಕರಿಗೆ ಅಮೇರಿಕಾ ನಿಧಿ ಸಿಕ್ಕಿದೆ, ಅದರ ಸತ್ಯ ದೇಶ ಮತ್ತು ಜಗತ್ತಿನ ಎದುರು ಬರಬೇಕು.
೨. ನೇಪಾಳದಲ್ಲಿನ ಸಾರ್ವಜನಿಕ ಚಳುವಳಿಯಲ್ಲಿ ಎಂದಿಗೂ ಹಿಂದೂ ರಾಷ್ಟ್ರ ಮುಗಿಸಿ ಅದನ್ನು ಜಾತ್ಯತೀತ ದೇಶ ಘೋಷಿಸಬೇಕು ಎಂದು ಆಗ್ರಹಿಸಲಾಗಿಲ್ಲ.
೩. ದೇಶದಲ್ಲಿನ ರಾಜಮನೆತನದ ಆಡಳಿತ ಮುಗಿದ ನಂತರ ಕೆಲವು ಪ್ರಮುಖ ಪಕ್ಷದ ನಾಯಕರು ಮಧ್ಯಂತರ ಸಂವಿದಾನದ ಘೋಷಣೆ ಮಾಡಿದ್ದರು, ಅದರಲ್ಲಿ ನೇಪಾಳವನ್ನು ‘ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಿದ್ದರು.
೪. ನೇಪಾಳ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎಂದು ಗುರುತಿಸಿದ್ದಾರೆ. ಆದ್ದರಿಂದ ಸಂಸತ್ತಿನಲ್ಲಿ ಜಾತ್ಯತೀತತೆ ನಿರಾಕರಿಸಿ ದೇಶವನ್ನು ಮತ್ತೆ ಹಿಂದೂ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸುತ್ತಿದ್ದೇವೆ.
ಸಂಪಾದಕೀಯ ನಿಲುವುಈ ನಿಧಿ ಕೇವಲ ಅಮೆರಿಕ ನೀಡಿದೆಯೇ ಅಥವಾ ಅದರಲ್ಲಿ ಚೀನಾ ಕೂಡ ಸೇರಿದೆ ಅಥವಾ ನೇಪಾಳದಲ್ಲಿ ಚೀನಾದ ಎಷ್ಟು ಹಸ್ತಕ್ಷೇಪ ಇದೆ, ಇದರ ವಿಚಾರಣೆ ಕೂಡ ನಡೆಯಬೇಕು ! |