ಕಾಂಗ್ರೆಸ್ಸಿನ ನಾಯಕ ಸ್ಯಾಮ್ ಪಿತ್ರೋದ ಇವರಿಗೆ ಚೀನಾದ ಬಗ್ಗೆ ಒಲವು !
ನವ ದೆಹಲಿ – ಕಾಂಗ್ರೆಸ್ಸಿನ ನಾಯಕ ಸ್ಯಾಮ್ ಪಿತ್ರೋದ ಇವರು ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಭಾರತ ಚೀನಾನನ್ನು ಶತ್ರು ಎಂದು ತಿಳಿಯುವುದು ನಿಲ್ಲಿಸಬೇಕು’, ಎಂದು ಅವರು ಹೇಳಿದ್ದಾರೆ. ಪಿತ್ರೋದ ಇವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಭೇಟಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಈ ಹೇಳಿಕೆ ನೀಡಿದರು. ‘ಪಿತ್ರೋದ ಇವರ ಹೇಳಿಕೆಯ ಜೊತೆಗೆ ಪಕ್ಷ ಸಹಮತವಿಲ್ಲ’, ಎಂದು ಕಾಂಗ್ರೆಸ್ ಹೇಳಿದೆ.
ಸ್ಯಾಮ್ ಪಿತ್ರೋದ ಇವರು,
೧. ಚೀನಾ ಏನು ವಂಚನೆ ಮಾಡಿದೆ ಇದು ನನಗೆ ತಿಳಿಯುತ್ತಿಲ್ಲ. ಚೀನಾ ನಮ್ಮನ್ನು ವಂಚಿಸಿರುವ ಅಂಶಗಳು ಬೆಳೆಸಿ ಹೇಳಲಾಗುತ್ತಿವೆ. ಇದರ ಕಾರಣ ಎಂದರೆ ಅಮೇರಿಕಾ ನಿರ್ಮಾಣ ಮಾಡಿರುವ ‘ಶತ್ರು’ ಕುರಿತಾದ ಪರಿಭಾಷೆಯಾಗಿದೆ !
೨. ನನಗೆ ಅನಿಸುವುದು, ಎಲ್ಲಾ ದೇಶಗಳು ಪರಸ್ಪರ ಸಹಕಾರ ಮಾಡುವ ಸಮಯ ಬಂದಿದೆ; ಚೀನಾ ನಮ್ಮ ನೆರೆಯ ದೇಶವಾಗಿದೆ, ಅದು ಪ್ರಗತಿ ಮಾಡುತ್ತಿದೆ, ಈ ವಿಷಯ ನಾವು ಸ್ವೀಕರಿಸಬೇಕು’, ಎಂದು ಹೇಳಿದರು.
ಭಾಜಪದಿಂದ ವಾಗ್ದಾಳಿ
ಭಾಜಪದ ನಾಯಕ ಸುಧಾಂಶೂ ತ್ರಿವೇದಿ ಇವರು ಪಿತ್ರೋದ ಇವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ‘ಸ್ಯಾಮ್ ಪಿತ್ರೋದ ಇವರು ಹೇಳಿಕೆ ನೀಡಿ ಭಾರತದ ಗೌರವಕ್ಕೆ ಮತ್ತು ಸಾರ್ವಭೌಮತ್ವದ ಮೇಲೆ ಆಘಾತ ಮಾಡಿದ್ದಾರೆ. ಅವರ ಪ್ರಕಾರ ಚೀನಾದ ಜೊತೆಗೆ ಭಾರತಕ್ಕೆ ಯಾವುದೇ ಮತಭೇದ ಇಲ್ಲ. ಅವರ ಹೇಳಿಕೆಯ ಪ್ರಕಾರ ಭಾರತ ಚೀನಾದ ವಿರುದ್ಧ ಆಕ್ರಮಕ ನೀತಿ ಹೊಂದುತ್ತಿದೆ. ಚೀನಾದ ಜೊತೆಗೆ ಕಾಂಗ್ರೆಸ್ಸಿನ ಹೊಂದಾಣಿಕೆ ಇದೆ, ಇದೇ ಇದರಿಂದ ತಿಳಿದು ಬರುತ್ತಿದೆ’, ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|