ಉತ್ತರಪ್ರದೇಶದ ಔರಂಗಾಬಾದನಲ್ಲಿ ೨೦ ವರ್ಷಗಳಿಂದ ಮುಸ್ಲೀಮರು ಮುಚ್ಚಿದ್ದ ಹಿಂದೂ ದೇವಸ್ಥಾನ ತೆರೆಯಲಾಯಿತು !

ಮಂತ್ರೋಚ್ಚಾರದೊಂದಿಗೆ ಪೂಜೆ

ಅಮೇಠಿ (ಉತ್ತರಪ್ರದೇಶ) – ಅಮೇಠಿ ಜಿಲ್ಲೆಯ ಔರಂಗಾಬಾದ್ ಗ್ರಾಮದಲ್ಲಿರುವ ೧೨೦ ವರ್ಷ ಪ್ರಾಚೀನ ಪಂಚ ಶಿಖರ ಶಿವ ಮಂದಿರದಲ್ಲಿ ೨೦ ವರ್ಷಗಳ ನಂತರ ಪೂಜೆ ನಡೆಯಿತು. ಫೆಬ್ರುವರಿ ೧೬ ರಂದು ಸರಕಾರ ಮತ್ತು ಪೊಲೀಸರ ಬಂದೋಬಸ್ತಿನಲ್ಲಿ ವೈದಿಕ ಮಂತ್ರಜಪದ ಮೂಲಕ ಪೂಜೆ ನಡೆಯಿತು. (ಹಿಂದುಗಳಿಗೆ ಅವರ ದೇವಸ್ಥಾನ ಹಿಂಪಡೆಯುವದಕ್ಕಾಗಿ ಸರಕಾರ ಮತ್ತು ಪೊಲೀಸರ ಸಹಾಯ ಪಡೆಯಬೇಕಾಗುತ್ತದೆ ಆದರೆ ಮುಸಲ್ಮಾನರು ಹಿಂದುಗಳ ದೇವಸ್ಥಾನಗಳು ಸುಲಭವಾಗಿ ಕಬಳಿಸುತ್ತಾರೆ, ಇದು ಹಿಂದುಗಳಿಗೆ ಲಚ್ಚಾಸ್ಪದ ! – ಸಂಪಾದಕರು) ಈ ಸಮಯದಲ್ಲಿ ಭಕ್ತರ ದೊಡ್ಡ ಜನಜಂಗುಳಿಯ ನೆರೆದಿತ್ತು. ಸಂಪೂರ್ಣ ಪರಿಸರ ‘ಹರ ಹರ ಮಹಾದೇವದ’ ಜಯ ಘೋಷದಲ್ಲಿ ಪ್ರತಿಧ್ವನಿಸಿತು.

೧. ಈ ದೇವಸ್ಥಾನ ೧೨೦ ವರ್ಷಗಳ ಹಿಂದೆ ಜೆಟುರಾಮ ಇವರು ಕಟ್ಟಿಸಿದರು; ಆದರೆ ಕಳೆದ ೨೦ ವರ್ಷಗಳಿಂದ ಇದರ ಮೇಲೆ ಮುಸಲ್ಮಾನರು ಅತಿಕ್ರಮಣ ಮಾಡಿದ್ದರು ಮತ್ತು ಅದರಿಂದ ಅದು ಮುಚ್ಚಿತ್ತು. ಪಂಚ ಶಿಖರ ಶಿವ ದೇವಸ್ಥಾನದ ಮುಕ್ತಿಗಾಗಿ ಗ್ರಾಮಸ್ಥರು ಸರಕಾರಕ್ಕೆ ಆಗ್ರಹಿಸಿದ್ದರು. ಅದರ ನಂತರ ಕ್ರಮ ಕೈಗೊಳ್ಳುತ್ತಾ ದೇವಸ್ಥಾನ ಭಕ್ತರಿಗಾಗಿ ಮತ್ತೆ ತೆರೆದರು.

೨. ಗ್ರಾಮಸ್ಥರ ಪ್ರಕಾರ, ಈ ದೇವಸ್ಥಾನ ಹಿಂದೆ ಅರ್ಚಕ ಗಣೇಶ ತಿವಾರಿ ಮತ್ತು ಅವರ ಕುಟುಂಬದ ಉಸ್ತುವಾರಿಯಲ್ಲಿ ಇತ್ತು; ಆದರೆ ೨ ದಶಕಗಳ ಹಿಂದೆ ಅವರಿಗೆ ಸ್ಥಳಾಂತರ ಮಾಡಲು ಅನಿವಾರ್ಯ ಗೊಳಿಸಿದರು. ಅದರ ನಂತರ ಮುಸಲ್ಮಾನರು ದೇವಸ್ಥಾನದ ಮೇಲೆ ಅತಿಕ್ರಮಣ ಮಾಡಿದರು ಮತ್ತು ಪೂಜೆ ನಿಲ್ಲಿಸಿದರು. ಈಗ ಸರಕಾರಕ್ರಮ ಕೈಗೊಂಡಿರುವುದರಿಂದ ಭಕ್ತರಿಗಾಗಿ ದೇವಸ್ಥಾನ ಮತ್ತೆ ತೆರೆದರು.

ಇಂತಹ ಅನೇಕ ದೇವಸ್ಥಾನಗಳು ಮುಚ್ಚಿರುವುದು ಅಥವಾ ಅತಿಕ್ರಮಣ ಮಾಡಿದ್ದಾರೆ

ಸ್ಥಳೀಯರ ಅಭಿಪ್ರಾಯದಂತೆ, ಅಮೇಠಿ ಮತ್ತು ಅದರ ಸುತ್ತಮುತ್ತದ ಪ್ರದೇಶದಲ್ಲಿ ಇಂತಹ ಅನೇಕ ಐತಿಹಾಸಿಕ ಧಾರ್ಮಿಕ ಸ್ಥಳಗಳಿವೆ, ಅವು ವಿವಿಧ ಕಾರಣದಿಂದ ಮುಚ್ಚಿದೆ ಅಥವಾ ಅತಿಕ್ರಮಣಕ್ಕೆ ಬಲಿಯಾಗಿದ್ದಾವೆ. ಸರಕಾರವು ಇತರ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಾಪಾಡಬೇಕು, ಎಂದು ಅವರು ಮನವಿ ಮಾಡಿದ್ದಾರೆ. (ಈ ರೀತಿಯ ಆಗ್ರಹ ಏಕೆ ಮಾಡಬೇಕಾಗುತ್ತದೆ ? ಸರಕಾರ ಸ್ವತಃ ಇಂತಹ ದೇವಸ್ಥಾನಗಳನ್ನು ಹುಡುಕಿ ಅವುಗಳನ್ನು ಏಕೆ ತೆರೆಯುತ್ತಿಲ್ಲ ?- ಸಂಪಾದಕರು)