‘ಲವ್ ಜಿಹಾದ್’ ದ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಕ್ಕಾಗಿ ಮಹಾರಾಷ್ಟ್ರ ಸರಕಾರದಿಂದ ೭ ಸದಸ್ಯರ ಸಮಿತಿ ಸ್ಥಾಪನೆ !

ಆದಷ್ಟು ಬೇಗನೆ ಕಾನೂನು ರಚನೆ

ಮುಂಬಯಿ – ‘ಲವ್ ಜಿಹಾದ್’ ಪ್ರಕರಣಕ್ಕೆ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರದಿಂದ ಫೆಬ್ರುವರಿ ೧೪ ರಂದು ರಾಜ್ಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ೭ ಸದಸ್ಯರ ಸಮಿತಿ ಸ್ಥಾಪನೆ ಮಾಡಲಾಗಿದೆ. ಶೀಘ್ರದಲ್ಲೇ ಈ ಸಂದರ್ಭದಲ್ಲಿ ಕಾನೂನು ರೂಪಿಸಲಾಗುವುದು. ಮೈತ್ರಿ ಸರಕಾರವು ಇದಕ್ಕೆ ಸಂಬಂಧಿತ ಒಂದು ಸರಕಾರಿ ನಿರ್ಣಯ ತೆಗೆದುಕೊಂಡಿದೆ. ಈ ಸಮಿತಿಯಲ್ಲಿನ ಸದಸ್ಯರ ನೇತೃತ್ವ ಪೊಲೀಸ್ ಅಧಿಕಾರಿ ವಹಿಸಿಕೊಳ್ಳುವರು. ಮಹಿಳೆ ಮತ್ತು ಬಾಲವಿಕಾಸ, ಅಲ್ಪಸಂಖ್ಯಾತ ವಿಕಾಸ, ಕಾನೂನು ಮತ್ತು ನ್ಯಾಯ, ಸಾಮಾಜಿಕ ನ್ಯಾಯ ಮತ್ತು ವಿಶೇಷ ಸಹಾಯ ಇಲಾಖೆಯ ತಲಾ ಒಂದು ಸದಸ್ಯ ಹಾಗೂ ಗೃಹ ಇಲಾಖೆಯ ಇಬ್ಬರು ಸದಸ್ಯರು ಸಮಿತಿಯಲ್ಲಿ ಇರುವರು. ಮಹಾರಾಷ್ಟ್ರದಲ್ಲಿ ಏನಾದರೂ ಈ ರೀತಿಯ ಕಾನೂನು ರಚನೆ ಆದರೆ, ಇಂತಹ ಕಾನೂನು ರಚನೆ ಮಾಡುವ ಮಹಾರಾಷ್ಟ್ರ ಇದು ದೇಶದಲ್ಲಿನ ೧೦ ನೇ ರಾಜ್ಯವಾಗುವುದು. ಈ ರೀತಿಯ ಕಾನೂನು ಈ ಮೊದಲು ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿತು.

‘ಬಲವಂತದ ಮತಾಂತರ’, ಅಂತರ್ಧರ್ಮೀಯ ವಿವಾಹ ಮೂಲಕ ನಡೆಯುವ ಮತಾಂತರ (ಲವ್ ಜಿಹಾದ್) ತಡೆಯುವುದಕ್ಕಾಗಿ ಆದಷ್ಟು ಬೇಗನೆ ಕಾನೂನು ರೂಪಿಸುವೆವು’, ಎಂದು ಮುಖ್ಯಮಂತ್ರಿ ದೇವೇಂದ್ರ ಪಡಣವೀಸ ಇವರು ಈ ಹಿಂದೆ ಹೇಳಿದ್ದರು.

ಏನು ಇದು ಆಡಳಿತ ನಿರ್ಧಾರ ?

ಆಡಳಿತ ನಿರ್ಧಾರದಲ್ಲಿ, ರಾಜ್ಯದಲ್ಲಿನ ವಿವಿಧ ಸಂಘಟನೆ ಮತ್ತು ಕೆಲವು ನಾಗರೀಕರು ಲವ್ ಜಿಹಾದ್ ಹಾಗೂ ವಂಚನೆ ನಡೆಸಿ ಅಥವಾ ಬಲವಂತವಾಗಿ ನಡೆಸಿರುವ ಮತಾಂತರ ತಡೆಯುವದಕಾಗಿ ಕಾನೂನು ರಚನೆಯ ಬಗ್ಗೆ ಮನವಿ ಸಲ್ಲಿಸಿದ್ದರು. ಭಾರತದಲ್ಲಿನ ಕೆಲವು ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ರಚಿಸಲಾಯಿತು. ಅದರಂತೆಯೇ ಮಹಾರಾಷ್ಟ್ರದಲ್ಲಿ ಪ್ರಸ್ತುತ ಪರಿಸ್ಥಿತಿಯ ಅಭ್ಯಾಸ ನಡೆಸಿ ‘ಲವ್ ಜಿಹಾದ್’ದ ವಿರೋಧದಲ್ಲಿ ಕಾನೂನು ರಚಿಸಲು ವಿಶೇಷ ಸಮಿತಿ ಸ್ಥಾಪನೆ ಮಾಡುವುದು ಇದು ಆಡಳಿತದ ವಿಚಾರಧೀನ ಆಗಿರುತ್ತದೆ. ಅದರಂತೆ ಪೊಲೀಸ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸ್ಥಾಪನೆ ಮಾಡಲಾಗಿದೆ.

ಸಮಿತಿಯ ಕಾರ್ಯ ಪದ್ಧತಿ ಹೇಗೆ ಇರುವುದು ?

ಮಹಾರಾಷ್ಟ್ರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಅಭ್ಯಾಸ ನಡೆಸಿ ಲವ್ ಜಿಹಾದ್ ಮತ್ತು ವಂಚನೆ ನಡೆಸಿ ಅಥವಾ ಬಲವಂತದಿಂದ ನಡೆಸಿರುವ ಮತಾಂತರ ಇದಕ್ಕೆ ಸಂಬಂಧಿತ ಪಡೆದಿರುವ ದೂರಿನ ಬಗ್ಗೆ ಉಪಾಯ ಯೋಜನೆ ಸೂಚಿಸುವುದು, ಕಾನೂನು ರೀತಿಯಲ್ಲಿ ವಿಷಯವನ್ನು ಪರಿಶೀಲಿಸುವುದು ಮತ್ತು ಇತರ ರಾಜ್ಯದಲ್ಲಿನ ಪ್ರಸ್ತುತ ಕಾನೂನಿನ ಅಭ್ಯಾಸ ನಡೆಸಿ ಕಾನೂನಿಗೆ ಸಂಬಂಧಿತ ಶಿಫಾರಸು ಮಾಡುವುದು, ಇದು ಸಮಿತಿಯ ಕಾರ್ಯ ಪದ್ಧತಿ ಇರುವುದು.

ಸಂಪಾದಕೀಯ ನಿಲುವು

ಮಹಾರಾಷ್ಟ್ರ ಸರಕಾರದ ಶ್ಲಾಘನೀಯ ನಿರ್ಣಯ ! ‘ಲವ್ ಜಿಹಾದ್’ ತಡೆಯಲು ಶೀಘ್ರದಲ್ಲೇ ಕಾನೂನು ರೂಪಿಸಿ ಈ ಪ್ರಕರಣದಲ್ಲಿ ಬೆಂದಿರುವ ಹಿಂದೂ ಯುವತಿಯರಿಗೆ ನ್ಯಾಯ ದೊರಕಿಸಿ ಕೊಡಬೇಕು, ಇದೇ ಅಪೇಕ್ಷೆ !

ಸರಕಾರದ ನಿರ್ಣಯದ ನಂತರ ಸಮಾಜವಾದಿ ಪಕ್ಷದ ಶಾಸಕ ರಯಿಸ್ ಶೇಖ ಇವರ ಕಿರುಚಾಟ !

‘ಕೇವಲ ರಾಜಕೀಯ ಅಂಶಕ್ಕಾಗಿ ‘ಜಿಹಾದ್’ ಪದ ಸೇರಿಸಿದ್ದಾರೆ !’ – ಸಮಾಜವಾದಿ ಪಕ್ಷದ ಶಾಸಕ ರಯಿಸ್ ಶೇಖ

ಮೈತ್ರಿ ಸರಕಾರದ ಈ ನಿರ್ಣಯದ ಬಗ್ಗೆ ಸಮಾಜವಾದಿ ಪಕ್ಷದ ಶಾಸಕ ರಯಿಸ್ ಖಾನ್ ಇವರು ವಿರೋಧಿಸಿದ್ದಾರೆ. ‘ಲವ್ ಜಿಹಾದ್’ದ ನಿಖರವಾಗಿ ಎಷ್ಟು ಪ್ರಕರಣಗಳು ರಾಜ್ಯದಲ್ಲಿ ಘಟಿಸಿವೆ, ಅದರ ಯಾವುದೇ ಅಂಕಿ ಅಂಶ ರಾಜ್ಯ ಸರಕಾರದ ಬಳಿ ಇಲ್ಲ. ಕೇವಲ ಇದು ರಾಜಕೀಯ ಸೂತ್ರಕ್ಕಾಗಿ ಇದಕ್ಕೆ ‘ಜಿಹಾದ’ ಎಂದು ಹೆಸರು ಜೋಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸರಕಾರದ ವತಿಯಿಂದ, ರಾಜ್ಯದಲ್ಲಿ ಲವ್ ಜಿಹಾದದ ೧ ಲಕ್ಷ ಪ್ರಕರಣಗಳು ಇವೆ, ಆದರೆ ಒಂದು ಪ್ರಕರಣದಲ್ಲಿ ಕೂಡ ಪೊಲೀಸರಲ್ಲಿ ದೂರು ದಾಖಲಾಗಿಲ್ಲ. ಈ ದಾವೇಯನ್ನು ದೃಢಕರಿಸುವ ಒಂದು ಕೂಡ ಸಾಕ್ಷಿ ಬೆಳಕಿಗೆ ಬಂದಿಲ್ಲ. ಈ ಅಂಶ ನಾನು ವಿಧಾನಸಭೆಯಲ್ಲಿ ಮಂಡಿಸುವೆ’, ಎಂದು ಶೇಖ ಇವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಲವ್ ಜಿಹಾದ್’ ಯಾರು ನಡೆಸುತ್ತಿದ್ದಾರೆ, ಇದು ಎಲ್ಲರಿಗೆ ತಿಳಿದಿದೆ ಮತ್ತು ಇದರ ಸಂದರ್ಭದಲ್ಲಿನ ಘಟನೆಗಳು ದಿನೇ ದಿನೇ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗುತ್ತಿರುವಾಗ ಶಾಸಕ ರಯಿಸ್ ಶೇಖ ಇವರ ಹೇಳಿಕೆ ಎಂದರೆ ‘ಲವ್ ಜಿಹಾದ್’ಗೆ ಬೆಂಬಲ ನೀಡುವ ಪ್ರಯತ್ನವಾಗಿದೆ !