ಸನಾತನದ ದೀಕ್ಷೆ ಸ್ವೀಕರಿಸುವುದರಲ್ಲಿ ಮಂಚೂಣಿಯಲ್ಲಿರುವ ಅಮೇರಿಕಾದ ಭಕ್ತರು !

ಪ್ರಯಾಗರಾಜ (ಉತ್ತರಪ್ರದೇಶ) – ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಫೆಬ್ರುವರಿ ೧೧ ರಂದು ೬೮ ವಿದೇಶಿ ಭಕ್ತರು ವಿಧಿವತ್ತಾಗಿ ‘ಸನಾತನ ಧರ್ಮ’ ಸ್ವೀಕರಿಸಿದರು. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಂಖ್ಯೆ ಅಮೆರಿಕಿ ಭಕ್ತರದಾಗಿತ್ತು. ಹಿಂದೂ ಧರ್ಮವನ್ನು ಸ್ವೀಕರಿಸುವವರಲ್ಲಿ ಅಮೆರಿಕಾದ ೪೧, ಆಸ್ಟ್ರೇಲಿಯಾದ ೭, ಸ್ವಿಜರ್ಲ್ಯಾಂಡ್ ನ ೪, ಫ್ರಾನ್ಸ್ ನ ೩, ಬೆಲ್ಜಿಯಂ ನ ೩, ಬ್ರಿಟನ್ ನ ೨, ಐರ್ಲ್ಯಾಂಡ್ ನ ೨, ಕೆನಡಾದ ೨, ಮತ್ತು ನಾರ್ವೆ, ಜಪಾನ್, ಇಟಲಿ ಮತ್ತು ಜರ್ಮನಿ ಈ ದೇಶದ ತಲಾ ಒಬ್ಬ ನಾಗರೀಕರ ಸಮಾವೇಶವಿದೆ. ಮಹಾಕುಂಭ ಕ್ಷೇತ್ರ ಸೆಕ್ಟರ್ ೧೭ ರಲ್ಲಿ ಇರುವ ಶಕ್ತಿಧಾಮದಲ್ಲಿ ವೈದಿಕ ಮಂತ್ರೋಚ್ಛಾರದಲ್ಲಿ ಈ ಎಲ್ಲರೂ ಗುರು ದೀಕ್ಷೆ ಪಡೆದರು.

ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿ ಇವರು ಈ ವಿದೇಶಿ ಭಕ್ತರಿಗೆ ಶಾಶ್ವತ ಸನಾತನ ಶಾಂತಿಯ ಮಾರ್ಗ ತೋರಿಸುತ್ತಿದ್ದಾರೆ. ಅವರು ಮಾತನಾಡಿ, ‘ಜೀವನದಲ್ಲಿ ಶಾಂತಿ ಹುಡುಕುವ ವಿದೇಶಿ ಭಕ್ತರು ಸನಾತನ ಧರ್ಮದಲ್ಲಿ ಬಂದು ಶಾಂತಿ ಅನುಭವಿಸುತ್ತಿದ್ದಾರೆ. ಸನಾತನದ ಮಾರ್ಗಕ್ಕೆ ಬಂದ ನಂತರ ಅವರ ಮುಖದಲ್ಲಿ ಹಾಸ್ಯ ಇದೆ. ಅವರ ಮನಸ್ಸು ಶಾಂತವಾಗಿದೆ. ಅವರ ಮನಸ್ಸಿನಲ್ಲಿನ ಗೊಂದಲ ಮುಗಿದಿದೆ. ಅವರಿಗೆ ಈಗ ಜೀವನದ ಮಾರ್ಗ ದೊರೆತಿದೆ. ‘ಕೊರಳಿನಲ್ಲಿ ತುಳಸಿಯ ಮಾಲೆ ಮತ್ತು ಕೈಯಲ್ಲಿ ಹೂಗುಚ್ಛ ತೆಗೆದುಕೊಂಡು ಜಗದ್ಗುರು ಸಾಯಿ ಮಾ ಲಕ್ಷ್ಮೀದೇವಿ ಇವರಿಂದ ದೀಕ್ಷೆ ಪಡೆದ ನಂತರ ಈ ವಿದೇಶಿ ಭಕ್ತರ ಮುಖದಲ್ಲಿ ಒಂದು ತೇಜ ಕಂಡು ಬಂದಿತು.

ಅಮೇರಿಕಾದಲ್ಲಿ ‘ಪ್ರಾಪರ್ಟಿ ಮ್ಯಾನೇಜ್ಮೆಂಟ್’ನಲ್ಲಿ ಕೆಲಸ ಮಾಡುವ ಸುಸಾನ್ ಮುಚನಿಜ್, ಆಸ್ಟ್ರೇಲಿಯಾದಲ್ಲಿ ಆಧ್ಯಾತ್ಮಿಕ ಚಿಕಿತ್ಸೆ ನೀಡುವ ಅಧಿಷ್ಟಾತ ಹಿಂಡರು-ಹಾಕಿನ್ಸ್, ಕೆನಡಾದಲ್ಲಿನ ಮಾರ್ಕೆಟಿಂಗ್ ಮ್ಯಾನೇಜರ್ ನತಾಲಿಯ ಇಜೋಟೋವಾ, ಇಂಡೋನೇಷಿಯಾದಲ್ಲಿನ ಮಾನಸೋಪಚಾರ ತಜ್ಞ ಜಸ್ಟಿನ್ ವಾಟ್ಸನ್, ಬೆಲ್ಜಿಯಂನ ಪ್ರಶಾಸಕ ಇಂಗೆ ತಿಜಗತ್ ಇವರು ದೀಕ್ಷೆ ಪಡೆದವರು.

ವಿದೇಶಿ ಭಕ್ತರ ಪ್ರತಿಕ್ರಿಯೆ
ಕತ್ತಲಲ್ಲಿ ಪ್ರಕಾಶದ ಅನುಭವ ಬರುತ್ತಿದೆ ! – ಮೈಕಲ್ ಕೆನೆಡಿ, ಡೇಟಾ ಸೈಂಟಿಸ್ಟ್, ಅಮೆರಿಕ
ಹಿಂದೆ ನನ್ನ ಜೀವನದಲ್ಲಿ ಸ್ಪಷ್ಟತೆ ಇರಲಿಲ್ಲ. ನಾನು ಗೊಂದಲದಲ್ಲಿ ಇದ್ದೆ. ಏನು ಮಾಡಬೇಕು ಎಂದು ತಿಳಿಯುತ್ತಿರಲಿಲ್ಲ; ಆದರೆ ಜಗದ್ಗುರು ಸಾಯಿ ಮಾ ಇವರ ಸಂಪರ್ಕಕ್ಕೆ ಬಂದ ನಂತರ ನನಗೆ ನನ್ನ ಜೀವನದಲ್ಲಿ ಪ್ರಕಾಶದ ಅರಿವಾಗುತ್ತಿದೆ. ಗುರುದೀಕ್ಷೆ ಪಡೆದ ನಂತರ ನನಗೆ ಬಹಳ ಒಳ್ಳೆಯದನಿಸಿತು.
ನನಗೆ ಕೇವಲ ಸನಾತನ ಧರ್ಮದಲ್ಲಿ ಶಾಂತಿ ಸಿಕ್ಕಿದೆ ! – ನತಾಶಾ ಕೋರ್ಟೇಸ್, ಛಾಯಾಗ್ರಾಹಕ, ರಷ್ಯಾ
ಜಗತ್ತಿನಾದ್ಯಂತ ಸುತ್ತಾಡಿದರು ಕೂಡ ನನಗೆ ಕೇವಲ ಸನಾತನ ಧರ್ಮದಲ್ಲಿ ಶಾಂತಿ ದೊರೆತಿದೆ. ಹಿಂದೆ ನಾನು ಸಂಪೂರ್ಣವಾಗಿ ವಾಸ್ತವವಾದಿ ಆಗಿದ್ದೆ; ಆದರೆ ಈಗ ದೀಕ್ಷೆ ಪಡೆದ ನಂತರ ನನಗೆ ಆನಂದ ಅನಿಸುತ್ತಿದೆ. ಈ ಅನುಭವದ ಒಂದು ಭಾಗ ಆಗಿರುವುದರಿಂದ ನನ್ನ ಜೀವನ ಧನ್ಯವಾಗಿದೆ.
‘ಸ್ವ’ನ ಶೋಧ ನಡೆಸುವ ಮಾರ್ಗದಿಂದ ಹೋಗುವಾಗ ನಾವು ಸಕಾರಾತ್ಮಕತೆ ಅನುಭವಿಸುತ್ತೇವೆ ! – ಮೇಗನ್, ವಿದ್ಯಾರ್ಥಿನಿ, ಅಮೆರಿಕ
ಗುರು ದೀಕ್ಷೆ ಇದು ನನಗಾಗಿ ನಂಬಲಾರದಂತಹ ಅನುಭವವಾಗಿತ್ತು. ಯಾವಾಗ ನಾನು ‘ಸ್ವ’ನ ಶೋಧ ತೆಗೆದುಕೊಳ್ಳುವ ಮಾರ್ಗದಲ್ಲಿ ಸಂಪೂರ್ಣವಾಗಿ ಸಮರ್ಪಣೆಯಿಂದ ಮುಂದೆ ಹೋಗುತ್ತೇನೆ, ಆಗ ಆ ಮಾರ್ಗ ನಮಗೆ ಹೆಚ್ಚು ಶಾಂತಿ ಸಕಾರಾತ್ಮಕ ಕತೆ ಮತ್ತು ಆತ್ಮಶಕ್ತಿ ನೀಡುತ್ತದೆ.
ಸಂಪಾದಕೀಯ ನಿಲುವುಜಗತ್ತಿನಾದ್ಯಂತ ಇರುವ ವಿದೇಶಿ ಜನರಿಗೆ ಭಾರತದ ಬಗ್ಗೆ ಪ್ರೀತಿ ಅನಿಸುತ್ತದೆ, ಅದು ಭಾರತದಲ್ಲಿನ ಸಂತರು ಕಲಿಸುತ್ತಿರುವ ಸಾಧನೆ ಮತ್ತು ಆಧ್ಯಾತ್ಮದಿಂದಾಗಿ ಹೊರತು ರಾಜಕಾರಣದಿಂದ ಅಲ್ಲ ಅಥವಾ ಆಡಳಿತದಿಂದಲ್ಲ !’, ಹೀಗೆ ನಮ್ಮ ಸಂಸ್ಥಾಪಕ ಸಂಪಾದಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೇ ಇವರು ಹೇಳಿದ್ದಾರೆ. ಈ ಘಟನೆ ಅದರ ತಾಜಾ ಉದಾಹರಣೆ ! |