ಜಾತಿಯಿಂದಾಗಿ ಅನ್ಯಾಯ ಆಗುತ್ತಿದೆ ಎಂದು ಆರೋಪ
ಝಾನ್ಸಿ (ಉತ್ತರಪ್ರದೇಶ) – ಇಲ್ಲಿಯ ಪೊಲೀಸ್ ಅಧಿಕಾರಿ ಮೋಹಿತ ಯಾದವ ಇವರು ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದರಿಂದ ಅಮಾನತುಗೊಳಿಸಲಾಯಿತು. ಇದರಿಂದ ಅವರ ಮೇಲೆ ಜಾತೀಯ ಕುರಿತು ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವರು ಇಲ್ಲಿಯ ಎಲಿಟ್ ವೃತ್ತದಲ್ಲಿ ಮನೆಯಲ್ಲಿನ ದೇವತೆಗಳ ಎಲ್ಲಾ ಚಿತ್ರಗಳು ಹಾಗೂ ಮೂರ್ತಿಗಳು, ಪೂಜೆಯ ಸಾಮಗ್ರಿ ಹೊರತಂದು ಹಿಂದೂ ಧರ್ಮದ ತ್ಯಾಗ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ
೧. ಮೋಹಿತ ಯಾದವ ಇವರು, ನಾನು ಜಾತಿಯತೆ ಇರುವ ಧರ್ಮವನ್ನು ತ್ಯಜಿಸಿದ್ದೇನೆ. ಜಾತಿಯ ಹೆಸರಿನಲ್ಲಿ ಬೇರೆ ವ್ಯಕ್ತಿಯ ಜೀವನವನ್ನು ಜೀವನ ಎಂದು ನಂಬುವುದಿಲ್ಲ. ಜಾತಿಯ ಹೆಸರಿನಲ್ಲಿ ದೇವತೆಯ ಆಶೀರ್ವಾದ ದೊರೆಯುತ್ತದೆ, ಈ ರೀತಿಯ ಧರ್ಮ ತ್ಯಜಿಸಲಾಗಿದೆ. ಕಳೆದ ೩ ತಿಂಗಳಿಂದ ನನ್ನ ಶೋಷಣೆ ಆಗುತ್ತಿದೆ. ನನ್ನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ನನ್ನನ್ನು ಅಮಾನತುಗೊಳಿಸಲಾಗಿದೆ. ಎಲ್ಲಾ ವಿಷಯ ಕೇವಲ ಜಾತಿಯ ಹೆಸರಿನಲ್ಲಿ ಘಟಿಸುತ್ತಿವೆ. ಒಂದು ವಿಶಿಷ್ಟ ಜಾತಿಯ ಜನರು ಮೇಲಿನ ಸ್ಥಾನದಲ್ಲಿ ಕುಳಿತಿದ್ದಾರೆ. ನನ್ನ ದೃಷ್ಟಿಯಿಂದ ಅವರು ತಾರಕಾ ಮತ್ತು ಪುತನಾ (ರಾಕ್ಷಸ) ಆಗಿದ್ದಾರೆ.
೨. ೧೦ ದಿನದ ಹಿಂದೆ ಮೋಹಿತ ಯಾದವ ಇವರು ಎಲಿಟ್ ವೃತ್ತದಲ್ಲಿ ಚಹಾದ ಅಂಗಡಿ ಇಟ್ಟು ಚಹಾ ಮಾರಿ ನಿಷೇಧ ವ್ಯಕ್ತಪಡಿಸಿದ್ದಾರೆ. ಅಮಾನತಗೊಳಿಸಿದ ನಂತರ ಯಾದವ ಇವರ ಮೇಲಿನ ಆರೋಪದ ವಿಚಾರಣೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಯಾರಿಗೆ ಹಿಂದೂ ಧರ್ಮದ ಮಹತ್ವ ತಿಳಿದಿಲ್ಲ, ಅವರೇ ಕ್ಷುಲ್ಲಕ ಕಾರಣದಿಂದ ಈ ರೀತಿಯ ಆತ್ಮಘಾತಿ ಕೃತಿ ಮಾಡಲು ಹಿಂಜರಿಯುವುದಿಲ್ಲ. ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ ! |