|
ಮಧುರೈ (ತಮಿಳುನಾಡು) – ಪ್ರಾಚೀನ ಮತ್ತು ಪವಿತ್ರ ತಿರುಪರಾನುಕುಂದ್ರಂ ಬೆಟ್ಟದ ಮುರುಗನ್ ದೇವಸ್ಥಾನದ ಬಳಿಯ ಪಳಂಗನಾಥಂ ಜಂಕ್ಷನ್‌ನಲ್ಲಿ ‘ಭಾರತ್ ಹಿಂದೂ ಮುನ್ನಾನಿ’ (‘ಹಿಂದೂ ಫ್ರಂಟ್’ನ ಸಂಘಟನೆ) ಪ್ರತಿಭಟನೆ ನಡೆಸಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಮಧ್ಯಂತರ ಆದೇಶ ನೀಡಿದೆ. ಪೊಲೀಸರು ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಕೆಲವು ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ಜಂಟಿ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಜಿ. ಜಯಚಂದ್ರನ್ ಮತ್ತು ಪೂರ್ಣಿಮಾ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ. ಈ ಆದೇಶದಲ್ಲಿ, ರಾಜ್ಯ ಸರಕಾರವು ಇನ್ನೂ ಉತ್ತಮವಾಗಿ ನಿರ್ವಹಿಸಬಹುದಿತ್ತು. ಈ ಬಗ್ಗೆ ‘ಭಾರತ್ ಹಿಂದೂ ಮುನ್ನಾನಿ’ಯ ಅಧ್ಯಕ್ಷ ಆರ್.ಡಿ. ಪ್ರಭು ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದರು.
1. ‘ತಿರುಪರಂಕುಂದ್ರಂ ಬೆಟ್ಟ’ದಲ್ಲಿರುವ ಮುರುಗನ್ ದೇವಸ್ಥಾನದ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4 ರಂದು ಪ್ರತಿಭಟನೆಯನ್ನು ಪ್ರಸ್ತಾಪಿಸಲಾಗಿತ್ತು. ತಿರುಪರಂಕುಂದ್ರಂನ ಪ್ರಾಚೀನ ಪವಿತ್ರ ಬೆಟ್ಟದ ಮೇಲೆ ಒಂದು ದೇವಾಲಯ ಇರುವುದರಿಂದ ಅದನ್ನು ‘ಸಿಕಂದರ್ ಬೆಟ್ಟ’ ಎಂದು ಕರೆಯಲಾಗುತ್ತದೆ ಎಂದು ಮುಸ್ಲಿಂ ಸಮುದಾಯ ಹೇಳಿಕೊಳ್ಳುತ್ತದೆ.
2. ಇತ್ತೀಚೆಗೆ, ತಮಿಳುನಾಡು ವಕ್ಫ್ ಬೋರ್ಡ್‌ನ ಅಧ್ಯಕ್ಷರು ಮತ್ತು ರಾಮನಾಥಪುರಂ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಕೆ. ನವಾಸ್ ಕಾನಿ (ಐ.ಯು.ಎಂ.ಎಲ್.) ತನ್ನ ಅನುಯಾಯಿಗಳೊಂದಿಗೆ ದರ್ಗಾಕ್ಕೆ ಹೋಗಿ ಬೆಟ್ಟವನ್ನು ವಕ್ಫ್ ಆಸ್ತಿ ಎಂದು ಘೋಷಿಸಿದರು, ಎಂದು ಆರೋಪಿಸಲಾಗಿದೆ.
3. ಈ ಆಧಾರರಹಿತ ದಾವೆಯ ವಿರುದ್ಧ ಭಾರತ್ ಹಿಂದೂ ಮುನ್ನಾನಿ ಪ್ರತಿಭಟಿಸುವುದಾಗಿ ಘೋಷಿಸಿದ ನಂತರ, ಪೊಲೀಸ್ ಆಯುಕ್ತರ ಅಭಿಪ್ರಾಯದಂತೆ ಜಿಲ್ಲಾಧಿಕಾರಿಗಳು ಫೆಬ್ರವರಿ 3 ಮತ್ತು 4 ರಂದು ಎರಡು ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಿತ್ತು.
4. ಪೊಲೀಸರು ವಿಧಿಸಿರುವ ನಿರ್ಬಂಧಗಳು ಭಕ್ತರು ದೇವಾಲಯದ ‘ತೆಪ್ಪ ತಿರುವಾಜ’ ಹಬ್ಬವನ್ನು ಆಚರಿಸುವುದನ್ನು ತಡೆಯುತ್ತಿವೆ ಎಂದು ಹಿಂದುತ್ವನಿಷ್ಠ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಯುಕ್ತಿವಾದ ಮಾಡಿದ್ದಾರೆ.
5. ತಿರುಪರಕುಂದ್ರಂ ದೇವಸ್ಥಾನದ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಯಾತ್ರಿಕರು ಮೊದಲು ‘ಪಾಸ್’ ಪಡೆಯಲು ಪೊಲೀಸ್ ಠಾಣೆಗೆ ಹೋಗಬೇಕು ಮತ್ತು ನಂತರ ಭಗವಾನ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು.
6. ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿದ ನಂತರ, ಹೈಕೋರ್ಟ್ ತಕ್ಷಣವೇ ಆದೇಶವನ್ನು ಹೊರಡಿಸಿ, ಆಡಳಿತವು ಇಡೀ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಯಾವಾಗಲೂ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಂವಿಧಾನವು ವಿಧಿಸಿರುವ ಇತರ ನಿರ್ಬಂಧಗಳಿಗೆ ಒಳಪಟ್ಟಿರಬೇಕು ಎಂದು ಗಮನಿಸಿದೆ.
7. ಹೀಗಿದ್ದರೂ ಪ್ರತಿಭಟನೆಗೆ ಅನುಮತಿ ನೀಡುವಾಗ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿತು. ಪ್ರತಿಭಟನಾಕಾರರು ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು. ಇಡೀ ಪ್ರತಿಭಟನೆಯ ವಿಡಿಯೋ ಮಾಡಲಾಗುವುದು, ಎಂದೂ ಸಹ ನ್ಯಾಯಾಲಯ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 19 ರಂದು ನಡೆಯಲಿದೆ.
ಸಂಪಾದಕೀಯ ನಿಲುವು
|