
’೨೫ ವರ್ಷಗಳ ಹಿಂದೆ ನಾನು ಮುಂಬೈ ಸೇವಾಕೇಂದ್ರದಲ್ಲಿದ್ದಾಗ, ಒಮ್ಮೆ ಓರ್ವ ಸಾಧಕನಿಂದ ಬ್ಯಾಂಕ್ ’ಚೆಕ್‌ಬುಕ್’ ಕಳೆದುಹೋಗಿತ್ತು. ಅವನಿಗೆ ಅದನ್ನು ಎಲ್ಲಿಟ್ಟಿದ್ದೇನೆ ಎಂಬುದು ಏನೇ ಮಾಡಿದರೂ ನೆನಪಾಗುತ್ತಿರಲಿಲ್ಲ. ಪ.ಪೂ. ಡಾಕ್ಟರರು ಎಲ್ಲಾ ಸಾಧಕರಿಗೆ ಮತ್ತೊಮ್ಮೆ ಎಲ್ಲಾ ಕಡೆಗೆ ನೋಡಲು ಹೇಳಿದರು; ಆದರೆ ಆ ’ಚೆಕ್‌ಬುಕ್’ ಏನೇ ಮಾಡಿದರೂ ಸಿಗುತ್ತಿರಲಿಲ್ಲ. ಪ.ಪೂ. ಡಾಕ್ಟರರು ಕೊನೆಯ ಆಯ್ಕೆ ಎಂದು ಧ್ಯಾನದಲ್ಲಿ ಹೋಗಿ ಆ ’ಚೆಕ್‌ಬುಕ್’ ಎಲ್ಲಿ ಇಡಲಾಗಿದೆ ಎಂಬುದನ್ನು ಹೇಳಿದರು. ಅದರಂತೆ ನೋಡಿದಾಗ ಆ ’ಚೆಕ್‌ಬುಕ್’ ಸಿಕ್ಕಿತು. ಆಗ ಪ.ಪೂ. ಡಾಕ್ಟರರು ಎಲ್ಲಾ ಸಾಧಕರನ್ನು ಕರೆದರು ಮತ್ತು ”ನೀವು ವಸ್ತುವನ್ನು ಸರಿಯಾಗಿ ಇಡದ ಕಾರಣ ನನ್ನ ೩ ತಿಂಗಳ ಸಾಧನೆ ಒಂದು ’ಚೆಕ್‌ಬುಕ್’ ಹುಡುಕುವುದಕ್ಕೆ ವ್ಯಯ (ಖರ್ಚು) ಆಯಿತು. ಸಾಧನೆ ಈ ರೀತಿ ವ್ಯಯವಾಗದಂತೆ, ಎಲ್ಲಾ ಸಾಹಿತ್ಯ ಮತ್ತು ದಾಖಲೆಗಳನ್ನು ಆಯಾ ಸಮಯಕ್ಕೆ ನಿಗದಿತ ಸ್ಥಳದಲ್ಲೇ ಇಡಬೇಕು,” ಎಂದರು, – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಪ.ಪೂ. ಡಾಕ್ಟರರು ಹೀಗೆ ೨೦ ರಿಂದ ೨೫ ವರ್ಷಗಳ ಹಿಂದೆ ಅಪರೂಪಕ್ಕೆ ಮಾಡಿದರು. ನಂತರ ಎಂದಿಗೂ ಮಾಡಲಿಲ್ಲ. – ಸಂಕಲನಕಾರರು)