ಅತ್ಯಧಿಕ ಮುಸಲ್ಮಾನರಿರುವ ಇಂಡೋನೇಷ್ಯಾದಲ್ಲಿ ಭವ್ಯ ಮುರುಗನ ದೇವಸ್ಥಾನ ಕಟ್ಟಿದ ಪ್ರಕರಣ

ಜಕಾರ್ತ (ಇಂಡೋನೇಷ್ಯಾ) – ಅತಿ ಹೆಚ್ಚು ಮುಸಲ್ಮಾನರಿರುವ ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಮುರುಗನ್ ದೇವರ ಭವ್ಯ ದೇವಸ್ಥಾನವನ್ನು ಇತ್ತೀಚೆಗೆ ಭಕ್ತರಿಗಾಗಿ ತೆರೆಯಲಾಗಿದೆ. ಈ ದೇವಸ್ಥಾನವು ಸುಮಾರು 4 ಸಾವಿರ ಚದರ ಮೀಟರ್ ವಿಸ್ತೀರ್ಣ ಪ್ರದೇಶವನ್ನು ವ್ಯಾಪಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು. ಇದಾದ ನಂತರ, ಈ ದೇವಸ್ಥಾನದ ಬಗ್ಗೆ
My remarks during Maha Kumbabhishegam of Shri Sanathana Dharma Aalayam in Jakarta, Indonesia. https://t.co/7LduaO6yaD
— Narendra Modi (@narendramodi) February 2, 2025
ಪಾಕಿಸ್ತಾನದಲ್ಲಿ ಟೀಕೆಯಾಗುತ್ತಿದೆ. “ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನವನ್ನು ಕಟ್ಟಿದರೆ, ಅದನ್ನು ಧ್ವಂಸಗೊಳಿಸಲಾಗುವುದು” ಎಂದು ಬೆದರಿಕೆ ಹಾಕುತ್ತಿದ್ದಾರೆ.
ಪಾಕಿಸ್ತಾನದ ಓರ್ವ ಮೌಲಾನಾ (ಇಸ್ಲಾಮಿಕ್ ವಿದ್ವಾಂಸ) ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯಲ್ಲಿ ನಮಾಜು ಪಠಣದ ನಂತರದ ಭಾಷಣದ ಒಂದು ವೀಡಿಯೊ ತುಣುಕು ಪ್ರಸಾರ ಮಾಡಲಾಗಿದೆ. ಇದರಲ್ಲಿ, ಈ ಮೌಲಾನಾ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಹಿಂದೂ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ‘ಸ್ಮಾರ್ಟ್ ಸಿಟಿ’ ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ಒಂದು ದೇವಸ್ಥಾನ ನಿರ್ಮಾಣವಾಗುತ್ತಿದೆ, ಮತ್ತು ಈಗ ಇಂಡೋನೇಷ್ಯಾದಲ್ಲಿಯೂ ಒಂದು ಭವ್ಯ ದೇವಸ್ಥಾನ ನಿರ್ಮಾಣವಾಗಿದೆ. ಇಂಡೋನೇಷ್ಯಾ ಮೊದಲು ಹಿಂದೂ ರಾಷ್ಟ್ರವಾಗಿತ್ತು; ಆದರೆ ಅದು ಈಗ ಇಸ್ಲಾಮಿಕ್ ರಾಷ್ಟ್ರವಾಗಿದೆ. ಅಲ್ಲಾಹನ ಧರ್ಮ ನಿಜವಾಗಿದೆ. ಅಲ್ಲಾಹನ ಧರ್ಮವೇ ಯೋಗ್ಯವಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವಿರಲಿ ಅದು ತಪ್ಪು. ಕೇವಲ ಒಂದೇ ಧರ್ಮವಿದೆ, ಅದು ಇಸ್ಲಾಂ. (ಎಲ್ಲಿ ‘ವಸುಧೈವ ಕುಟುಂಬಕಂ’ (ಇಡೀ ಪೃಥ್ವಿ ಒಂದೇ ಕುಟುಂಬ) ಎಂದು ಹೇಳುವ ಹಿಂದೂ ಧರ್ಮ ಮತ್ತು ಎಲ್ಲಿಯ ‘ನಮ್ಮ ಧರ್ಮ ಮಾತ್ರ ಶ್ರೇಷ್ಠ’ ಎಂದು ಹೇಳುವ ಇತರ ಧರ್ಮಗಳು! – ಸಂಪಾದಕರು) ಪಾಕಿಸ್ತಾನದಲ್ಲಿ ದೇವಸ್ಥಾನಗಳನ್ನು ಕಟ್ಟಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಕಟ್ಟಿದರೆ ಜನ ಅದನ್ನು ಕೆಡವುತ್ತಾರೆ. ದೇವಸ್ಥಾನಗಳನ್ನು ಕೆಡವಬೇಕು. ಎಲ್ಲೆಲ್ಲಿ ದೇವಸ್ಥಾನಗಳಿವೆಯೋ, ಅವುಗಳನ್ನು ಕೆಡವಬೇಕು ಎಂದು ಹೇಳಿದ್ದಾನೆ.
ಸಂಪಾದಕೀಯ ನಿಲುವು
|
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ