೧. ಸರಕಾರವನ್ನು ಅಭಿನಂದಿಸಲು ಕೇರಳದ ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ನಿಂದ ಸಾರ್ವಜನಿಕ ಸ್ಥಳದಲ್ಲಿ ಫಲಕ ಅಳವಡಿಸಿದ ಪ್ರಕರಣ
‘ಧರ್ಮವೆಂದರೆ ಆಫೀಮಿನ ಗುಳಿಗೆಯಾಗಿದೆ’, ಎಂದು ಸುಳ್ಳು ಪ್ರಚಾರ ಮಾಡುವವರು ಹಿಂದೂ ಮಂದಿರದ ಅರ್ಪಣೆಯ ಹಣದಿಂದ ಮಾತ್ರ ತಮ್ಮ ಸ್ವಂತದ ಪ್ರಸಿದ್ಧಿ ಮಾಡಿಸಿಕೊಳ್ಳುತ್ತಾರೆ. ‘ಕೇರಳದಲ್ಲಿನ ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ ಸಹ ಅಲ್ಲಿನ ಸರಕಾರ, ಮುಖ್ಯಮಂತ್ರಿ, ಶಾಸಕರು ಮತ್ತು ಬೋರ್ಡ್‌ನ ಅಧ್ಯಕ್ಷರನ್ನು ಅಭಿನಂದಿಸುವ ಫಲಕವನ್ನು ಮಂದಿರದ ಪರಿಸರದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದೆ. ಅಂದರೆ ಭಕ್ತರು ದಾನ ಮಾಡಿದ ಹಣವನ್ನು ಇದಕ್ಕಾಗಿ ಖರ್ಚು ಮಾಡಲಾಗಿತ್ತು. ಭಾರತದಾದ್ಯಂತ ಹಿಂದೂಗಳು ಮಂದಿರಗಳಲ್ಲಿ ಅರ್ಪಿಸಿದ ಹಣವನ್ನು ಸರಕಾರ ನಿಯಂತ್ರಣದ ಪದಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಾರೆ. ಪ್ರವಾಸ ಭತ್ತೆ, ಸಪ್ತತಾರಾ ಹೊಟೇಲ್‌ಗಳಲ್ಲಿ ಸಭೆಗಳನ್ನು ಆಯೋಜಿಸುವುದು, ರಾಜ್ಯದ ಹೊರಗೆ ಸಭೆ ಕರೆಯಲಾಗಿದೆಯೆಂದು ತೋರಿಸಿ ವಾಹನದ ಬಾಡಿಗೆ ಮತ್ತು ಚಾಲಕನ ಖರ್ಚನ್ನು ವಸೂಲಿ ಮಾಡುವುದು, ಇದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅಂತಹ ಒಂದು ಘಟನೆ ಇಲ್ಲಿಯೂ ನಡೆದಿದೆ.
೨. ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ನ ಕುಕೃತ್ಯವನ್ನು ತಾನಾಗಿ ನೋಂದಣಿ ಮಾಡಿದ ಕೇರಳ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ

ಕೇರಳದ ಅಲಪುಲ್ಲಾ ಜಿಲ್ಲೆಯ ಚಿರಥಾಲಾದ ಸಮೀಪದ ಥುರಾವೂರ ಮಹಾಕ್ಷೇತ್ರಮ್ ಮಂದಿರ ಕ್ಷೇತ್ರದಲ್ಲಿ ಉತ್ಸವವಿತ್ತು. ಮಂದಿರ ವ್ಯವಸ್ಥಾಪನೆಯು ಕೇರಳ ರಾಜ್ಯದ ಸಾಮ್ಯವಾದಿ ಮುಖ್ಯಮಂತ್ರಿ, ರಾಜ್ಯದ ದೇವಸ್ವಮ್ ಮಂತ್ರಿ ವಿ.ಎನ್. ವಾಸವನ್, ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ನ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕರ ಛಾಯಾಚಿತ್ರಗಳಿರುವ ಫಲಕವನ್ನು ತೀರ್ಥಕ್ಷೇತ್ರದ ಪರಿಸರದಲ್ಲಿ ಹಾಕಿತ್ತು. ಅದನ್ನು ಕೇರಳ ಉಚ್ಚ ನ್ಯಾಯಾಲಯವು ತಾನಾಗಿ ನೋಂದಣಿ ಮಾಡಿಕೊಂಡಿತು. (‘ಸುಮೋಟೋ’ ಅರ್ಜಿ ದಾಖಲಿಸಿದೆ) ಅನಂತರ ನ್ಯಾಯಾಲಯವು ‘ತಮ್ಮನ್ನು ದೇವಸ್ಥಾನಗಳ ಮಾಲೀಕರೆಂದು ತಿಳಿಯಬೇಡಿ. ಭಕ್ತರು ಮಂದಿರದಲ್ಲಿ ಮುಖ್ಯಮಂತ್ರಿ, ಶಾಸಕರು ಮತ್ತು ಮಂದಿರ ಸಮಿತಿಯ ಅಧ್ಯಕ್ಷರ ಮುಖ ನೋಡಲು ಬರುವು ದಿಲ್ಲ. ಅವರಿಗೆ ತಮ್ಮ ದೇವತೆಗಳ ಬಗ್ಗೆ ಶ್ರದ್ಧೆ ಇರುವುದರಿಂದ ಅವರು ಮಂದಿರಕ್ಕೆ ಬರುತ್ತಾರೆ. ಭಕ್ತರ ಹಣದಿಂದ ನಿಮ್ಮ ಪ್ರಚಾರ ಮಾಡಿಸಿಕೊಳ್ಳಬೇಡಿ’, ಇತ್ಯಾದಿ ಶಬ್ದಗಳಿಂದ ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ನ ಮಂದಿರದ ಧರ್ಮದರ್ಶಿಗಳನ್ನು ಗದರಿಸಿದರು. ಶಬರಿಮಲೈ ಯಾತ್ರೆಯ ಸಮಯದಲ್ಲಿ ಥುರಾವೂರ ಮಂದಿರದಲ್ಲಿ ಮುಕ್ಕಾಮ್ (ವಿಶ್ರಾಂತಿ) ಮಾಡಲಾಗುತ್ತದೆ.ಆದ್ದರಿಂದ ತೀರ್ಥಯಾತ್ರೆಯ ಸಮಯದಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ಹೊಣೆ ರಾಜ್ಯ ಸರಕಾರ ಮತ್ತು ‘ಟ್ರಾವಂಕೋರ್ ದೇವಸ್ವಮ್ ಬೋರ್ಡ್’ನದ್ದಾಗಿದೆ; ಆದರೆ ಭಕ್ತರ ಅರ್ಪಣೆಯ ಹಣದಿಂದ ಮಂದಿರದ ಸಲಹೆಗಾರ ಸಮಿತಿ ಫ್ಲೆಕ್ಸ್ ಫಲಕ ಹಚ್ಚುವುದು, ಧರ್ಮದರ್ಶಿ ಗಳ ಛಾಯಾಚಿತ್ರ ಹಚ್ಚುವುದು ಇತ್ಯಾದಿ ಕೃತ್ಯ ಗಳನ್ನು ಮಾಡುತ್ತದೆ. ಇಂತಹ ವರ್ತನೆಯನ್ನು ನ್ಯಾಯಾಲಯ ಸಹಿಸುವು ದಿಲ್ಲ’, ಎಂದು ನ್ಯಾಯಾಲಯ ಹೇಳಿದೆ.
೩. ಹಿಂದೂ ಮಂದಿರಗಳ ದಾನದ ಲಾಭ ಅಲ್ಪಸಂಖ್ಯಾತರಿಗೆ
ಶ್ರದ್ಧಾಳು ಹಿಂದೂಗಳು ಮಂದಿರಗಳಲ್ಲಿ ಅರ್ಪಣೆ ಮಾಡುತ್ತಾರೆ; ಆದರೆ ಆ ಹಣ ಹೇಗೆ ವಿನಿಯೋಗವಾಗುತ್ತದೆ, ಎಂಬುದನ್ನು ಅವರು ಗಮನಿಸುವುದಿಲ್ಲ. ಆದ್ದರಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳ ಅರ್ಪಣೆಯಿಂದ ಮತಾಂಧರಿಗೆ ಮತ್ತು ಕ್ರೈಸ್ತರಿಗೆ ಸಹಾಯ ಮಾಡಲಾಗುತ್ತದೆ. ಉದಾಹರಣೆಗಾಗಿ ಮುಂಬಯಿಯಲ್ಲಿನ ಸಿದ್ಧಿವಿನಾಯಕ ಮಂದಿರದಿಂದ ಸಿಗುವ ಸಹಾಯದಲ್ಲಿ ಇತರ ಪಂಥದವರ ಪಾಲು ದೊಡ್ಡ ಪ್ರಮಾಣದಲ್ಲಿದೆ. ಈ ವಿಷಯದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅನೇಕ ಅರ್ಜಿ ದಾಖಲಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ಥುರಾವೂರ ಮಂದಿರದ ಪ್ರಕರಣದಲ್ಲಿ ಕೇರಳ ಉಚ್ಚ ನ್ಯಾಯಾಲಯವು ತಾನಾಗಿ ದಾಖಲಿಸಿರುವುದು ಹಿಂದೂಗಳಿಗೆ ಆಶಾದಾಯಕವಾಗಿದೆ. ಅಂದರೆ ಹಿಂದೂ ಭಕ್ತರು ನಿದ್ರೆಯಲ್ಲಿರಬೇಕೆಂದಲ್ಲ. ಅವರು ಧರ್ಮಕಾರ್ಯ ದಲ್ಲಿ ಜಾಗರೂಕರಾಗಿದ್ದು ಸರಕಾರದ ನಿಯಂತ್ರಣದಲ್ಲಿರುವ ಮಂದಿರ ಸಮಿತಿಗಳಿಗೆ ಸ್ಪಷ್ಟೀಕರಣ ಕೇಳಬೇಕು.’
(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೦.೧೨.೨೦೨೪)