ತೃಣಮೂಲ ಕಾಂಗ್ರೆಸ್ ನ ಮುಸಲ್ಮಾನ ಶಾಸಕರು ಸರಕಾರದ ಆದೇಶದ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದರು

ಕೊಲಕಾತಾ (ಬಂಗಾಲ) – ಬಕ್ರೀದ್ ಹಿನ್ನೆಲೆಯಲ್ಲಿ ಎತ್ತು, ಗೂಳಿ, ಹಸುಗಳು, ಕರುಗಳು ಮತ್ತು ಎಮ್ಮೆಗಳ ಹತ್ಯೆಯ ಮೇಲೆ ನಿರ್ಬಂಧ ಹೇರುವ ಬಂಗಾಲ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕೊಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿತು. ಸರಕಾರವು ೧೩ ಮೇ ದಿನದಂದು ಈ ಸಂದರ್ಭದಲ್ಲಿ ಅಧಿಸೂಚನೆಯನ್ನು ಪ್ರಸಾರ ಮಾಡಿತ್ತು. ‘ಈ ಅಧಿಸೂಚನೆಯು ನ್ಯಾಯಾಲಯವು ೨೦೧೮ ರಲ್ಲಿ ನೀಡಿದ ನಿರ್ದೇಶನಗಳದೇ ಕ್ರಮವಾಗಿದೆ. ಈ ಸಂದರ್ಭದಲ್ಲಿ ವಿವಾದವಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚನೆಗೆ ತಡೆಯಾಜ್ಞೆ ನೀಡಲು ಅಥವಾ ಅದನ್ನು ರದ್ದುಗೊಳಿಸಲು ಯಾವುದೇ ಬಲವಾದ ಕಾರಣ ನಮಗೆ ಕಾಣಿಸುತ್ತಿಲ್ಲ’, ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ತೃಣಮೂಲ ಕಾಂಗ್ರೆಸ್ ನ ಶಾಸಕ ಅಖರುಝಾಮನವರು ಅರ್ಜಿಯ ಮೂಲಕ, ‘ರಾಜ್ಯ ಸರಕಾರವು ೧೩ ಮೇಯ ಅಧಿಸೂಚನೆಯಲ್ಲಿ ‘ಪಶ್ಚಿಮ ಬಂಗಾಲ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ’ಯ ಕಲಂ ೧೨ ರ ಅಡಿಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಆದ್ದರಿಂದ ಮುಂಬರುವ ಬಕ್ರೀದ್ ಸಮಯದಲ್ಲಿ ಪ್ರಾಣಿಗಳ ಬಲಿಯ ಧಾರ್ಮಿಕ ಪರಂಪರೆಯನ್ನು ಕಾನೂನುಬದ್ಧವಾಗಿ ನೆರವೇರಿಸುವುದು ಅಸಾಧ್ಯವಾಗುವುದು. ಬಹುಸಂಖ್ಯಾತ ಮುಸಲ್ಮಾನರಿಗಾಗಿ ಎಮ್ಮೆ, ಎತ್ತು ಅಥವಾ ಗೂಳಿಯಂತಹ ದೊಡ್ಡ ಪ್ರಾಣಿಗಳ ಬಲಿ ನೀಡುವುದು, ಇದೇ ಧಾರ್ಮಿಕ ಕರ್ತವ್ಯವನ್ನು ನೆರವೇರಿಸುವ ಏಕೈಕ ಆರ್ಥಿಕ ದೃಷ್ಟಿಯಿಂದ ಕೈಗೆಟಕುವ ಮಾರ್ಗವಾಗಿದೆ’ ಎಂದು ಯುಕ್ತಿವಾದ ಮಾಡಿದ್ದರು.
ಹಸುವಿನ ಬಲಿ ನೀಡುವುದು ಬಕ್ರೀದ್ ನ ಅನಿವಾರ್ಯ ಭಾಗವಲ್ಲ ! – ಸರ್ವೋಚ್ಚ ನ್ಯಾಯಾಲಯ
ಉಚ್ಚ ನ್ಯಾಯಾಲಯವು ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಉದಾಹರಣೆ ನೀಡುತ್ತಾ, ‘ಹಸುವಿನ ಬಲಿ ನೀಡುವುದು ‘ಈದ್-ಉಲ್-ಅಜಹಾ’ದ (ಬಕ್ರೀದ್ ನ) ಅನಿವಾರ್ಯ ಭಾಗ ಅಥವಾ ಇಸ್ಲಾಮ್ ನಲ್ಲಿನ ಕಡ್ಡಾಯ ಧಾರ್ಮಿಕ ಪ್ರಥೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಮುಂಚೆಯೇ ಸ್ಪಷ್ಟಪಡಿಸಿದೆ’ ಎಂದು ಹೇಳಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”