ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ಸಭೆಗೆ ಅನುಮತಿ ನಿರಾಕರಿಸಿದ್ದ ಪೊಲೀಸ್ ಇಲಾಖೆ

ನಾಂದೇಡ್ – ಭಾಗ್ಯನಗರದ ‘ಶ್ರೀರಾಮ ಯುವ ಸೇನೆ’ಯ ಸಂಸ್ಥಾಪಕ-ಅಧ್ಯಕ್ಷ ಹಾಗೂ ಶಾಸಕ ಟಿ. ರಾಜಾ ಸಿಂಗ್ ಅವರು ಏಪ್ರಿಲ್ 4 ರಂದು ಸಂಜೆ 6.30 ಕ್ಕೆ ನಾಂದೇಡ್‌ನ ಬಿಲೋಲಿಯಲ್ಲಿ ನಡೆಸಲಿರುವ ಸಭೆಗೆ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಬಿಲೋಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇದನ್ನು ಮುಂಬಯಿ ಹೈಕೋರ್ಟ್‌ನ ಸಂಭಾಜಿನಗರ ಪೀಠದಲ್ಲಿ ಪ್ರಶ್ನಿಲಾಗಿತ್ತು. ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ (ಪೂ.) ಸುರೇಶ್ ಕುಲಕರ್ಣಿ ಅವರು ವಾದ ಮಂಡಿಸಿ, ಸರಕಾರಿ ಪಕ್ಷದ ಎಲ್ಲಾ ಅಂಶಗಳನ್ನು ವಾದದ ಮೂಲಕ ತಳ್ಳಿಹಾಕಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸಂದೀಪ್ ಕುಮಾರ್ ಸಿ. ಮೋರೆ ಮತ್ತು ಅಬಾಸಾಹೇಬ್ ಡಿ. ಶಿಂದೆ ಅವರ ಪೀಠವು ಶಾಸಕ ಟಿ. ರಾಜಾ ಸಿಂಗ್ ಅವರ ಬಿಲೋಲಿ ಸಭೆಗೆ ಅನುಮತಿ ನೀಡಿತು.
ಈ ಸಂದರ್ಭದಲ್ಲಿ ಸರಕಾರಿ ಪಕ್ಷದ ಪರವಾಗಿ ಮಂಡಿಸಲಾದ ಅಂಶಗಳು
1. ಶಾಸಕ ಟಿ. ರಾಜಾ ಸಿಂಗ್ ಅವರ ಹಿಂದಿನ ಸಭೆಗಳು ‘ಹೇಟ್ ಸ್ಪೀಚ್’ (ದ್ವೇಷ ಭಾಷಣ) ಆಗಿದ್ದು, ಅವು ಹಿಂದೂ-ಮುಸ್ಲಿಮರ ನಡುವಿನ ವಿವಾದವನ್ನು ಹೆಚ್ಚಿಸುತ್ತವೆ. ಅಲ್ಲದೆ, ಈ ಸಂಬಂಧ ಸಿಂಗ್ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ.
2. ಶ್ರೀರಾಮನವಮಿಯ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಮತ್ತು ಮಾರ್ಚ್ 13 ರಿಂದ 27 ರ ಅವಧಿಯಲ್ಲಿ ಮಹಾರಾಷ್ಟ್ರ ಪೊಲೀಸ್ ಕಾಯ್ದೆ 1951 ರ ಕಲಂ 37 (1) (3) ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಪೂ. ಸುರೇಶ್ ಕುಲಕರ್ಣಿ ಅವರು ಮಂಡಿಸಿದ ವಾದದ ಕೆಲವು ಅಂಶಗಳು

1. ಕೆಲವು ಹಿಂದೂ ವಿರೋಧಿ ಸಂಘಟನೆಗಳು ಅಡ್ಡಿಪಡಿಸಲು ಪ್ರಯತ್ನಿಸಿದವು. ಆದರೂ ಈ ಹಿಂದೆ ಚೋಪಡಾ-ಜಳಗಾಂವ್, ಛತ್ರಪತಿ ಸಂಭಾಜಿನಗರ, ಮಿರಾ- ಭಾಯಿದರ – ಮುಂಬಯಿ, ಪುಸದ್ ಮತ್ತು ಯವತ್ಮಾಳ್‌ನಲ್ಲಿ ನಡೆದ ಸಭೆಗಳಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಅಷ್ಟೇ ಅಲ್ಲದೆ, ಈ ಸಭೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.
2. ಈ ಸಂಬಂಧ ಹೈಕೋರ್ಟ್ (ಕ್ರಿಮಿನಲ್ ಡಬ್ಲ್ಯೂ.ಪಿ. – 369/2024, 866/2025, 594/2024) ಆದೇಶಗಳನ್ನು ನೀಡಿದೆ. ಹಾಗೆಯೇ ಸುಪ್ರೀಂ ಕೋರ್ಟ್ ಕೂಡ ಈ ವಿಷಯದಲ್ಲಿ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ನೀಡಿದೆ.
3. ಅರ್ಜಿದಾರರು ಮತ್ತು ಶಾಸಕ ಟಿ. ರಾಜಾ ಸಿಂಗ್ ಅವರು ಶಾಂತಿ ಕಾಪಾಡುವ ಬಗ್ಗೆ ಅಫಿಡವಿಟ್ (ಪ್ರಮಾಣಪತ್ರ) ನೀಡಲು ಸಿದ್ಧರಿದ್ದಾರೆ.
ಶಾಸಕ ಟಿ. ರಾಜಾ ಸಿಂಗ್ ಅವರ ಸಮ್ಮುಖದಲ್ಲಿ ಸಭೆ ನಿರ್ವಿಘ್ನವಾಗಿ ನಡೆಯಲಿದೆ!ಧರ್ಮ, ಸಂಸ್ಕೃತಿ ಮತ್ತು ಹಿಂದೂ ಏಕತೆಯ ಸಂದೇಶಕ್ಕಾಗಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕರೆ ನೀಡಿದ್ದಾರೆ. ಹೈಕೋರ್ಟ್‌ನ ಈ ನಿರ್ಧಾರದಿಂದ ಹಿಂದೂ ಬಾಂಧವರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಸಭೆಯು ಯಾವುದೇ ಅಡೆತಡೆಯಿಲ್ಲದೆ ಭವ್ಯವಾಗಿ ನಡೆಯಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |
ಸಂಪಾದಕೀಯ ನಿಲುವುಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಯಾವಾಗಲೂ ಹಿಂದೂಗಳ ಸಭೆಗಳಿಗೇ ಏಕೆ ಅಡ್ಡಿಪಡಿಸಲಾಗುತ್ತದೆ? ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ಸಭೆ ನಡೆಸದಿದ್ದರೆ, ಪಾಕಿಸ್ತಾನದಲ್ಲಿ ನಡೆಸಬೇಕೇ? ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದುತ್ವನಿಷ್ಠ ವಿಚಾರಧಾರೆಯ ಸರಕಾರಗಳಿದ್ದರೂ ಸಹ, ಪೊಲೀಸರು ಯಾರ ಹೇಳಿಕೆಯ ಮೇರೆಗೆ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಾರೆ? ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”