ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರಿಂದ ಹಿಂದುಗಳಿಗೆ ಶ್ರೀ ಸರಸ್ವತಿ ದೇವಿಯ ಪೂಜೆಯ ನಿಮಿತ್ತ ಶುಭಾಶಯ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯುನೂಸ್ ಇವರು ವಸಂತ ಪಂಚಮಿಯ ದಿನದಂದು ಶ್ರೀ ಸರಸ್ವತಿ ದೇವಿಯ ಪೂಜೆಯ ಪ್ರಯುಕ್ತ ಅಲ್ಪಸಂಖ್ಯಾತ ಹಿಂದೂಗಳಿಗೆ ಶುಭಾಶಯಗಳು ನೀಡಿದರು. ಬಾಂಗ್ಲಾದೇಶದಲ್ಲಿನ ಹಿಂದುಗಳು ಫೆಬ್ರುವರಿ ೩ ರಂದು ಶ್ರೀ ಸರಸ್ವತಿ ದೇವಿಯ ಪೂಜೆ ಮಾಡಿದರು. ಯುನೂಸ್ ಇವರು ಬಾಂಗ್ಲಾದೇಶದಲ್ಲಿನ ಎಲ್ಲಾ ಹಿಂದುಗಳಿಗೆ ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಕರೆ ನೀಡಿದರು. ಅವರು ದೇಶದಲ್ಲಿನ ಎಲ್ಲಾ ನಾಗರಿಕರಿಗಾಗಿ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದರು.
ಫೆಬ್ರುವರಿ ೨ ರಂದು ಮಹಮ್ಮದ್ ಯುನೂಸ್ ಇವರು ನೀಡಿರುವ ಸಂದೇಶದಲ್ಲಿ, ಬಾಂಗ್ಲಾದೇಶ ಧಾರ್ಮಿಕ ಸೌಹಾರ್ದತೆಯ ತವರು ಮನೆ ಆಗಿದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಎಲ್ಲಾ ಜಾತಿ, ಬಣ್ಣ ಮತ್ತು ಧರ್ಮದ ಜನರು ಒಟ್ಟಾಗಿ ವಾಸಿಸುತ್ತಿದ್ದಾರೆ, ನಮ್ಮ ದೇಶ ಧರ್ಮ ಅಥವಾ ಜಾತಿ ಏನೇ ಆಗಿದ್ದರು ಕೂಡ, ಎಲ್ಲಾ ಜನರ ಮನೆಯಾಗಿದೆ. ಮಧ್ಯಂತರ ಸರಕಾರ ಎಲ್ಲರ ಜೀವನ ಸುಧಾರಣೆಗಾಗಿ ಮತ್ತು ಜಾತಿ, ಧರ್ಮ ಮತ್ತು ವಂಶದ ಅರಿವಿಲ್ಲದೆ ಅವರ ಅಧಿಕಾರ ಸುನಿಶ್ಚಿತಗೊಳಿಸುವುದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿದೆ. ಶ್ರೀ ಸರಸ್ವತಿ ದೇವಿ ಸತ್ಯ, ನ್ಯಾಯ ಮತ್ತು ಜ್ಞಾನದ ಪ್ರಕಾಶದ ಪ್ರತೀಕವಾಗಿದೆ. ಆಕೆ ಜ್ಞಾನ, ವಾಣಿ ಮತ್ತು ಮಾಧುರ್ಯ್ಯದ ಶಕ್ತಿಯಾಗಿದ್ದಾಳೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು
|