ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಅವರ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಹೇಳಿಕೆ

ನವದೆಹಲಿ – ಧಾರ್ಮಿಕ ಗುರುತಿಗೆ ಸಂಬಂಧಿಸಿದ ವಿವಾದಗಳನ್ನು ತಪ್ಪಿಸಲು ವಿಚಾರಗಳ ಮುಕ್ತ ಹರಿವು ಅತ್ಯಗತ್ಯ. ಧರ್ಮ ಮತ್ತು ದೇಶ ನಿಷ್ಠೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಇಲ್ಲಿ ಹೇಳಿದರು. ಇಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳದಲ್ಲಿ ಫೆಬ್ರವರಿ 2 ರಂದು ಟರ್ಕಿ-ಅಮೇರಿಕನ ವಿದ್ವಾಂಸ ಅಹ್ಮದ್ ಟಿ. ಕುರು ಅವರ ‘ಇಸ್ಲಾಂ, ಅಥಾರಿಟೆರಿಯನಿಝಮ್ ಅಂಡ್ ಅಂಡರ ಡವಲಪಮೆಂಟ’ (ಇಸ್ಲಾಂ, ಸರ್ವಾಧಿಕಾರಿತ್ವ ಮತ್ತು ಅಭಿವೃದ್ಧಿ’) ಪುಸ್ತಕ ಬಿಡುಗಡೆ ಮಾಡಿದ ನಂತರ ಅವರು ಮಾತನಾಡುತ್ತಿದ್ದರು. ದೋವಲ್ ಅವರು ಮೇಳದಲ್ಲಿ ಧಾರ್ಮಿಕ ಗುರುತಿಗೆ, ಮುಖ್ಯವಾಗಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು.
National Security Advisor Ajit Doval calls for introspection to resolve state-religion conflicts at the launch of Ahmet T. Kuru’s book on Islam and authoritarianism at the New Delhi World Book Fair.
Find the complete story on #PBSHABD. Free to sign up and use for media… pic.twitter.com/kvObz41CiV
— PB-SHABD (@PBSHABD) February 3, 2025
ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದರು,
1. ಧರ್ಮ ಮತ್ತು ದೇಶದ ನಡುವಿನ ಸಂಬಂಧವು ಇಸ್ಲಾಂನಲ್ಲಿ ಒಂದು ವಿಶಿಷ್ಟವಾದ ಘಟನೆಯಲ್ಲ. ಇತಿಹಾಸದ ವಿವಿಧ ಹಂತಗಳಲ್ಲಿ ಈ ಪರಿಕಲ್ಪನೆಯು ಬದಲಾಯಿತು. ಅಬ್ಬಾಸಿ ರಾಜ್ಯಾಡಳಿತದ ಅವಧಿಯಲ್ಲಿ, ರಾಜ್ಯಗಳು ಮತ್ತು ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆಗಳನ್ನು ನಡೆಸುವವನು) ಇವರ ಪಾತ್ರಗಳು ವಿಭಿನ್ನವಾಗಿದ್ದವು. ‘ಪ್ರಿಂಟಿಂಗ್ ಪ್ರೆಸ್’ವನ್ನು ಅಳವಡಿಸಿಕೊಳ್ಳಲು ಇಮಾಮ್ ಸಮುದಾಯದಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು. ಚೌಕಟ್ಟಿನ ಹೊರಗೆ ಯೋಚಿಸಲು ಸಾಧ್ಯವಾಗದ ತಲೆಮಾರುಗಳು ನಿಷ್ಕ್ರಿಯವಾದವು.
2. ಹಿಂದೂ ಧರ್ಮದಲ್ಲಿ, ವಾದ-ವಿವಾದ, ಶಾಸ್ತ್ರಾರ್ಥ ಮತ್ತು ಧ್ಯಾನದ ಮೂಲಕ ಪರಿಹರಿಸಲಾಗುತ್ತಿತ್ತು.
3. ಧರ್ಮ ಮತ್ತು ವಿಚಾರಸರಣಿ (ವಿಚಾರಮಂಥನ) ಪರಸ್ಪರ ಪೈಪೋಟಿಯಲ್ಲಿಲ್ಲದಿದ್ದರೆ, ಅವು ದೊಡ್ಡ ಪ್ರಮಾಣದಲ್ಲಿ ನಿಷ್ಕ್ರಿಯವಾಗುತ್ತವೆ. ಅವರು ನಿಷ್ಕ್ರಿಯತೆಗೆ ಬಲಿಯಾಗಿ ಅಂತಿಮವಾಗಿ ನಾಶವಾಗುತ್ತಾರೆ.
4. ನಮಗೆ ಯಾವುದೇ ಬದಲಾವಣೆ ಅಥವಾ ಅಭಿವೃದ್ಧಿ ಬೇಕಿದ್ದರೆ, ಕೆಲವು ಸಮಾಜಗಳು ಏಕೆ ನಿಷ್ಕ್ರಿಯವಾಗಿವೆ ಎಂಬುದನ್ನು ವಿಚಾರ ಮಾಡುವುದು ಮಹತ್ವದ್ದಾಗಿದೆ. ಯಾವ ಸಮಾಜಕ್ಕೆ ಚೌಕಟ್ಟನ್ನು ಮೀರಿ ನೋಡಲು ಸಾಧ್ಯವಾಗುತ್ತಿರಲಿಲ್ಲವೋ ಅಥವಾ ಹೊಸ ಆಲೋಚನೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲವೋ, ಅವು ಬಹುತೇಕವಾಗಿ ಒಂದು ಹಂತದಲ್ಲಿ ಸಂಪೂರ್ಣವಾಗಿ ಸ್ಥಿರವಾದವು.
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir