ಉತ್ತರಪ್ರದೇಶದಲ್ಲಿ ಆಸೀಫ್‌ನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮತ್ತು ಹತ್ಯೆ !

ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಹತ್ಯೆ

ಲಖಿಮಪುರ (ಉತ್ತರಪ್ರದೇಶ) – ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಆಸೀಫ್ ಇವನು ಆಮಿಷ ಒಡ್ಡಿ ಅಪಹರಿಸಿದನು. ಬಳಿಕ ಆಕೆಯ ಮೇಲೆ ಬಲಾತ್ಕಾರ ನಡೆಸಿ ಇಸ್ಲಾಂ ಸ್ವೀಕರಿಸಲು ಒತ್ತಡ ಹೇರಿದನು. ಸಂತ್ರಸ್ತ ಅಪ್ರಾಪ್ತ ಹಿಂದೂ ಹುಡುಗಿಯು ಇಸ್ಲಾಂ ಸ್ವೀಕರಿಸಲು ನಿರಾಕರಿಸಿದಾಗ ಆಸಿಫನು ಅವನ ಸ್ನೇಹಿತರ ಸಹಾಯದಿಂದ ಆಕೆಯನ್ನು ಹತ್ಯೆ ಮಾಡಿದನು. ಆಕೆಯ ಶವ ಲಖಿಮಪುರದಿಂದ ಸುಮಾರು ೫೦೦ ಕಿಲೋಮೀಟರ್ ದೂರ ಕಾಡಿನಲ್ಲಿ ಬಿಸಾಕಿದನು. ಈ ಪ್ರಕರಣದಲ್ಲಿ ಪೊಲೀಸರು ಮುಖ್ಯ ಆರೋಪಿ ಆಸೀಫ್ ಅಲ್ಲದೆ ಸಲ್ಮಾನ್, ರಜಬ ಮತ್ತು ಝುಬೈರ್ ಜೊತೆಗೆ ೬ ಜನರನ್ನು ಬಂಧಿಸಿದ್ದಾರೆ.

೧. ಲಖಿಮಪುರ ಖೇರಿ ಜಿಲ್ಲೆಯಲ್ಲಿನ ಗೋರಿಯಾ ಗ್ರಾಮದಲ್ಲಿ ವಾಸಿಸುವ ೧೭ ವರ್ಷದ ಅಪ್ರಾಪ್ತ ಹಿಂದೂ ಹುಡುಗಿ ಜನವರಿ ೨೫, ೨೦೨೫ ರಂದು ನಾಪತ್ತೆಯಾಗಿದ್ದಳು. ಅದರ ನಂತರ ಸಂತ್ರಸ್ತ ಹುಡುಗಿಯ ಕುಟುಂಬದವರು ಪಡುವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

೨. ಪೊಲೀಸರ ತನಿಖೆಯಲ್ಲಿ, ಆಸೀಫ್ ಇವನು ಆಕೆಯನ್ನು ಅಪಹರಿಸಿದ್ದನು ಎಂಬುದು ತಿಳಿಯಿತು. ಪೊಲೀಸರು ಡೆಹ್ರಾಡೂನ್ ಇಲ್ಲಿಂದ ಆಸೀಫ್ ಮತ್ತು ಅವನ ಸಹಚರರನ್ನು ಬಂಧಿಸಿದ್ದರು. ಅವರ ವಿಚಾರಣೆ ನಡೆಸಿದಾಗ, ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಆಕೆಯ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಯೋಗಿ ಸರಕಾರ ಇದ್ದರೂ ಕೂಡ ಮತಾಂಧ ಮುಸಲ್ಮಾನರು ಲವ್ ಜಿಹಾದ್ ನಡೆಸಿ ಹಿಂದೂ ಯುವತಿಯರ ಜೀವನ ನಾಶಗೊಳಿಸುತ್ತಿದ್ದಾರೆ. ಇದನ್ನು ಗಮನಿಸಿ ಲವ್ ಜಿಹಾದ್ ವಿರೋಧಿ ಕಾನೂನು ಇನ್ನಷ್ಟು ಕಠಿಣ ಗೊಳಿಸು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !