ಮಕ್ಕಳು, ಕೆಲಸ, ಅವಸರ ಮತ್ತು ಪರಿಹಾರ

ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ

‘ಇಂದಿನ ಯುಗದಲ್ಲಿ ಎರಡು ಮಕ್ಕಳನ್ನು ಪಡೆಯುವುದು ಇದು ಮಹಿಳೆಯರ ದೈಹಿಕ ಆರೋಗ್ಯದ ಮೇಲೆ ಬಹಳ ಪ್ರಭಾವ ಬೀರುತ್ತದೆ, ಎಂಬುದರಲ್ಲಿ ಸಂದೇಹವಿಲ್ಲ. ಒಂದು ಎರಡಾದರೆ ೫ ಕೆಲಸಗಳು ೫೦೦ ಕೆಲಸಗಳಾಗುತ್ತವೆ; ಏಕೆಂದರೆ ಅದರಲ್ಲಿ ಮಕ್ಕಳ ಸ್ವಭಾವ, ಅವರ ಪರಸ್ಪರರ ಕ್ರಿಯೆಗಳು ಒಳಗೊಂಡಿರುತ್ತವೆ. ಇದರಲ್ಲಿ ತಾಯಿಯಾಗುವಾಗ ಮಹಿಳೆಯ ಹೆಚ್ಚಾದ ವಯಸ್ಸು ಮತ್ತು ಸದ್ಯದ ಕಳಪೆ ಆಹಾರದ ಗುಣಮಟ್ಟ ಈ ಕಾರಣಗಳೂ ಒಳಗೊಂಡಿವೆ. ಮೊದಲನೇ ಮಗುವನ್ನು ಬೆಳೆಸುವಾಗ; ಎರಡನೇ ಮಗುವನ್ನು ಗರ್ಭದಲ್ಲಿ ಬೆಳೆಸಬೇಕು; ಮೊದಲನೇ ಮಗುವಿನ ಹಟಮಾರಿತನ, ಬೇಡಿಕೆಗಳು, ಶಾಲೆ ಇವೆಲ್ಲವುಗಳನ್ನು ನಿರ್ವಹಿಸುತ್ತಾ ಎರಡನೇ ಮಗು, ಸ್ವತಃದ ಕೆಲಸಗಳು, ಪಾಲನೆ ಮತ್ತು ಸ್ವತಃದ ಅನಾರೋಗ್ಯ ಇವೆಲ್ಲ ಕೆಲಸಗಳು ಸುಲಭವಲ್ಲ. ಎರಡು ಮಕ್ಕಳ ತಾಯಿ ಮತ್ತು ವೈದ್ಯೆಯಾಗಿ ನಾನು ಅನುಭವಿಸಿದ ಕೆಲವು ವಿಷಯಗಳನ್ನು ಇಲ್ಲಿ ನೀಡಿದ್ದೇನೆ.

೧. ಮೊದಲನೇ ಮತ್ತು ಮುಖ್ಯವಾದ ವಿಷಯವೆಂದರೆ, ಎರಡು ಮಕ್ಕಳ ನೆಪದಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ದುರ್ಲಕ್ಷಿಸ ಬೇಡಿ. ಬೇಕೆನಿಸಿದರೆ ಮನೆಯವರ ಅಥವಾ ಹೊರಗಿನವರ ಸಹಾಯ ಪಡೆದು ನಿಮಗಾಗಿ ಸಮಯ ನೀಡಿ. ಅದರಲ್ಲಿ ಸುಂದರ ಹಾಡು ಕೇಳುವುದು, ವಾಯು ವಿಹಾರ, ಯಾವುದಾದರೊಂದು ಲೇಖನವನ್ನು ಓದುವುದು, ಚಿತ್ರಕ್ಕೆ ಬಣ್ಣ ಹಚ್ಚುವುದು ಅಥವಾ ಒಂದು ಕಪ್‌ ಚಹಾವನ್ನು ಆಸ್ವಾದಿಸುವುದು ಹೀಗೆ ಏನಾದರೂ ಇರಬಹುದು. ಈ ಬದಲಾವಣೆಯಿಂದ ಆನಂದ ದೊರಕಿ ಮಕ್ಕಳನ್ನು ನೋಡಿಕೊಳ್ಳಲು ಪುನಃ ಉತ್ಸಾಹ ಬರುತ್ತದೆ.

೨. ಇಲ್ಲಿ ದೈಹಿಕ ಆರೋಗ್ಯಕ್ಕಾಗಿ ಎಷ್ಟೇ ನಿಯಮಗಳನ್ನು ಹೇಳಿದರೂ, ಎರಡು ಮಕ್ಕಳ ವೇಳಾಪಟ್ಟಿಯನ್ನು ನಿರ್ವಹಿಸುವಾಗ, ಎರಡನೇ ಮಗುವಿಗೆ ಸುಮಾರು ೩ ವರ್ಷ ತುಂಬುವವರೆಗೆ ಸ್ವಂತದ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ನಿರ್ವಹಿಸುವುದು ಅಸಾಧ್ಯವಿರುತ್ತದೆ. ಆದುದರಿಂದ ಸಮಯ ಸಿಕ್ಕಾಗ, ಕುಳಿತಲ್ಲೇ ಕನಿಷ್ಠ ‘ಸ್ಟ್ರೆಚಸ್’ ಮಾಡುವುದು (ಶರೀರವನ್ನು ಹಿಗ್ಗಿಸುವುದು), ಅಡುಗೆಮನೆಯಲ್ಲಿ ಉದ್ದೇಶಪೂರ್ವಕವಾಗಿ ಸೊಂಟವನ್ನು ಬಗ್ಗಿಸಿ ಪಾತ್ರೆಗಳನ್ನು ತೆಗೆಯುವುದು, ತರಕಾರಿ ಬೇಯಿಸುವಾಗ ಕೈಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದು, ಅವುಗಳನ್ನು ಹಿಗ್ಗಿಸುವುದು ಮಾಡಬೇಕು.

೩. ೨-೨ ಬಾರಿ ಮೊಲೆಯುಣಿಸಲು ಮುಂದೆ ಬಾಗಿ ಕುಳಿತರೆ ಮತ್ತು ಸದ್ಯ ಯಾವುದೇ ಸರ್ವಾಂಗೀಣ ಚಟುವಟಿಕೆ ಇಲ್ಲದ ಕಾರಣ ಶರೀರದ ಭಂಗಿ ಕೆಡುತ್ತದೆ. ಅದಕ್ಕಾಗಿ ವೈದ್ಯರ ಸಲಹೆ ಪಡೆದು ಭುಜಗಳ ಹಿಂಭಾಗವನ್ನು ಹಿಗ್ಗಿಸುವ ವ್ಯಾಯಾಮ ಹಾಗೆಯೇ ಸೊಂಟದ ವ್ಯಾಯಾಮಗಳನ್ನು ಆದಷ್ಟು ಬೇಗ ಆರಂಭಿಸಬೇಕು, ಇಲ್ಲವಾದರೆ ಬೆನ್ನು ಗೂನಾಗುತ್ತದೆ, ಅದನ್ನು ತೊಡೆದುಹಾಕುವುದು ಸ್ವಲ್ಪ ಕಷ್ಟವಾಗುತ್ತದೆ.

೪. ಎರಡನೇ ಮಗು ಚಿಕ್ಕದಿರುವಾಗ ನಿಮಗೆ ಮೊದಲ ಮಗುವಿಗೆ ಪ್ರಾಮುಖ್ಯತೆಯಿಮದ ಸಮಯ ನೀಡಬೇಕು. ಅದರಲ್ಲಿ ನೀವು ಮಗುವಿಗೆ ಆಟವಾಡಲು ಸುಲಭವಾದ, ಇಷ್ಟವಾಗುವ ಮತ್ತು ತುಂಬಾ ಹರಡುವ ಆಟಿಕೆಗಳನ್ನು ತರಬಹುದು. ಕಿರಿಯ ಮಗು ಆಟಿಕೆಯನ್ನು ಬಾಯಿಯಲ್ಲಿ ಹಾಕದಂತೆ, ನುಂಗದಂತೆ ವಿಶೇಷ ಕಾಳಜಿ ವಹಿಸಬೇಕು. ಇದರಲ್ಲಿ ಮರದ ದೊಡ್ಡ ಬ್ಲಾಕ್‌ಗಳು, ಪ್ಲಾಸ್ಟಿಕ್‌ ಕವರ್, ಕಾರ್ಡಬೋರ್ಡ್ ಪುಸ್ತಕಗಳನ್ನು ನೀಡಬಹುದು. ಮಾವು, ಅರಳೀ ಮರದ ಎಲೆಗಳನ್ನು ತಂದು ಅವುಗಳನ್ನು ಅಂಟಿಸಬಹುದು. ಕೆಲವೊಮ್ಮೆ ಕೇವಲ ಒಣ ಅವಲಕ್ಕಿ ಮತ್ತು ೨ ಪಾತ್ರೆ ಗಳನ್ನು ನೀಡಿದರೆ, ಮಕ್ಕಳು ಅದರೊಂದಿಗೆ ಆಟವಾಡುತ್ತಾ ಬಹಳ ಸಮಯ ಕಳೆಯಬಹುದು. ಈರುಳ್ಳಿ, ಆಲೂಗಡ್ಡೆ, ಬಟ್ಟಲುಗಳು, ಬಾಣಲೆ ಇವು ಮನೆಯ ಮತ್ತು ಸುಲಭವಾದ ಆಟಿಕೆಗಳಾಗಿವೆ. ತೋಟದಲ್ಲಿನ ಚಿಕ್ಕ ಚಿಕ್ಕ ಮರದ ತುಂಡುಗಳಿಗೆ ಬಣ್ಣ ಹಚ್ಚಲು ಹೇಳ ಬಹುದು. ಇದರಲ್ಲಿ ಕುಟುಂಬದವರ ಸಹಾಯ ಪಡೆಯಬಹುದು.

೫. ಸಾಯಂಕಾಲ ಮಕ್ಕಳ ಕಾಲಿಗೆ ಎಣ್ಣೆ ಲೇಪಿಸುವಾಗ ನಿಮ್ಮ ಕಾಲುಗಳಿಗೂ ಎಣ್ಣೆಯನ್ನು ಲೇಪಿಸಿಕೊಳ್ಳಿ. ಇದರಿಂದ ನಿಮ್ಮ ದಣಿವು ಕಡಿಮೆಯಾಗಲು ಸಹಾಯವಾಗುತ್ತದೆ.

೬. ಎರಡು ಮಕ್ಕಳ ಎಲ್ಲವನ್ನೂ ಪೂರೈಸುವಾಗ ನೀವು ನೀರು ಕಡಿಮೆ ಕುಡಿಯುತ್ತಿಲ್ಲವಲ್ಲ ? ಎಂಬ ಕಡೆಗೆ ವಿಶೇಷವಾಗಿ ಗಮನ ನೀಡಿ. ಕೆಲಸದಿಂದಾಗಿ ಬಹಳ ಒತ್ತಡವಾಗಿದ್ದರೆ, ೨ ಗುಟುಕು ನೀರು ಕುಡಿಯಿರಿ. ಅದರಿಂದ ತಕ್ಷಣ ಒಳ್ಳೆಯದೆನಿಸುತ್ತದೆ. ‘ನೀರು ಸಮಾಧಾನ ನೀಡುತ್ತದೆ’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

೭. ಬಹಳ ಸದ್ದು ಮಾಡುವ ಬ್ಯಾಟರಿ ಚಾಲಿತ ಆಟಿಕೆಗಳನ್ನು ಆದಷ್ಟು ತಪ್ಪಿಸಿ. ನಗರದಲ್ಲಿ ಇಷ್ಟು ಸದ್ದು ಇರುವಾಗ ಅದರಲ್ಲಿ ಈ ಆಟಿಕೆ ಇನ್ನಷ್ಟು ಸದ್ದು ಹೆಚ್ಚಿಸುತ್ತದೆ. ಸೌಮ್ಯ ಧ್ವನಿಯ ಅಥವಾ ಗುಂಡಿ(ಬಟನ್‌)ಯನ್ನು ಒತ್ತಿದರೆ ಸದ್ದು ಮಾಡುವ ಪುಸ್ತಕಗಳನÀನ್Ä ತಂದರೆÄ ೬ ತಿಂಗಳ ೫ ವರ್ಷಗಳವರೆಗಿನ ಎಲ್ಲ ಮಕ್ಕಳಿಗೆ ಇಷ್ಟವಾಗಿ ನಮಗೂ ಸದ್ದಿನಿಂದ ಹೆಚ್ಚು ತೊಂದರೆಯಾಗುವುದಿಲ್ಲ.

೮. ಇಬ್ಬರು ಮಕ್ಕಳಿದ್ದರೆ, ಎರಡನೇ ಮಗು ೩-೪ ವರ್ಷದ ವನಾಗುವವರೆಗೂ ಬಹಳ ಚಿಕ್ಕ ಚಿಕ್ಕ ಬಿಡಿ ಭಾಗಗಳಿರುವ ಆಟಿಕೆಗಳನ್ನು ತರುವುದು ಬೇಡ. ದೊಡ್ಡ ಮಗನಿಗಾಗಿ ತಂದ ಬಹಳ ಚಿಕ್ಕ ಆಟಿಕೆಗಳನ್ನು ವ್ಯವಸ್ಥಿತವಾಗಿಡಲು ಸ್ವತಃದ ದೈಹಿಕ ಮತ್ತು ಮಾನಸಿಕ ಶಕ್ತಿ ಖರ್ಚಾಗುತ್ತದೆ, ಹಾಗೆಯೇ ಚಿಕ್ಕ ಮಕ್ಕಳು ಬಾಯಿಯಲ್ಲಿ ಹಾಕಿಕೊಳ್ಳುವ ಅಪಾಯವಿರುತ್ತದೆ. ನಳಿಕೆಯ ಆಟ, ಪಗಡೆ ಆಟ, ‘ಬ್ಲಾಕ್‌’ಗಳ ಆಟ, ಪುಸ್ತಕಗಳು, ಒಗಟು ಆಟ (ಪಝಲ್ಸ್‌) ಈ ಆಟಗಳನ್ನು ಇಬ್ಬರೂ ಆಡಬಹುದು.

೯. ಎರಡನೇ ಮಗುವಿಗೆ ೧೦ ತಿಂಗಳು ತುಂಬಿದ ನಂತರ ರೊಟ್ಟಿ (ಮೆಂತ್ಯೆ, ಪಾಲಕ್, ಗಜ್ಜರಿ, ಕೊತ್ತಂಬರಿ, ಆಲೂಗಡ್ಡೆ), ಕಮಲದ (ತಾವರೆಯ) ಬೀಜಗಳು, ಹಾಲು-ಸಕ್ಕರೆ-ಚಪಾತಿ, ತುಪ್ಪ-ಮೆಂತೆಯ ಹಿಟ್ಟು – ಅನ್ನ, ಕಟ್ಲೆಟ್‌ ದೋಸೆ ಅಥವಾ ಉತ್ತಪ್ಪ, ಹಣ್ಣು ಗಳ ತುಂಡುಗಳು, ಇಂತಹ ಪೌಷ್ಟಿಕ ಪದಾರ್ಥಗಳನ್ನು ಮಾಡಿ ದರೆ ನಮ್ಮ ಸಮಯ ಉಳಿಯುತ್ತದೆ.

೧೦. ‘ಮಕ್ಕಳಿಗೆ ಇಷ್ಟವಾಗುವುದನ್ನೇ ತಯಾರಿಸಬೇಕು’, ಎಂಬುದಕ್ಕಿಂತಲೂ ‘ತಯಾರಿಸಲಾದ ಪದಾರ್ಥವನ್ನು ಮಕ್ಕಳು ತಿನ್ನಬೇಕು’, ಎಂಬ ಅಭ್ಯಾಸವನ್ನು ಮಾಡಿಸಬೇಕು. ಆಗ ದೊಡ್ಡ ಮಗು ಸ್ವಲ್ಪ ಮಟ್ಟಿಗೆ ತೊಂದರೆ ನೀಡಬಹುದು. ಮನಸ್ಸನ್ನು ಗಟ್ಟಿ ಮಾಡಿ ‘ತಿನ್ನದಿದ್ದರೆ ನಡೆಯುತ್ತದೆ’, ಎಂದು ಸ್ವಲ್ಪ ದುರ್ಲಕ್ಷಿಸಿದರೆ ‘ಮಾಡಿದ ಪದಾರ್ಥವನ್ನು ತಿನ್ನುವ ಅಭ್ಯಾಸ ಮಕ್ಕಳಿಗೆ ಆಗುತ್ತದೆ. ಮೆಣಸಿನಕಾಯಿ ಅಥವಾ ಖಾರ ತಿನ್ನಿಸುವ ಬಗ್ಗೆ ಒತ್ತಾಯ ಬೇಡ. ಅವರಿಗೆ ತಿನ್ನಬೇಕು ಎಂದೆನಿಸಿದಾಗ, ಅವರಿಗೆ ಕೊಡಬಹುದು.

೧೧. ಮಕ್ಕಳಿಗೆ ಬಾಲ್ಯದಿಂದಲೇ ತಮ್ಮ ತಟ್ಟೆಯನ್ನು ತೆಗೆದುಕೊಂಡು ಪಾತ್ರೆ ತೊಳೆಯುವ ಸಿಂಕ್‌ನಲ್ಲಿ ಇಡುವುದು, ಶೌಚಾಲಯದಿಂದ ಹೊರಗೆ ಬಂದ ತಕ್ಷಣ ದೀಪವನ್ನು ಆರಿಸುವುದು; ತಮ್ಮ ಬಟ್ಟೆಗಳನ್ನು ತೊಳೆಯುವ ಯಂತ್ರ (ವಾಶಿಂಗ್‌ ಮಶಿನ್‌)ದಲ್ಲಿ ಇಡುವುದು, ಚಪ್ಪಲಿಗಳನ್ನು ಜಾಗದಲ್ಲಿ ಇಡುವುದು, ತಮ್ಮ ಎತ್ತರಕ್ಕೆ ಸಿಗುವ ವಸ್ತುಗಳನ್ನು ಒರೆಸುವುದು ಈ ಅಭ್ಯಾಸಗಳನ್ನು ಮಾಡಿಸುವ ಪ್ರಯತ್ನವನ್ನು ಕಡ್ಡಾಯವಾಗಿ ಮಾಡಿಸಿ. ಮಕ್ಕಳು ಸ್ವಾವಲಂಬಿಯಾದಷ್ಟು ನಿಮ್ಮ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

೧೨. ಎರಡನೇ ಮಗುವಿಗೆ ೧ ವರ್ಷ ತುಂಬಿದ ನಂತರ ನಿಮಗಾಗಿ ವಾರ್ಷಿಕ ಬಸ್ತಿ ಚಟುವಟಿಕೆಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮ ತೂಕ, ಬೆನ್ನು ಮತ್ತು ಹೊಟ್ಟೆಯನ್ನು (ಜೀರ್ಣಕ್ರಿಯೆ) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಹತ್ತಿರದ ಶುದ್ಧ ಆಯುರ್ವೇದ ವೈದ್ಯರನ್ನು ಕೇಳಬಹುದು.

೧೩. ಮನೆಯವರ ಅಥವಾ ಹೊರಗಿನವರ ಸಹಾಯ ಪಡೆಯುವುದರಲ್ಲಿ ತಪ್ಪಿಲ್ಲ. ಪೋಷಕರ ಆರೋಗ್ಯಕ್ಕಾಗಿ ಇದು ಅಗತ್ಯ.

೧೪. ಕೆಲವೊಮ್ಮೆ ಏನಾಗುತ್ತದೆಯೆಂದರೆ ಎಲ್ಲವೂ ತಪ್ಪುತ್ತಾ ಹೋಗುತ್ತದೆ, ಅದರಲ್ಲಿಯೂ ಮಕ್ಕಳು ಚಿಕ್ಕವರಾಗಿದ್ದರೆ ಮತ್ತು ಸಹಾಯ ಸಿಗದಿದ್ದರೆ, ಬಹಳ ತೊಂದರೆಯಾಗುತ್ತದೆ. ಮಗುವಿನ ಅನಾರೋಗ್ಯ, ಮಹತ್ವದ ಕೆಲಸಗಳು ಮತ್ತು ದೊಡ್ಡ ಮಗನ ಶಾಲೆಯಲ್ಲಿ ಪಾಲಕರ ಸಮ್ಮೇಳನ ಇವೆಲ್ಲವೂ ಒಂದೇ ದಿನ ಬರುತ್ತವೆ, ಹೀಗಾದಾಗ ನಮ್ಮ ದಿನದ ಎಲ್ಲ ಆಯೋಜನೆ ತಪ್ಪಾಗಬಹುದು. ಇಂತಹ ಸಮಯದಲ್ಲಿ ಕೇವಲ ಒಂದು ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ‘This too shall pass’ (ಇದು ಸಹ ದಾಟಿ ಹೋಗುತ್ತದೆ), ಎಂಬುದನ್ನು ಗಮನದಲ್ಲಿಡಿ, ಅದರಿಂದ ಪರಿಹಾರ ಸಿಗುತ್ತದೆ.’

– ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯರ್ವೇದ, ಪುಣೆ.