‘ಸನಾತನ ಬೋರ್ಡ್‌’ ಸ್ಥಾಪನೆಯಾಗುವವರೆಗೂ ಸುಮ್ಮನಿರುವುದಿಲ್ಲ ! – ಶ್ರೀ ನಿಂಬಾರ್ಕ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀಜಿ ಮಹಾರಾಜ್

  • ಪ್ರಯಾಗರಾಜ್‌ನಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಶ್ರೀ ನಿಂಬಾರ್ಕ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀಜಿ ಮಹಾರಾಜ್ ಅವರ ಸಿಂಹ ಗರ್ಜನೆ

  • ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ವಂದನೀಯ ಉಪಸ್ಥಿತಿ !

ವೇದಿಕೆಯಲ್ಲಿ ಉಪಸ್ಥಿತರಿರುವ ಜಗದ್ಗುರು, ಸಂತರು ಮತ್ತು ಗಣ್ಯರು

ಪ್ರಯಾಗರಾಜ್, ಜನವರಿ 28 (ಸುದ್ದಿ) – ಸನಾತನ ಸಂಸ್ಕೃತಿಯನ್ನು ರಕ್ಷಿಸಲು ‘ಸನಾತನ ಬೋರ್ಡ್‌’ ಅಗತ್ಯವಿದೆ. ಬರುವ ಸಮಯದಲ್ಲಿ ಈ ಬೋರ್ಡ್‌ ಆಗುವವರೆಗೂ ಸುಮ್ಮನಿರುವುದಿಲ್ಲ ಮತ್ತು ಈ ಬೋರ್ಡ್‌ ಸ್ಥಾಪನೆಯಾಗುವವರೆಗೂ ಶಾಂತವಾಗಿರುವುದಿಲ್ಲ, ಎಂದು ಶ್ರೀ ನಿಂಬಾರ್ಕ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀಜಿ ಮಹಾರಾಜ್ ಅವರು ಘರ್ಜಿಸಿದರು. ಅವರು ಜನವರಿ 27 ರಂದು ಕುಂಭ ಕ್ಷೇತ್ರ ಸೆಕ್ಟರ್ 18 ರ ಶಾಂತಿ ಸೇವಾ ಶಿಬಿರದಲ್ಲಿ ಆಯೋಜಿಸಲಾದ ನಾಲ್ಕನೇ ಸನಾತನ ಧರ್ಮ ಸಂಸತ್ತಿನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಪ್ರಸಿದ್ಧ ಕಥಾವಾಚಕ ಶ್ರೀ ದೇವಕಿನಂದನ ಠಾಕೂರ್, ಜಗದ್ಗುರು ಸ್ವಾಮಿ ವಿದ್ಯಾಭಾಸ್ಕರಜಿ ಮಹಾರಾಜ, ಜಗದ್ಗುರು ಸ್ವಾಮಿ ರಾಘವಾಚಾರ್ಯಜಿ ಮಹಾರಾಜ, ಪೂ. ಚಿನ್ಮಯಾನಂದ ಬಾಪು, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ‘ಇಸ್ಕಾನ್’ ಮುಖ್ಯಸ್ಥ ಗೌರಂಗ ದಾಸ್, ಸಾಧ್ವಿ ಸರಸ್ವತಿ, ಸಾಧ್ವಿ ಪ್ರಾಚಿ, ಬಾಲಯೋಗಿ ಮಹಾರಾಜ, ಭಾಗ್ಯನಗರ ಶಾಸಕ ಟಿ. ರಾಜಾ ಸಿಂಗ್, ನಟಿ ಮತ್ತು ಭಾಜಪ ಸಂಸದೆ ಹೇಮಾ ಮಾಲಿನಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ದೇಶಾದ್ಯಂತದ ಸಾವಿರಾರು ಧರ್ಮಪ್ರೇಮಿಗಳು, ಭಕ್ತರು, ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಈ ಸಂಸತ್ತಿನಲ್ಲಿ ಉಪಸ್ಥಿತರಿದ್ದರು.

ಕಥಾವಾಚಕ ಶ್ರೀ ದೇವಕಿನಂದನ ಠಾಕೂರ್

ಧರ್ಮಸಂಸತ್ತಿನ ಆರಂಭದಲ್ಲಿ ಗಣ್ಯರು ದೀಪ ಬೆಳಗಿಸಿ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಶಂಖನಾದ ಮಾಡಲಾಯಿತು. ಪ್ರಾಸ್ತಾವಿಕವನ್ನು ಕಥಾವಾಚಕ ಶ್ರೀ ದೇವಕಿನಂದನ ಠಾಕೂರ್ ಅವರು ಮಾಡಿದರು. ಸಂಪೂರ್ಣ ಧರ್ಮಸಂಸತ್ತಿನಲ್ಲಿ ಉಪಸ್ಥಿತರಿದ್ದ ವಕ್ತಾರರ ಸಹಿತ ಭಕ್ತರು ಮತ್ತು ಹಿಂದುತ್ವನಿಷ್ಠರು ವಕ್ಫ್ ಬೋರ್ಡ್‌ಅನ್ನು ರದ್ದುಗೊಳಿಸಬೇಕೆಂದು ಬಲವಾಗಿ ಒತ್ತಾಯಿಸಿದರು. ಇದರೊಂದಿಗೆ, ‘ಜಯ ಶ್ರೀ ರಾಮ’, ‘ಹಿಂದೂ ರಾಷ್ಟ್ರ’, ‘ಭಾರತ ಮಾತಾ ಕಿ ಜಯ’ ಮುಂತಾದ ಘೋಷಣೆಗಳು ಕೂಗಿದರು.

ನಾವು ಇತಿಹಾಸವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಭೂಗೋಲವನ್ನು ಹೇಗೆ ಬದಲಾಯಿಸಬಹುದು ? – ಜಗದ್ಗುರು ಸ್ವಾಮಿ ವಿದ್ಯಾಭಾಸ್ಕರಜಿ ಮಹಾರಾಜ

ಜಗದ್ಗುರು ಸ್ವಾಮಿ ವಿದ್ಯಾಭಾಸ್ಕರಜಿ ಮಹಾರಾಜ

ಜಗದ್ಗುರು ಸ್ವಾಮಿ ವಿದ್ಯಾಭಾಸ್ಕರಜಿ ಮಹಾರಾಜ್ ಹೇಳಿದರು, “ಇಂದು ನಾವು ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಮಾಡುತ್ತಿದ್ದೇವೆ; ಆದರೆ ದಶರಥ ರಾಜನ ರಾಜ್ಯವು ಇಡೀ ಪೃಥ್ವಿಯನ್ನು ಆವರಿಸಿತ್ತು ಎಂದು ನಾವು ತಿಳಿದುಕೊಳ್ಳಬೇಕು. ಈ ಎಲ್ಲಾ ಇತಿಹಾಸವು ಭಗವದ್ ಮಹಾಪುರಾಣದಲ್ಲಿದೆ. ನಾವು ಇತಿಹಾಸವನ್ನು ಅರ್ಥಮಾಡಿಕೊಳ್ಳದಿದ್ದರೆ, ಭೂಗೋಲ ಹೇಗೆ ಬದಲಾಗುತ್ತದೆ ? ಸನಾತನ ಶಾಸ್ತ್ರಗಳನ್ನು ರಕ್ಷಿಸಲು ಸನಾತನ ಬೋರ್ಡ್‌ಯ ತುರ್ತು ಅವಶ್ಯಕತೆಯಿದೆ”, ಎಂದು ಹೇಳಿದರು.

ಸನಾತನ ಬೋರ್ಡ್‌ ಸರಕಾರಿ ಆಗಿರಬಾರದು ! – ಜಗದ್ಗುರು ಸ್ವಾಮಿ ರಾಘವಾಚಾರ್ಯಜಿ ಮಹಾರಾಜ

ಜಗದ್ಗುರು ಸ್ವಾಮಿ ರಾಘವಾಚಾರ್ಯಜಿ ಮಹಾರಾಜ

ಜಗದ್ಗುರು ಸ್ವಾಮಿ ರಾಘವಾಚಾರ್ಯಜಿ ಮಹಾರಾಜ್ ಮಾತನಾಡಿ, “ಸನಾತನ ಬೋರ್ಡ್‌ ಸರಕಾರಿ ಆಗಿರಬಾರದು”. ನಾಲ್ವರು ಶಂಕರಾಚಾರ್ಯರು, ನಾಲ್ಕು ಸಂಪ್ರದಾಯಗಳ ಪೀಠಾಧೀಶ್ವರರು, ಅಖಾಡಗಳ ಆಚಾರ್ಯ ಮಹಾಮಂಡಲೇಶ್ವರರು, ಶ್ರೀ ಮಹಂತರು ಮುಂತಾದವರನ್ನು ಒಳಗೊಂಡ ಜಂಟಿ ನಿರ್ವಹಣಾ ಸಮಿತಿ ಇರಬೇಕು. “ನಮಗೆ ಭಾರತದ ಮೇಲೆ ಮಾತ್ರವಲ್ಲ, ಇಡೀ ಭೂಮಿಯ ಮೇಲೆಯೂ ಅಧಿಕಾರವಿದೆ.”

ಹಿಂದೂಗಳು ಈಗ ರೌದ್ರ ರೂಪವನ್ನು ಧರಿಸಬೇಕಾಗುತ್ತದೆ ! – ಭಾಜಪ ಶಾಸಕ ಟಿ. ರಾಜಾಸಿಂಗ್

ಭಾಜಪ ಶಾಸಕ ಟಿ. ರಾಜಾಸಿಂಗ್

ತೆಲಂಗಾಣದ ಭಾಜಪ ಶಾಸಕ ಟಿ. ರಾಜಾ ಸಿಂಗ್ ಮಾತನಾಡಿ, “ಹಿಂದೆ 2 ಲಕ್ಷ ಎಕರೆ ಇದ್ದ ವಕ್ಫ್ ಬೋರ್ಡ್‌ನ ಭೂಮಿ ಈಗ 10 ಲಕ್ಷ ಎಕರೆಗೆ ಹೆಚ್ಚಾಗಿದೆ”. ದೇಶದ ಭೂಮಾಲೀಕರ ಪಟ್ಟಿಯಲ್ಲಿ ರಕ್ಷಣಾ ಇಲಾಖೆ (18 ಲಕ್ಷ ಎಕರೆ) ಮತ್ತು ರೈಲ್ವೆ ಇಲಾಖೆ (12 ಲಕ್ಷ ಎಕರೆ) ನಂತರ ವಕ್ಫ್ ಬೋರ್ಡ್ (10 ಲಕ್ಷ ಎಕರೆ ಭೂಮಿ) ಸ್ಥಾನ ಇದೆ. ನಮ್ಮ ದೇವಾಲಯಗಳು ಮತ್ತು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದ್ದರಿಂದ, ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸನಾತನ ಬೋರ್ಡ್‌ನ ಅಗತ್ಯವಿದೆ. ಇದರೊಂದಿಗೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಗೋಹತ್ಯೆ ಮುಂತಾದ ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ತಡೆಯುತ್ತಿರುವ ಹಿಂದೂಗಳಿಗೆ ಈ ಬೋರ್ಡ್ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಕೇಂದ್ರ ಸರಕಾರವು ಎಲ್ಲಾ ಸಾಧು-ಸಂತರೊಂದಿಗೆ ಚರ್ಚಿಸಿ ಈ ಬೋರ್ಡ್ಅನ್ನು ರಚಿಸಬೇಕು. ಹಿಂದೂಗಳು ಸನಾತನ ಬೋರ್ಡ್‌ಗಾಗಿ 4 ಬಾರಿ ಒತ್ತಾಯಿಸಿದ್ದಾರೆ, ಆದರೆ ಅದು ಸ್ಥಾಪನೆಯಾಗಿಲ್ಲ. ಆದ್ದರಿಂದ ಹಿಂದೂಗಳು ಈಗ ಅದಕ್ಕಾಗಿ ರೌದ್ರ ರೂಪವನ್ನು ತೆಗೆದುಕೊಳ್ಳಬೇಕಾಗುತ್ತದೆ.” ಎಂದು ಹೇಳಿದರು.

ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಎಲ್ಲಾ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿ

ಧರ್ಮ ಸಂಸತ್ತಿನಲ್ಲಿ ಮಾತನಾಡುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಮಾತನಾಡಿ, “ಈ ಧರ್ಮ ಸಂಸತ್ತು 100 ಕೋಟಿ ಹಿಂದೂಗಳ ಭಾವನೆಗಳ ಅಭಿವ್ಯಕ್ತಿಯಾಗಿದೆ”. ನಾವು ಈಗಾಗಲೇ ಶೇಕಡಾ 30 ರಷ್ಟು ಭೂಮಿಯನ್ನು ಶೇಕಡಾ 15 ರಷ್ಟು ಜನಸಂಖ್ಯೆಗೆ ನೀಡಿದ್ದೇವೆ. ಈಗ ವಕ್ಫ್ ಬೋರ್ಡ್‌ನ ಮೂಲಕ 10 ಲಕ್ಷ ಎಕರೆ ಭೂಮಿ ನೀಡಲಾಗಿದೆ. ಇದು ಮತ್ತೊಂದು ವಿಭಜನೆಯ ನಾಂದಿಯಾಗಿದೆ. ನಮ್ಮ ದೇಶ ‘ಜಾತ್ಯತೀತ’ವಾದರೂ, ವಕ್ಫ್ ಬೋರ್ಡ್‌ಗೆ ಹಣವನ್ನು ಒದಗಿಸುವ ಮೂಲಕ ಇಸ್ಲಾಂ ಧರ್ಮವನ್ನು ರಕ್ಷಿಸಲಾಗುತ್ತಿದೆ ಮತ್ತು ಉತ್ತೇಜಿಸಲಾಗುತ್ತಿದೆ. ವಕ್ಫ್ ಬೋರ್ಡ್‌ ಮೂಲಕ ಭಾರತವನ್ನು ಇಸ್ಲಾಮೀಕರಣಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ರಾಜರು ದೇವಾಲಯಗಳ ನಿರ್ಮಾಣಕ್ಕೆ ಹಣ ನೀಡುತ್ತಿದ್ದರು. ಈಗ ಅವರು ದೇವಾಲಯದ ನಿಧಿಯಿಂದ ಆಡಳಿತ ನಡೆಸುತ್ತಿದ್ದಾರೆ. ಇದು ಮಹಾ ಪಾಪವಾಗಿದೆ. ನಮ್ಮ ಮುಂದಿರುವ ಎಲ್ಲಾ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರವೆಂದರೆ ‘ಸನಾತನ ಬೋರ್ಡ್‌’ನ ಸ್ಥಾಪನೆ ಮತ್ತು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು’. ಎಂದು ಹೇಳಿದರು.

‘ಸನಾತನ ಹಿಂದೂ ಬೋರ್ಡ್ ಕಾಯ್ದೆ’ ಪ್ರಸ್ತಾವನೆ ಅಂಗೀಕಾರ !

ಈ ಸಂದರ್ಭದಲ್ಲಿ, ‘ಸನಾತನ ಹಿಂದೂ ಬೋರ್ಡ್ ಕಾಯ್ದೆ’ಯ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಈ ಕಾಯ್ದೆಯ ಪೀಠಿಕೆಯಲ್ಲಿ, “ಭಾರತದಲ್ಲಿ ಹಿಂದೂ ದೇವಾಲಯಗಳು, ದೇವಾಲಯದ ಆಸ್ತಿಗಳು, ನಿಧಿಗಳು ಮತ್ತು ಸನಾತನ ಧಾರ್ಮಿಕ ಸಂಪ್ರದಾಯಗಳ ನಿರ್ವಹಣೆ, ರಕ್ಷಣೆ ಮತ್ತು ನಿರ್ವಹಣೆಗಾಗಿ ಕೇಂದ್ರೀಕೃತ ಸನಾತನ ಹಿಂದೂ ಬೋರ್ಡ್ಅನ್ನು ಸ್ಥಾಪಿಸುತ್ತದೆ” ಎಂದು ಹೇಳಲಾಗಿದೆ. ಸನಾತನ ಧರ್ಮ ಮತ್ತು ಅದರ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಮೂಲಕ ದೇವಾಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ” ನೆರೆದಿದ್ದವರೆಲ್ಲರೂ ತಮ್ಮ ಕೈಗಳನ್ನು ಎತ್ತುವ ಮೂಲಕ ಪ್ರಸ್ತಾವನೆಯನ್ನು ಅನುಮೋದಿಸಿದರು.