ಹಿಂದೂ ರಾಷ್ಟ್ರದ ಬೇಡಿಕೆಯನ್ನು ಈಡೇರಿಸಲು ಸರಕಾರ ಗಂಭೀರವಾಗಿ ವಿಚಾರ ಮಾಡಬೇಕು ! – ಖ್ಯಾತ ಪ್ರವಚನಕಾರ ಸಾಧ್ವಿ ಪ್ರಜ್ಞಾ ಭಾರತಿ, ದೆಹಲಿ

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ, ಜನವರಿ 27 (ಸುದ್ದಿ) – ಸರಕಾರ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು, ಏಕೆಂದರೆ ಇದರಲ್ಲಿ ಎಲ್ಲರ ಹಿತ ಇದೆ. ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರ ಅಲ್ಪಸಂಖ್ಯಾತರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುವುದಿಲ್ಲ. ಭಾರತ ನಮ್ಮ ರಕ್ತದ ಕಣಕಣದಲ್ಲಿ ಸೇರಬೇಕು. ಇದಕ್ಕಾಗಿ ಸರಕಾರ ನಮ್ಮ ಹಿಂದೂ ರಾಷ್ಟ್ರದ ಬೇಡಿಕೆಗೆ ಗಮನ ಕೊಡಬೇಕು ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೂರಾಷ್ಟ್ರ ಶೀಘ್ರವಾಗಿ ಆಗಬೇಕು ಎಂದು ದೆಹಲಿಯ ಖ್ಯಾತ ಪ್ರವಚನಕಾರ ಸಾಧ್ವಿ ಪ್ರಜ್ಞಾ ಭಾರತಿಯವರು ಇಲ್ಲಿ ಮಾರ್ಗದರ್ಶನ ನೀಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶ್ರೀ. ಆನಂದ ಜಖೋಟಿಯಾ ಅವರು ಸಾಧ್ವಿ ಪ್ರಜ್ಞಾ ಭಾರತಿಗೆ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು.

ಸಾಧ್ವಿ ಪ್ರಜ್ಞಾ ಭಾರತಿ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಸಾಧ್ವಿ ಪ್ರಜ್ಞಾ ಭಾರತಿಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯಗಳ ಸಮನ್ವಯಕ ಶ್ರೀ. ಸುನಿಲ ಘನವಟ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಮನ್ವಯಕ ಶ್ರೀ. ಆನಂದ ಜಾಖೋಟಿಯಾ ಅವರು ಸಾಧ್ವಿ ಪ್ರಜ್ಞಾ ಭಾರತಿಗೆ ಪ್ರದರ್ಶನದ ಮಾಹಿತಿಯನ್ನು ನೀಡಿದರು. ಆಗ ಅವರು, “ಹಲವು ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಬಗ್ಗೆ ನನಗೆ ತಿಳಿದಿದೆ. ಸಂಪೂರ್ಣ ನಿಷ್ಠೆಯಿಂದ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀ. ಆನಂದ ಜಖೋಟಿಯಾ ಕಾರ್ಯ ಮಾಡುತ್ತಿದ್ದಾರೆ’, ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ
ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರಿಂದ ಸಾಧ್ವಿ ಪ್ರಜ್ಞಾ ಭಾರತಿ ಅವರಿಗೆ ಸನ್ಮಾನ

ಸಾಧ್ವಿ ಪ್ರಜ್ಞಾ ಭಾರತಿ ಹೇಳಿದರು,

1. ನಮ್ಮ ಭಾವನೆಗಳು ಹಿಂದೂ ರಾಷ್ಟ್ರದೊಂದಿಗೆ ಜೋಡಿಸಲ್ಪಟ್ಟಿದೆ. ಅನೇಕ ಕ್ರೈಸ್ತ ಮತ್ತು ಇಸ್ಲಾಮಿಕ್ ರಾಷ್ಟ್ರಗಳಿವೆ; ಆದರೆ ಇದುವರೆಗೂ ಹಿಂದೂಗಳು ಹಿಂದೂ ರಾಷ್ಟ್ರ ನೋಡಿಲ್ಲ. ನಾವು ಹಿಂದೂಗಳು ಮತ್ತು ಸನಾತನಿಗಳಾಗಿದ್ದೇವೆ. ನಾವು ನಮ್ಮದೇ ಆದ ಪದ್ಧತಿಯಲ್ಲಿ ಜೀವನವನ್ನು ಜೀವಿಸುವವರಿದ್ದೇವೆ. ಆ ಅಧಿಕಾರ ಹಿಂದೂಗಳಿಗೆ ಇದೆ.

2. ನಾವು ಸರಕಾರಕ್ಕೆ ಹೆಚ್ಚಿನ ವಿಷಯಗಳ ಬೇಡಿಕೆಯನ್ನು ಮಂಡಿಸಿಲ್ಲ. ‘ನಮಗೆ ಹಿಂದೂ ರಾಷ್ಟ್ರ ಏಕೆ ಬೇಕು ?’ ಎನ್ನುವ ಭಾವನೆಯನ್ನು ಸರಕಾರ ಅರ್ಥಮಾಡಿಕೊಳ್ಳಬೇಕು: ಇದರಲ್ಲಿ ಭಾರತದ ಹಿತವಿದೆ. ಮಹಾಕುಂಭದ ಮೂಲಕ ಜಾಗತಿಕ ಮಟ್ಟದಲ್ಲಿ ಚೈತನ್ಯದ ಜಾಗೃತಿಯಾಗಿ ಒಂದು ಸಂದೇಶ ಎಲ್ಲರಿಗೂ ತಲುಪುತ್ತಿದ್ದು, ಹಿಂದೂಗಳಲ್ಲಿ ಜಾಗೃತಿ ಮೂಡುತ್ತಿದೆ.

3. ಒಂದು ವೇಳೆ ಹಿಂದೂ ರಾಷ್ಟ್ರ ನಿರ್ಮಾಣವಾದರೆ, ಭಾರತದಲ್ಲಿ ಎಷ್ಟು ಬೆಳವಣಿಗೆಗಳು ನಡೆಯುತ್ತವೆ? ಇಡೀ ಜಗತ್ತು ನಮಗೆ ತಲೆಬಾಗುತ್ತದೆ. ಭಾರತವು ವಿಶ್ವದ ಮುಖಂಡ ಮತ್ತು ವಿಶ್ವಗುರುವಾಗಿ ಹೊರಹೊಮ್ಮಲಿದೆ; ಆದರೆ ಇದು ಯಾವಾಗ ಆಗುತ್ತದೆ? ಇದು ಭಾರತ ಹಿಂದೂ ರಾಷ್ಟ್ರವಾದ ಬಳಿಕ ಈ ಎಲ್ಲ ವಿಷಯಗಳು ನಡೆಯುತ್ತವೆ.