WAQF Board Properties : ಉತ್ತರ ಪ್ರದೇಶ ವಕ್ಫ ಬೋರ್ಡ್‌ ದಾವೆ ಮಾಡಿರುವ ಆಸ್ತಿಗಳಲ್ಲಿ ಶೇ. 78 ರಷ್ಟು ಸರಕಾರಕ್ಕೆ ಸೇರಿದ ಆಸ್ತಿ !

ಉತ್ತರ ಪ್ರದೇಶ ಸರಕಾರದಿಂದ ಜಂಟಿ ಸಂಸದೀಯ ಸಮಿತಿಗೆ ಮಾಹಿತಿ

ನವದೆಹಲಿ – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವು ಜಂಟಿ ಸಂಸದೀಯ ಸಮಿತಿಗೆ, ರಾಜ್ಯದಲ್ಲಿ ವಕ್ಫ ಬೋರ್ಡ್‌ ದಾವೆ ಮಾಡಿರುವ ಆಸ್ತಿಗಳಲ್ಲಿ ಶೇ. 78 ರಷ್ಟು ಸರಕಾರಕ್ಕೆ ಸೇರಿದ್ದು ಎಂದು ತಿಳಿಸಿದೆ. ವಕ್ಫ್ ಬೋರ್ಡ್‌ಗೆ ಅದರ ಮೇಲೆ ಯಾವುದೇ ಕಾನೂನುಬದ್ಧ ಮಾಲೀಕತ್ವದ ಹಕ್ಕಿಲ್ಲ.

1. ಉತ್ತರ ಪ್ರದೇಶ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಆಯೋಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಿಕಾ ಗರ್ಗ್ ಅವರು ಜಂಟಿ ಸಂಸದೀಯ ಸಮಿತಿಗೆ ಮಾಹಿತಿ ನೀಡಿ, ವಕ್ಫ ಬೋರ್ಡ್‌ನ ರಾಜ್ಯದಲ್ಲಿ 14 ಸಾವಿರ ಹೆಕ್ಟೇರ್ ಭೂಮಿ ಇದೆ ಎಂದು ಹೇಳಿಕೊಳ್ಳುತ್ತದೆ. ಅಧಿಕೃತ ದಾಖಲೆಗಳ ಪ್ರಕಾರ, ಈ ಭೂಮಿಯ 11 ಸಾವಿರದ 700 ಹೆಕ್ಟೇರ್ ಸರಕಾರಿ ಭೂಮಿಯಾಗಿದೆ. ವಕ್ಫ ಬೋರ್ಡ್‌ನ ಹೇಳಿಕೊಂಡಿರುವ 60 ಆಸ್ತಿಗಳು ಸರಕಾರಿ ಆಸ್ತಿಗಳಾಗಿವೆ ಎಂದು ಸಚ್ಚರ್ ಸಮಿತಿ ವರದಿ ಹೇಳುತ್ತದೆ.

2. ಉತ್ತರ ಪ್ರದೇಶ ಸರಕಾರವು ಸಮಿತಿಗೆ, ರಾಜ್ಯದಲ್ಲಿ ವಕ್ಫ್ ಆಸ್ತಿಗಳನ್ನು ಗುರುತಿಸಲು ಮಾರ್ಗಸೂಚಿಗಳು ಮತ್ತು ನಿಯಮಗಳಿವೆ. ವಕ್ಫ ಬೋರ್ಡ್‌ನ ಯಾವುದೇ ಭೂಮಿಯನ್ನು ಹಕ್ಕು ಸಾಧಿಸಿದಾಗ, ಅದನ್ನು 1952 ರ ದಾಖಲೆಗಳೊಂದಿಗೆ ಹೋಲಿಸಲಾಗುತ್ತದೆ. ಒಂದು ವೇಳೆ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೊಂದಾಣಿಕೆಯಲ್ಲಿ ಕಂಡುಬಂದರೆ, ಆ ಭೂಮಿಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸರಕಾರವನ್ನು ವಿನಂತಿಸಬಹುದು.

3. ಲಕ್ಷ್ಮಣಪುರಿ (ಲಕ್ನೋ) ದಲ್ಲಿರುವ ಪ್ರಸಿದ್ಧ ಸ್ಮಾರಕಗಳಾದ ಬಡಾ ಇಮಾಂಬರಾ, ಚೋಟಾ ಇಮಾಂಬರಾ ಮತ್ತು ಅಯೋಧ್ಯೆಯಲ್ಲಿರುವ ‘ಬೇಗಂ ಕಾ ಮಕಬರಾ’ ಇವೆಲ್ಲವೂ ಸರಕಾರಿ ಆಸ್ತಿಗಳಾಗಿವೆ; ಆದರೆ ವಕ್ಫ ಬೋರ್ಡ್‌ನ ಈ ಸಂರಕ್ಷಿತ ಸ್ಮಾರಕಗಳ ಮಾಲೀಕತ್ವವನ್ನು ಪ್ರತಿಪಾದಿಸುತ್ತಿದೆ.

4. ಉತ್ತರ ಪ್ರದೇಶ ಸರಕಾರದ ಕಂದಾಯ ಇಲಾಖೆಯು ಜಂಟಿ ಸಂಸತ್ತಿನ ಸಮಿತಿಗೆ, ವಕ್ಫ ಬೋರ್ಡ್‌ ಯಾವ ಭೂಮಿಯ ಮೇಲೆ ದಾವೆ ಮಾಡುತ್ತಿದೆಯೋ ಆ ದೊಡ್ಡ ಭಾಗ ಕಂದಾಯ ದಾಖಲೆಗಳಲ್ಲಿ ವರ್ಗ 5 ಮತ್ತು ವರ್ಗ 6 ರ ಅಡಿಯಲ್ಲಿ ದಾಖಲಿಸಲಾಗಿದೆ. 5 ಮತ್ತು 6 ರಲ್ಲಿ ಸರಕಾರಿ ಆಸ್ತಿ ಮತ್ತು ಗ್ರಾಮ ಸಭೆಯ ಆಸ್ತಿಗಳು ಸೇರಿವೆ.

5. ಉತ್ತರ ಪ್ರದೇಶದ ವಕ್ಫ ಬೋರ್ಡ್‌ನ 1 ಲಕ್ಷ 30 ಸಾವಿರಕ್ಕೂ ಹೆಚ್ಚು ಆಸ್ತಿಗಳ ಮೇಲೆ ಹಕ್ಕು ಸಾಧಿಸುತ್ತಿದೆ. ಈ ಆಸ್ತಿಗಳಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ ಅಡಿಯಲ್ಲಿರುವ ಸ್ಮಾರಕಗಳು, ಬಲರಾಂಪುರ ಸರಕಾರಿ ಆಸ್ಪತ್ರೆ, ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಜಮೀನುಗಳು ಮತ್ತು ಇತರ ಅನೇಕ ಸರಕಾರಿ ಆಸ್ತಿಗಳು ಸೇರಿವೆ. ವಕ್ಫ ಬೋರ್ಡ್‌ ಸರಕಾರದ ಯಾವ ಆಸ್ತಿಗಳ ಮೇಲೆ ದಾವೆ ಮಾಡುತ್ತಿದೆಯೋ ಅದು ಪುರಸಭೆಗಳು ಅಧಿಕೃತವಾಗಿ ಸಂಬಂಧಿತ ಇಲಾಖೆಗಳಿಗೆ ಹಂಚಿಕೆ ಮಾಡಿದ್ದವು.

ಸಂಪಾದಕೀಯ ನಿಲುವು

ವಕ್ಫ್ ಬೋರ್ಡ್‌ಅನ್ನು ವಿಸರ್ಜಿಸದೆ ಬೇರೆ ಪರ್ಯಾಯವಿಲ್ಲ, ಇದೇ ಈ ಅಂಕಿಅಂಶಗಳಿಂದ ಗಮನಕ್ಕೆ ಬರುತ್ತದೆ ! ಇದನ್ನು ಮಾಡದಿದ್ದರೆ, ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ !