TN CM Shoes Secular Pongal : ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉದಯನಿಧಿಯವರಿಂದ ಬೂಟುಗಳನ್ನು ಧರಿಸಿ ‘ಜಾತ್ಯತೀತ’ ಪೊಂಗಲ್ ಆಚರಣೆ

ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಸುರಿಮಳೆ

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ಹಿಂದೂ ಹಬ್ಬವಾದ ‘ಪೊಂಗಲ’ನ್ನು ಸಹ ‘ಜಾತ್ಯತೀತ’ವನ್ನಾಗಿಸುವ ಪಿತೂರಿಯನ್ನು ಡಿಎಂಕೆ ಸರಕಾರ ನಡೆಸಿದೆ. ಜನವರಿ 14 ರಂದು ಪೊಂಗಲ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ರವರು ಒಂದು ಕಡೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸ್ಥಳದಲ್ಲಿ ‘ಪೊಂಗಲ’ ನಿಮಿತ್ತದಿಂದ ಅನ್ನವನ್ನು ಬೇಯಿಸುವ ವಿಧಿಯು ನಡೆಯುತ್ತಿತ್ತು. ಆಗ ಸ್ಟಾಲಿನ್ ರವರು ಹಿಜಾಬ್ (ಮುಸ್ಲಿಂ ಮಹಿಳೆಯರ ಮುಖ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ) ಧರಿಸಿದ ಮುಸ್ಲಿಂ ಮಹಿಳೆ ಹಾಗೂ ಕುತ್ತಿಗೆಯಲ್ಲಿ ಶಿಲುಬೆಯನ್ನು (ಕ್ರೈಸ್ತರ ಧಾರ್ಮಿಕ ಚಿಹ್ನೆ) ಧರಿಸಿದ ಕ್ರೈಸ್ತ ಮಹಿಳೆಯೊಂದಿಗೆ ಅನ್ನ ಬೇಯಿಸಿದರು; ಆದರೆ, ಅದೇ ಸಮಯದಲ್ಲಿ ಅಲ್ಲಿದ್ದ ಹಿಂದೂ ಮಹಿಳೆಯನ್ನು ಪಕ್ಕಕ್ಕೆ ತಳ್ಳಲಾಯಿತು. ಆಗ ಸ್ಟಾಲಿನ್ ತಂದೆಮಗನ ಕಾಲುಗಳಲ್ಲಿ ಬೂಟುಗಳಿದ್ದವು. ಈ ಘಟನೆಯ ಬಗ್ಗೆ ಅವರಿಬ್ಬರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ. ಈ ಘಟನೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

1. ಪೊಂಗಲ ಹಬ್ಬದಲ್ಲಿ, ಒಲೆಯ ಮೇಲೆ ಮಣ್ಣಿನ ಮಡಕೆಗಳಲ್ಲಿ ಅನ್ನವನ್ನು ಬೇಯಿಸಲಾಗುತ್ತದೆ. ಸೂರ್ಯ ದೇವರು, ಇಂದ್ರ, ಹಸುಗಳು ಮತ್ತು ಹೋರಿಗಳು ಹಾಗೆಯೇ ಕೃಷಿಗೆ ಸಂಬಂಧಿಸಿದ ಚಿಹ್ನೆಗಳನ್ನು ಪೂಜಿಸಲಾಗುತ್ತದೆ. ಈ ನಿಮಿತ್ತ ಪೂಜೆ ಮಾಡುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರ ಛಾಯಾಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ಹಿಜಾಬ್ ಧರಿಸಿದ್ದ ಮತ್ತು ಬೂಟುಗಳನ್ನು ಹಾಕಿದ್ದ ಮಹಿಳೆಯಲ್ಲಿ ಓರ್ವ ಹುಡುಗಿಗೆ ಪ್ರಸಾದವನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ರವರ ಮಗ ಮತ್ತು ರಾಜ್ಯದ ಸಚಿವರಾದ ಉದಯನಿಧಿಯವರ ಛಾಯಾಚಿತ್ರದ ಬಗ್ಗೆಯೂ ಇದೇ ರೀತಿಯ ಪ್ರಶ್ನೆಗಳು ಎದ್ದಿವೆ.

ಜನರು ಇದನ್ನು ಟೀಕಿಸುತ್ತ, ಹಿಜಾಬ ಧರಿಸಿದ ಮಹಿಳೆಯರನ್ನು ಸೇರಿಸಿಕೊಳ್ಳುವುದು ಪೊಂಗಲ ಹಬ್ಬವನ್ನು ಜಾತ್ಯತೀತಗೊಳಿಸುವ ಪ್ರಯತ್ನವಾಗಿದ್ದು ಹಿಂದೂಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.

2. ಒಂದು ಸುದ್ದಿವಾಹಿನಿಯ ನಿರೂಪಕರಾದ ಸುಮಂತ ರಮಣರವರು, ‘X’ ನಲ್ಲಿ ಪೋಸ್ಟ್ ಮಾಡುತ್ತ,  ಈ ಛಾಯಾಚಿತ್ರದಲ್ಲಿ ಒಲೆ ಉರಿಯುತ್ತಿರುವುದು ಕಾಣಿಸುತ್ತಿಲ್ಲ, ಪಾತ್ರೆಗಳಲ್ಲಿ ಆಹಾರ ಕಾಣಿಸುತ್ತಿಲ್ಲ, ಬೂಟುಗಳನ್ನು ಧರಿಸಿರುವುದು ಮತ್ತು ಹಿಂದೂ ಮಹಿಳೆಯನ್ನು ಪಕ್ಕಕ್ಕೆ ತಳ್ಳುವುದು, ಇವೆಲ್ಲವೂ ದ್ರಾವಿಡವಾದದ (ಆರ್ಯ vs. ದ್ರಾವಿಡ) ಪೊಳ್ಳುತನವನ್ನು ದರ್ಶಿಸುತ್ತದೆ, ಎಂದು ಹೇಳಿದರು. ಈ ಪೋಸ್ಟನಲ್ಲಿ ಮುಂದೆ,  ‘ಈ ಕಾರ್ಯಕ್ರಮಗಳನ್ನು ಆಯೋಜಿಸುವವರು ಫೋಟೋ ತೆಗೆಯುವ ಕೆಲಸವನ್ನು ಉತ್ತಮವಾಗಿ ಮಾಡಲಾರರೇ ?’  ಸರಕಾರವು ಪ್ರಸಾರ ಕಾರ್ಯಕ್ಕಾಗಿ ಹೊಸ ಜನರನ್ನು ನೇಮಿಸುವ ಸಮಯ ಬಂದಿದೆ” ಎಂದು ಹೇಳುತ್ತಾ ವ್ಯಂಗ್ಯ ಮಾಡಿದ್ದಾರೆ.

ಸಂಪಾದಕೀಯ ನಿಲುವು

  • ತಮ್ಮನ್ನು ನಾಸ್ತಿಕರೆಂದು ಕರೆದುಕೊಳ್ಳುವ, ಸನಾತನ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಸ್ಟಾಲಿನ ಕುಟುಂಬವು ಪೊಂಗಲ ಆಚರಣೆಯ ಹೆಸರಿನಲ್ಲಿ ಅದನ್ನು ಅವಮಾನಿಸುತ್ತಿದ್ದಾರೆ. ಇದರ ವಿರುದ್ಧ ಹಿಂದೂಗಳು ವಿಡಂಬನೆ ಮಾಡಿರುವ ಕುರಿತು ದೂರು ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಬೇಕು. ಇಂತಹ ಜನರು ಶಿಕ್ಷೆಯಾದಾಗಲೇ ಸ್ವಲ್ಪ ಮಟ್ಟಿಗಾದರೂ ಪಾಠ ಕಲಿಯುತ್ತಾರೆ !
  • ಇತರ ಧರ್ಮಗಳ ಬಗ್ಗೆ ಹೀಗೆ ಅವಮಾನ ಮಾಡಿದ್ದರೆ ಅವರ ವಿರುದ್ಧ ‘ಸರ್ ತನ್ ಸೆ ಜುದಾ’ (ಶಿರಚ್ಛೇದ ಮಾಡುವ) ಫತ್ವಾಗಳು (ಇಸ್ಲಾಂನಲ್ಲಿರುವ ಕಾನೂನಾತ್ಮಕ ಮತ ಅಥವಾ ಆಜ್ಞೆಗಳು) ಹೊರಡುತ್ತಿದ್ದವು!