ISRO : ಬಾಹ್ಯಾಕಾಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಭಾರತದ ಇಸ್ರೋ

 ಮಹತ್ವಾಕಾಂಕ್ಷೆಯ SpaDeX ಮಿಷನ್ ಯಶಸ್ವೀ !

(ಡಾಕಿಂಗ್ ಪ್ರಕ್ರಿಯೆ ಅಂದರೆ ಎರಡೂ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸುವುದು)

ಮಂಗಳುರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬಾಹ್ಯಾಕಾಶದಲ್ಲಿ ಮತ್ತೊಂದು ಮಹತ್ವದ ಇತಿಹಾಸ ಸೃಷ್ಟಿಸಿದೆ. Spacex ಮಿಷನ್ ಅಡಿಯಲ್ಲಿ ಬಾಹ್ಯಾಕಾಶ ನೌಕೆ ಡಾಕಿಂಗ್ ಪ್ರಕ್ರಿಯೆಯು ಯಶಸ್ವಿಯಾಗಿ ನಿರ್ವಹಿಸಿತು. ಈಗ ಅಮೆರಿಕ, ರಷ್ಯಾ, ಚೀನಾ ನಂತರ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 2025 ರಲ್ಲಿ ಇಸ್ರೋದ ಮೊದಲ ಪ್ರಮುಖ ಯಶಸ್ಸು ಎಂಬುದು ಗಮನಾರ್ಹ ಅಂಶವಾಗಿದೆ. ಈ ಸಾಧನೆಗೆ ಇಸ್ರೋ ಮುಖ್ಯಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.