ಆಗಿನ ರಾಷ್ಟ್ರಪತಿ ಪ್ರಣಬ ಮುಖರ್ಜಿ ಅವರ ಹೇಳಿಕೆಯನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟ ಪ.ಪೂ.ಸರಸಂಘಚಾಲಕ ಡಾ. ಮೋಹನಜಿ ಭಾಗವತ !
(‘ಘರವಾಪಸಿ’ ಎಂದರೆ ಮತಾಂತರಗೊಂಡ ಹಿಂದೂಗಳನ್ನು ಪುನಃ ಸ್ವಂತ ಧರ್ಮಕ್ಕೆ ಮರಳಿ ಕರೆತರುವುದು)
ಇಂದೋರ (ಮಧ್ಯಪ್ರದೇಶ) – ಪ್ರಣಬ ಮುಖರ್ಜಿ ಅವರು ರಾಷ್ಟ್ರಪತಿಯಾಗಿದ್ದಾಗ, ಸಂಘದ ‘ಘರವಾಪಸಿ’ ಕಾರ್ಯಕ್ರಮವನ್ನು ಶ್ಲಾಘಿಸಿದ್ದರು ಮತ್ತು ‘ಈ ‘ಘರ್ ವಾಪಸಿ’ ಕಾರ್ಯಕ್ರಮ ಇಲ್ಲದಿದ್ದರೆ, ಕೆಲವು ಬುಡಕಟ್ಟು ಸಮುದಾಯಗಳು ದೇಶದ್ರೋಹಿಗಳಾಗುತ್ತಿದ್ದರು’ ಎಂದು ಹೇಳಿದ್ದರು. ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿ ನಡೆದ ದೇವಿ ಅಹಲ್ಯಾಬಾಯಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.
“Without RSS’ Ghar Wapsi initiative, tribals could have turned against the nation!”
H.H. Sarsangachalak Dr. Mohan Bhagwat reveals former President Pranab Mukherjee’s statement at a public event
मोहन भागवत pic.twitter.com/omhwpC0IM3
— Sanatan Prabhat (@SanatanPrabhat) January 15, 2025
ಪ.ಪೂ. ಸರಸಂಘಚಾಲಕ ಡಾ. ಭಾಗವತ ಮಾತು ಮುಂದುವರೆಸಿ,
1. ನಾವು ಮೊದಲ ಬಾರಿಗೆ ಪ್ರಣಬ ಮುಖರ್ಜಿ ಅವರನ್ನು ಭೇಟಿ ಮಾಡಲು ಹೋಗಿದ್ದಾಗ, ಸಂಸತ್ತಿನಲ್ಲಿ ‘ಘರ್ ವಾಪಸಿ’ ಬಗ್ಗೆ ಭಾರಿ ಗದ್ದಲ ಎದ್ದಿತ್ತು. ಆಗ ಪ್ರಣಬ ಮುಖರ್ಜಿ ನನ್ನನ್ನು, ‘ಮತಾಂತರಗೊಂಡ ಬುಡಕಟ್ಟು ಜನಾಂಗದವರು ಏನಾಗುತ್ತಾರೆ?’ ಎಂದು ಕೇಳಿದಾಗ, ನಾನು, ‘ಅವರು ಕ್ರೈಸ್ತರಾಗುತ್ತಾರೆ’ ಎಂದು ಹೇಳಿದೆ. ಇದಕ್ಕೆ ಮುಖರ್ಜಿ, ‘ಇಲ್ಲ, ಅವರು ದೇಶದ್ರೋಹಿಗಳಾಗುತ್ತಾರೆ’ ಎಂದು ಹೇಳಿದರು. “ಈ ಘರ ವಾಪಸಿ ಕಾರ್ಯಕ್ರಮದಿಂದಾಗಿ ಶೇ. 30 ರಷ್ಟು ಬುಡಕಟ್ಟು ಸಮುದಾಯವು ತಮ್ಮ ಮೂಲ ಸ್ವರೂಪಕ್ಕೆ ಮರಳಿರುವುದು ಒಳ್ಳೆಯದು” ಎಂದು ಕೂಡ ಮುಖರ್ಜಿ ಹೇಳಿದ್ದರು.
2. ಒಂದು ವೇಳೆ ಮತಾಂತರವು ಸ್ವಯಂಪ್ರೇರಿತವಾಗಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ರೀತಿಯ ಉಪಾಸನಾ ಪದ್ಧತಿಗಳು ಯೋಗ್ಯವಾಗಿವೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಪೂಜಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ; ಆದರೆ ಆಮಿಷವೊಡ್ಡಿ ಅಥವಾ ಬಲವಂತದ ಮೂಲಕ ಮತಾಂತರವನ್ನು ಮಾಡಿದಾಗ, ಅದರ ಉದ್ದೇಶವು ಆಧ್ಯಾತ್ಮಿಕ ಪ್ರಗತಿಯಲ್ಲ, ಬದಲಿಗೆ ಪ್ರಭಾವವನ್ನು ಹೆಚ್ಚಿಸಲು ಜನರನ್ನು ಅವರ ಬೇರಿನಿಂದ ಕಿತ್ತು ಹಾಕುವುದಾಗಿದೆ.