ಲಂಡನ್ – ಬ್ರಿಟನ್ನಿನ ಹಣಕಾಸು ಸಚಿವೆ ಮತ್ತು ಕಾರ್ಮಿಕ ಪಕ್ಷದ ಸಂಸದೆ ಟುಲಿಪ್ ಸಿದ್ದಿಕರವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರವರ ಅಕ್ಕನ ಮಗಳು. ಸಿದ್ಧಿಕರವರ ಮೇಲೆ ಲಂಡನಲ್ಲಿರುವ ಅವರ ಆಸ್ತಿಗಳ ಸಂದರ್ಭದಲ್ಲಿನ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳಿದ್ದವು. ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್‌ಗೆ ಬರೆದ ಪತ್ರದಲ್ಲಿ, ಟುಲಿಪ್ ಸಿದ್ದಿಕರವರು ತಾನು ಯಾವಾಗಲೂ ಅಧಿಕಾರಿಗಳ ಸಲಹೆಗೆ ಅನುಗುಣವಾಗಿ ಮತ್ತು ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸಿದ್ದೇನೆ, ಆದರೆ ಈ ವಿವಾದಗಳಿಂದಾಗಿ ಸಚಿವ ಸ್ಥಾನ ತ್ಯಜಿಸಲು ನಿರ್ಧರಿಸಿದ್ದೇನೆ, ಎಂದು ಹೇಳಿದ್ದಾರೆ. ತಜ್ಞರು “ಶೇಖ್ ಹಸೀನಾರವರೊಂದಿಗಿನ ಅವರ ಸಂಬಂಧವು ಈ ರಾಜೀನಾಮೆಯ ಪ್ರಮುಖ ಕಾರಣವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
An independent review has confirmed that I have not breached the Ministerial Code and there is no evidence to suggest I have acted improperly.
Nonetheless, to avoid distraction for the Government, I have resigned as City Minister.
Here is my full letter to the Prime Minister. pic.twitter.com/kZeWZfEsei
— Tulip Siddiq (@TulipSiddiq) January 14, 2025
1. ಸಿದ್ದಿಕರವರ ರಾಜೀನಾಮೆಯನ್ನು ಬ್ರಿಟನ್ ಪ್ರಧಾನಿ ಅಂಗೀಕರಿಸಿದ್ದಾರೆ. ಅವರ ವಿರುದ್ಧ ಯಾವುದೇ ಆರ್ಥಿಕ ಅವ್ಯವಹಾರಗಳ ಅಥವಾ ಮಂತ್ರಿ ಪದವಿಯ ನಿಯಮಾವಳಿಗಳ ಉಲ್ಲಂಘನೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪ್ರಧಾನಿಗಳು ಹೇಳಿದ್ದಾರೆ.
2. ಕಾರ್ಮಿಕ ಪಕ್ಷದ ಸಂಸದೆ ಎಮ್ಮಾ ರೆನಾಲ್ಡ್ಸ್ ರವರನ್ನು ಹೊಸ ಹಣಕಾಸು ಸಚಿವರನ್ನಾಗಿ ಮಾಡಲಾಗಿದೆ.
3. ಶೇಖ ಹಸೀನಾ ರವರು ಪ್ರಸ್ತುತ ಭಾರತದಲ್ಲಿದ್ದಾರೆ ಮತ್ತು ಭಾರತವು ಅವರಿಗೆ ರಾಜಕೀಯ ಆಶ್ರಯವನ್ನು ನೀಡಿದೆ.