ಅಪರೇ ನಿಯತಾಹಾರಾಃ ಪ್ರಾಣಾನ್‌ಪ್ರಾಣೇಷು ಜುಹ್ವತಿ|
ಸರ್ವೇಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ||
– ಶ್ರೀಮದ್‌ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೩೦
ಅರ್ಥ: ಮಿತಾಹಾರ ಮಾಡುವವರು ಪ್ರಾಣ ವಾಯುಗಳ ಸ್ಥಾನದಲ್ಲಿ ಹವನ ಮಾಡುತ್ತಾರೆ, ಅಂದರೆ ಪ್ರಾಣಾಪಾನಾದಿ ಎಲ್ಲ ವಾಯುಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುತ್ತಾರೆ. ಈ ಎಲ್ಲ ಯಜ್ಞಕರ್ತರ ಪಾತಕಗಳು ಈ (ಬೇರೆಬೇರೆ) ಯಜ್ಞಗಳಿಂದ ನಾಶವಾಗಿವೆ ಎಂದು ಅರಿವಾಗುತ್ತದೆ.
ಸ್ಪಷ್ಟೀಕರಣ: ಕೆಲವು ಯೋಗಿಗಳು ಆಹಾರವನ್ನು ಸೇವಿಸದೇ ಪ್ರಾಣಶಕ್ತಿಯನ್ನೇ ಪ್ರಾಣವಾಯುವಿನಲ್ಲಿ ಹೋಮ ಮಾಡುತ್ತಾರೆ. ಈ ಯಜ್ಞಕರ್ತರು ಯಜ್ಞಗಳಿಂದ ನಿಷ್ಪಾಪರಾಗಿರುತ್ತಾರೆ. ಇತರ ಅನೇಕರು ತಮ್ಮ ಆಹಾರವನ್ನು ಮಿತಗೊಳಿಸಿ ಪ್ರಾಣಗಳನ್ನು ಪ್ರಾಣದಲ್ಲಿ ಹೋಮ ಮಾಡುತ್ತಾರೆ. ಪ್ರಾಣಾಪಾನಗಳ ಗತಿಯನ್ನು ನಿರೋಧರೂಪ ಕುಂಭಕವನ್ನು ಮಾಡಿ ಮತ್ತೆ ಮತ್ತೆ ವಾಯುವಿನ ಮೇಲೆ ವಿಜಯ ಪಡೆಯುತ್ತಾರೆ. ಅಂದರೆ ವಿಜಯ ಪಡೆದ ವಾಯುಭೇದದಲ್ಲಿ ವಿಜಯ ಪಡೆಯದೇ ಇರುವ ವಾಯುಭೇದವನ್ನು, ಪ್ರವೇಶಿಸುವಂತೆ ನೋಡಿಕೊಳ್ಳುತ್ತಾರೆ. ಇವರೆಲ್ಲರೂ ತಮ್ಮ ತಮ್ಮ ಸಾಧನೆಯಲ್ಲಿ ಯಜ್ಞದ ಕಲ್ಪನೆಯನ್ನು ಮಾಡುವ ಯಜ್ಞವೇತ್ತರು ಯಜ್ಞಗಳಿಂದ ನಿಷ್ಪಾಪರಾಗುತ್ತಾರೆ.