Bangladesh Hindu Police Officers Dismissed : ೧೦೦ ಹಿಂದೂ ಪೊಲೀಸ ಅಧಿಕಾರಿಗಳನ್ನು ವಜಗೊಳಿಸಿದ ಬಾಂಗ್ಲಾದೇಶದ ಯುನೂಸ್ ಸರಕಾರ !

  • ನೂತನ ನೇಮಕಾತಿಯಲ್ಲಿ ಹಿಂದುಗಳಿಗೆ ಸ್ಥಾನವಿಲ್ಲ !

  • ಇಸ್ಲಾಮಿ ಕಟ್ಟರವಾದಿಗಳಿಗೆ ಪೊಲೀಸ ಪಡೆಯಲಿ ನೇಮಕ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಹಿಂದೂ ಪೊಲೀಸರನ್ನು ನೌಕರಿಯಿಂದ ತೆಗೆದು ಹಾಕಲಾಗುತ್ತಿದೆ. ಹಾಗೂ ನೂತನ ನೇಮಕಾತಿಯಲ್ಲಿ ಹಿಂದುಗಳ ಸಮಾವೇಶ ಮಾಡದಂತೆ ನೋಡಿಲಾಗುತ್ತಿದೆ. ಇದೆಲ್ಲವೂ ಬಾಂಗ್ಲಾದೇಶದ ಮಧ್ಯಂತರ ಸರಕಾರ ಮಾಡುತ್ತಿದೆ. ಬಾಂಗ್ಲಾದೇಶದ ಪೊಲೀಸ ಪ್ರಮುಖರಿಗು ಕೂಡ ಇದರ ಕುರಿತು ಸೂಚನೆ ನೀಡಲಾಗಿರುವ ಸಮಾಚಾರವಿದೆ. ಈ ಸಮಾಚಾರದ ಪ್ರಕಾರ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ೧೦೦ ಹಿಂದೂ ಪೊಲೀಸ ಅಧಿಕಾರಿಗಳನ್ನು ಅವರ ಸ್ಥಾನದಿಂದ ವಜಾ ಗೊಳಿಸಲಾಗಿದೆ. ಈ ಅಧಿಕಾರಿಗಳು ಮಹಾನಿರೀಕ್ಷಕರು, ಉಪಮಹನಿರೀಕ್ಷಕರು, ಪೋಲಿಸ ಅಧಿಕಾರಿಗಳು ಮತ್ತು ವಿಶೇಷ ಪೊಲೀಸ್ ಅಧೀಕ್ಷಕ ಇಂತಹ ಸ್ಥಾನದಲ್ಲಿ ನೇಮಕವಾಗಿದ್ದರು. ಅವರ ಬಳಿ ಜಿಲ್ಲೆಯಿಂದ ಹಿಡಿದು ದೊಡ್ಡ ಇಲಾಖೆಯವರೆಗೆ ಜವಾಬ್ದಾರಿ ಇತ್ತು. ಅವರ ಜಾಗದಲ್ಲಿ ಇಸ್ಲಾಮಿ ಕಟ್ಟರವಾದಿ ಅಧಿಕಾರಿಗಳನ್ನು ನೇಮಕ ಮಾಡಲಾಗುವುದೆಂದು ಹೇಳಲಾಗುತ್ತಿದೆ. ಈ ನೂತನ ಅಧಿಕಾರಿಗಳು ‘ಜಮಾತ್-ಎ-ಇಸ್ಲಾಮಿ’ ಈ ಪಕ್ಷಕ್ಕೆ ಸಂಬಂಧಪಟ್ಟವರಾಗಿದ್ದಾರೆ ಎಂದು ಹೇಳಲಾಗಿದೆ.

೧ ಸಾವಿರದ ೫೦೦ ಹಿಂದೂ ಅಭ್ಯರ್ಥಿಗಳ ಅರ್ಜಿಗಳು ವಜಾ

ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಸರಕಾರದ ಸಮಯದಲ್ಲಿ ಕಳೆದ ವರ್ಷ ೭೯ ಸಾವಿರ ಪೊಲೀಸರನ್ನು  ನೇಮಕಾತಿ ಮಾಡಲಾಗಿತ್ತು. ಈಗ ಅದನ್ನು ರದ್ದು ಪಡಿಸಲಾಗಿದೆ. ಆದ್ದರಿಂದ ೧ ಸಾವಿರದ ೫೦೦ ಹಿಂದೂ ಅಭ್ಯರ್ಥಿಗಳ ಅರ್ಜಿಗಳು ಕೂಡ ವಜಾಗೊಳಿಸಲಾಗಿದೆ. ಅವರ ಜಾಗದಲ್ಲಿ ಹೊಸದಾಗಿ ನೇಮಕಾತಿ ನಡೆಯುವುದು. ಅದರಲ್ಲಿ ಹಿಂದೂ ಅಭ್ಯರ್ಥಿಗಳನ್ನು ಸೇರಿಸಲಾಗದು ಎಂದು ದಾವೆ ಮಾಡಲಾಗುತ್ತಿದೆ. ಈ ಆದೇಶಕ್ಕಾಗಿ ಬಾಂಗ್ಲಾದೇಶದ ಪೊಲೀಸ ಮುಖ್ಯಸ್ಥ ಬಹಾರುಲ್ ಇಸ್ಲಾಂ ಇವರಿಗೆ ವಿಶೇಷ ಸೂಚನೆ ನೀಡಲಾಗಿದೆ. ಅರ್ಹತೆ ಇದ್ದರೂ ಕೂಡ ಹಿಂದುಗಳನ್ನು ಆಯ್ಕೆ ಮಾಡಲಾಗುವುದಿಲ್ಲ, ಎಂದು ಹೇಳಲಾಗಿದೆ. ಇದಲ್ಲದೆ ಅಧಿಕಾರಶಾಹಿಯಲ್ಲಿ ಇವರ ಪ್ರವೇಶ ಕೂಡ ನಿಷೇಧಿಸಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳಿಗೆ ಸರಕಾರಿ ನೌಕರಿಯಲ್ಲಿ, ಪೊಲೀಸ ಪಡೆಯಲ್ಲಿ ಸ್ಥಾನ ದೊರೆಯುವುದಿಲ್ಲ; ಆದರೆ ಭಾರತದಲ್ಲಿ ಮುಸಲ್ಮಾನರು ಹೆಚ್ಚೆಚ್ಚು ಸರಕಾರಿ ನೌಕರಿಗಳಲ್ಲಿ ನೇಮಕ ಮಾಡಲು ಸರಕಾರ ಪ್ರಯತ್ನಶೀಲವಾಗಿರುತ್ತದೆ, ಇದನ್ನು ತಿಳಿದುಕೊಳ್ಳಿ !