ಪ್ರಯಾಗರಾಜ್ – ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ರವೀಂದ್ರ ಪುರಿ, ಅವರು ಜನವರಿ 27, 2025 ರಂದು ಅಂದರೆ ಮಹಾ ಕುಂಭಮೇಳದ ಸಮಯದಲ್ಲಿ ಧರ್ಮ ಸಂಸದ್ ಅನ್ನು ಆಯೋಜಿಸಲಾಗುವುದು ಎಂದು ಹೇಳಿದರು. ದೇಶಾದ್ಯಂತ ಇರುವ ಎಲ್ಲಾ 13 ಅಖಾಡಗಳ ಪ್ರತಿನಿಧಿಗಳು ಮತ್ತು ಸಂತರು ಈ ಧರ್ಮಸಂಸದ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಧರ್ಮ ಸಂಸದ್‌ನಲ್ಲಿ ‘ಸನಾತನ ಬೋರ್ಡ’ ಸ್ಥಾಪನೆ ಕುರಿತು ಈ ಬಾರಿಯ ಸಂಸತ್ತಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.
ಈ ಧರ್ಮ ಸಂಸದ್‌ನಲ್ಲಿ ದೇಶ-ವಿದೇಶಗಳ ಅನೇಕ ಸಂತರು, ವಿದ್ವಾಂಸರು, ಸರ್ವಧರ್ಮ ಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರು ತಿಳಿಸಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರವೀಂದ್ರ ಪುರಿ ಹೇಳಿದ್ದಾರೆ.