ಬಾಂಗ್ಲಾದೇಶದಲ್ಲಿ ಸಾಮೂಹಿಕ ಹತ್ಯೆಗೆ ಮಹಮ್ಮದ್ ಯೂನೂಸ್ ಹೊಣೆ ! – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ಢಾಕಾ (ಬಾಂಗ್ಲಾದೇಶ) – ಮಹಮ್ಮದ್ ಯೂನೂಸ್ ಅವರು ಬಾಂಗ್ಲಾದೇಶವನ್ನು ಅರಾಜಕತೆಗೆ ತಳ್ಳಿದ್ದಾರೆ. ಪ್ರಸ್ತುತ ಸರಕಾರವು ದೇಶವನ್ನೇ ಧ್ವಂಸ ಮಾಡಿದೆ. ಯೂನೂಸ್ ಇವರಿಂದಾಗಿ ಬಾಂಗ್ಲಾದೇಶದಲ್ಲಿ ಸಾಮೂಹಿಕ ಹತ್ಯೆಗಳು ಆಗುತ್ತಿವೆ. ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಪಕ್ಷದ ಅಧ್ಯಕ್ಷೆ ಶೇಖ್ ಹಸೀನಾ ಅವರು ಅವರ ಪಕ್ಷದ ಆನ್ ಲೈನ್ ಕಾರ್ಯ ಕ್ರಮದಲ್ಲಿ ಮಾತನಾಡುವಾಗ ಹೇಳಿದರು. ಅವರು ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ನಡೆಸಿದ ದಾಳಿಗಾಗಿ ಯೂನೂಸ್ ಸರಕಾರದ ಮೇಲೆ ಟೀಕೆ ಮಾಡಿದರು. ಈ ವರ್ಷ ದೊಡ್ಡ ಪ್ರಮಾಣದಲ್ಲಿ ನಡೆದ ಹಿಂಸೆಯ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರಿಗೆ ಪ್ರಧಾನಿ ಹುದ್ದೆ ಮತ್ತು ಬಾಂಗ್ಲಾದೇಶ ಬಿಡಬೇಕಾಯಿತು. ಪ್ರಸ್ತುತ ಅವರು ಭಾರತದಲ್ಲಿ ವಾಸವಾಗಿದ್ದಾರೆ.

ನಾನು ಜನರಿಗಾಗಿ ನನ್ನ ದೇಶ ಬಿಟ್ಟಿದ್ದೇನೆ !

ಆಗಸ್ಟನಲ್ಲಿ ತನ್ನ ಸರಕಾರದ ಪತನದ ಕುರಿತು ಶೇಖ್ ಹಸೀನಾ ಮಾತನಾಡಿ, “ನಾನು ಅಧಿಕಾರದಲ್ಲಿ ಉಳಿಯಲು ಪ್ರಯತ್ನಿಸಿದ್ದರೆ, ಹೆಚ್ಚು ರಕ್ತಪಾತ ಆಗುತ್ತಿತ್ತು” ನನ್ನ ತಂದೆ ಮುಜೀಬುರ್ ರೆಹಮಾನ್ ಅವರಂತೆಯೇ ನನ್ನನ್ನು ಹತ್ಯೆ ಮಾಡುವ ಸಂಚಿತ್ತು. ಇಂತಹ ಪರಿಸ್ಥಿತಿಯಲ್ಲಿ ಢಾಕಾ ತೊರೆಯುವುದೇ ಸರಿಯೆನಿಸಿತು. ನನಗೆ ಅಧಿಕಾರದಲ್ಲಿರುವ ಅವಶ್ಯಕತೆ ಇಲ್ಲ. ಒಂದು ವೇಳೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರೆ, ಅನೇಕ ಜನರು ಬಲಿಯಾಗುತ್ತಿದ್ದರು. (ಹತ್ಯೆಯಾಗುತ್ತಿರುವವರೇ ಹಿಂಸಾಚಾರ ಮಾಡುವವರೇ ಆಗಿದ್ದರೆ ಅದರಲ್ಲಿ ತಪ್ಪೇನಿತ್ತು ? ಹೀಗೆ ಪ್ರಶ್ನೆ ಬರುವುದು; ಏಕೆಂದರೆ ಇದೇ ಜನರು ಇನ್ನೂ ಹಿಂದೂಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಮತ್ತು ಅವರ ನಿರ್ವಂಶ ಮಾಡಲು ಪ್ರಯತ್ನಿಸುತ್ತಿದ್ದಾರೆ ! – ಸಂಪಾದಕರು) ನನಗೆ ಅದು ಬೇಕಾಗಿರಲಿಲ್ಲ. (ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯು ತನಗೆ ಏನು ಅನ್ನಿಸುತ್ತದೆ ಎನ್ನುವುದಕ್ಕಿಂತ ಸಮಾಜಕ್ಕೆ ಯಾವುದರಿಂದ ಒಳ್ಳೆಯದಾಗುವುದು, ರಕ್ಷಣೆಆಗುವುದು, ಇದನ್ನು ನೋಡುವುದು ಅವಶ್ಯಕವಾಗಿದೆ ! – ಸಂಪಾದಕರು)

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಮಾತನಾಡಿ, ಅಸಂವಿಧಾನಿಕ ರೀತಿಯಿಂದ ಅಧಿಕಾರ ವಹಿಸಿಕೊಂಡ ಯೂನೂಸ್ ಸರಕಾರವು ಅಂತಹ ಜನರನ್ನು ಶಿಕ್ಷಿಸಲು ವಿಫಲವಾದರೆ ಅವರನ್ನು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಶಿಕ್ಷೆಯಾಗಬೇಕು. ಜನರ ಜೀವದ ರಕ್ಷಣೆ ಮಾಡುವುದು ಮಹತ್ವದ್ದಾಗಿದೆ. ಇದಕ್ಕಾಗಿ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಯಾರು ಏನು ಮಾಡುತ್ತಿದ್ದಾರೆ, ಇದು ಈಗ ಜಗತ್ತಿಗೇ ತಿಳಿದಿದೆ. ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಭಾರತವು ಮುಂದಾಗುವುದು ಈಗ ಅನಿವಾರ್ಯ ಆಗಿದೆ. 1971 ರಲ್ಲಿ ಇಂದಿರಾ ಗಾಂಧಿಯವರು ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ, ಆ ಕೆಲಸವನ್ನು ಈಗಿನ ಸರಕಾರವು ಮಾಡಬೇಕಾಗಿರುವುದು ಅವಶ್ಯಕವಾಗಿದೆ !