ಉತ್ತರಪ್ರದೇಶ ಸರಕಾರದ ನಿರ್ಣಯ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರದಿಂದ ರಾಜ್ಯದಲ್ಲಿನ ಪ್ರಯಾಗರಾಜದಲ್ಲಿ ಮಹಾಕುಂಭಪರ್ವಕ್ಕಾಗಿ ಸ್ವತಂತ್ರ ಜಿಲ್ಲೆಯ ಘೋಷಣೆ. ಮಹಾಕುಂಭವನ್ನು ಆಯೋಜಿಸಲಾಗುವ ಸಂಪೂರ್ಣ ಪ್ರದೇಶಕ್ಕೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಗಿದೆ. ಈ ಜಿಲ್ಲೆಯ ಹೆಸರನ್ನೂ ‘ಮಹಾಕುಂಭ ಮೇಳ’ ಎಂದು ಇಡಲಾಗಿದೆ. ಮಹಾಕುಂಭದ ಆಯೋಜನೆ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಉತ್ತರಪ್ರದೇಶ ಸರಕಾರವು ಸ್ಪಷ್ಟಪಡಿಸಿದೆ. ಪ್ರಯಾಗರಾಜನ ಜಿಲ್ಲಾಧಿಕಾರಿಗಳಾದ ರವೀಂದ್ರ ಕುಮಾರ ಮಾಂದಾದರವರು ಈ ಸಂದರ್ಭದಲ್ಲಿ ಸುತ್ತೋಲೆಯನ್ನು ಪ್ರಕಟಿಸಿದ್ದಾರೆ. ಈ ಜಿಲ್ಲೆಯು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಮಹಾಕುಂಭಪರ್ವವು १३ ಜನವರಿ ೨೦೨೫ ರಿಂದ ಪ್ರಾರಂಭವಾಗುತ್ತಿದ್ದು, ೨೬ ಫೆಬ್ರವರಿ ೨೦೨೫ ರವರೆಗೆ ನಡೆಯಲಿದೆ.
ಮಹಾಕುಂಭ ವ್ಯವಸ್ಥಾಪನಾ ಸಮಿತಿಯಲ್ಲಿನ ಪ್ರಮುಖ ಕಾರ್ಯಕಾರಿ ನ್ಯಾಯದಂಡಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಧಾನಿ ಮೋದಿಯವರು ವರದಿ ತೆಗೆದುಕೊಳ್ಳಲಿದ್ದಾರೆ
ಮಹಾಕುಂಭದ ನಿರ್ವಹಣೆಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಡಿಸೆಂಬರ್ ೧೩ರ ಉತ್ತರಪ್ರದೇಶದ ಪ್ರವಾಸದಲ್ಲಿ ತೆಗೆದುಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮಹಾಕುಂಭದ ನಿರ್ವಹಣೆ ಮತ್ತು ಸುರಕ್ಷತಾ ನಿಯಮಗಳ ಕುರಿತು ಸಭೆಗಳನ್ನು ಆಯೋಜಿಸಲಾಗಿದೆ.
೧೦ ಕೋಟಿ ಭಕ್ತರ ಆಗಮದ ನಿರೀಕ್ಷೆ
ಹಿಂದಿನ ಮಹಾಕುಂಭದಲ್ಲಿ ಹಲವು ಕೋಟಿ ಭಾವಿಕರು ಆಗಮಿಸಿದ್ದರು. ಈ ಬಾರಿ ಈ ಸಂಖ್ಯೆಯು ೧೦ ಕೋಟಿಯವರೆಗೆ ತಲುಪುವ ನಿರೀಕ್ಷೆ ಇದೆ ಎಂದು ಆಡಳಿತವು ಹೇಳುತ್ತಿದೆ. ಈ ಅವಧಿಯಲ್ಲಿ ಸುರಕ್ಷತೆಗಾಗಿ ಪೊಲೀಸ್ ಪ್ರಾಧಿಕಾರದಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ. ಗಂಗಾನದಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಯಾವುದೇ ಅವಘಡಗಳನ್ನು ತಪ್ಪಿಸಲು ಪೊಲೀಸರೊಂದಿಗೆ ಅಂಡರ್ವಾಟರ್ ಡ್ರೋನ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಡ್ರೋನಗಳು ನೀರಿನಲ್ಲಿ ೩೦೦ ಮೀಟರ್ ಆಳದವರೆಗೆ ಕ್ರಮಿಸಬಲ್ಲವು.
೬ ಸಾವಿರ ಹೆಕ್ಟೇರ್ ಪ್ರದೇಶ
ಮಹಾಕುಂಭಮೇಳ ಜಿಲ್ಲೆಯನ್ನು ಸುಮಾರು ೬ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ಅದರಲ್ಲಿನ ೪ ಸಾವಿರ ಹೆಕ್ಟೇರಿನಲ್ಲಿ ಪ್ರತ್ಯಕ್ಷವಾಗಿ ಕುಂಭಪರ್ವದ ಆಯೋಜನೆ ನಡೆಯುತ್ತದೆ, ಮತ್ತು ೧ ಸಾವಿರ ೯೦೦ ಹೆಕ್ಟೇರ್ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಡಳಿತವು ಹೇಳಿದೆ.
ಮಹಾಕುಂಭಪರ್ವದ ಮಹತ್ವದ ಸ್ನಾನದ ದಿನಗಳು
೧. ೧೩ ಜನವರಿ ೨೦೨೫ : ಪೌಷ ಹುಣ್ಣಿಮೆ
೨. ೧೪ ಜನವರಿ ೨೦೨೫ : ಮಕರ ಸಂಕ್ರಾಂತಿ
೩. ೨೯ ಜನವರಿ ೨೦೨೫ : ಮೌನಿ ಅಮಾವಾಸ್ಯೆ (ಸೋಮವತಿ)
೪. ೩ ಫೆಬ್ರವರಿ ೨೦೨೫ : ವಸಂತ ಪಂಚಮಿ
೫. ೧೨ ಫೆಬ್ರವರಿ ೨೦೨೫ : ಮಾಘ ಹುಣ್ಣಿಮೆ
೬. ೨೬ ಫೆಬ್ರವರಿ ೨೦೨೫ : ಮಹಾಶಿವರಾತ್ರಿ
ಸಂಪರ್ಕಕ್ಕಾಗಿ ಸಂಖ್ಯೆಗಳು
ಮಹಾಕುಂಭಪರ್ವದ ಹೆಚ್ಚುವರಿ ಮಾಹಿತಿಗಾಗಿ ಪ್ರಯಾಗರಾಜ ಜಿಲ್ಲಾಡಳಿತವು ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಿದೆ. ಅದರಂತೆ 05322504011 ಮತ್ತು 15322500775 ಈ ಎರಡು ಸಂಖ್ಯೆಗಳನ್ನು ಪ್ರಯಾಗರಾಜ ಜಿಲ್ಲಾಡಳಿತದ ವೆಬ್ ಸೈಟಿನಲ್ಲಿ ನೀಡಲಾಗಿದೆ.