Hindu Temples Destroyed : ಚಿತಗಾಂವ (ಬಾಂಗ್ಲಾದೇಶ) ಇಲ್ಲಿ ಶುಕ್ರವಾರದ ನಮಾಜ್ ಬಳಿಕ ಮತಾಂಧ ಮುಸಲ್ಮಾನರಿಂದ 3 ದೇವಸ್ಥಾನಗಳ ಧ್ವಂಸ

ಚಿತಗಾಂವ (ಬಾಂಗ್ಲಾದೇಶ) – ಇಲ್ಲಿ ಶುಕ್ರವಾರ ನವೆಂಬರ 29 ರಂದು ನಮಾಜ್ ಬಳಿಕ ಮತಾಂಧ ಮುಸಲ್ಮಾನರ ಗುಂಪೊಂದು 3 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ 3 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.

1. ಇಲ್ಲಿನ ಹರಿಶ್ಚಂದ್ರ ಮುನಸೆಫ ಮಾರ್ಗದಲ್ಲಿ ನವೆಂಬರ 29 ರಂದು ಮಧ್ಯಾಹ್ನ 2.30 ಗಂಟೆ ಹೊತ್ತಿಗೆ ಮತಾಂಧ ಮುಸಲ್ಮಾನರ ಗುಂಪೊಂದು ಶಾಂತಾನೇಶ್ವರಿ ಮಾತೃಮಂದಿರ, ಶನಿಮಂದಿರ ಮತ್ತು ಶಾಂತನೇಶ್ವರಿ ಕಾಲಿಬಾಡಿ ಮಂದಿರ ಈ ದೇವಸ್ಥಾನಗಳನ್ನು ಗುರಿ ಮಾಡಿತು. ದೇವಸ್ಥಾನದ ವಿಶ್ವಸ್ಥರು, ‘ಘೋಷಣೆಗಳನ್ನು ಕೂಗುತ್ತಾ ನೂರಾರು ಜನರ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ಮಾಡಿದರು. ಈ ಗುಂಪು ದೇವಸ್ಥಾನದ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು. ಇದರಿಂದ 2 ದೇವಸ್ಥಾನಗಳ ಬಾಗಿಲುಗಳು ಹಾನಿಗೊಂಡಿವೆ’ ಎಂದು ಹೇಳಿದರು.

2. ಶಾಂತಿನೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಸ್ಥಾಯಿ ಸದಸ್ಯರಾಗಿರುವ ತಪನ ದಾಸ ಅವರು ಮಾತನಾಡಿ, ‘ಶುಕ್ರವಾರ ನಮಾಜ್ ಬಳಿಕ ನೂರಾರು ಜನರ ಗುಂಪು ಮಂದಿರದ ಕಡೆಗೆ ನಡೆದುಕೊಂಡು ಬಂದಿತು. ಅವರು ಹಿಂದೂ ವಿರೋಧಿ ಮತ್ತು ಇಸ್ಕಾನ್ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ನಾವು ಅವರಿಗೆ ವಿರೋಧಿಸಲಿಲ್ಲ. ಪರಿಸ್ಥಿತಿ ಕೈ ಮೀರಿದಾಗ, ನಾವು ಸೇನೆಗೆ ಕರೆ ಮಾಡಿದೆವು. ಅವರು ತಕ್ಷಣವೇ ಬಂದರು. ಹಾಗೆಯೇ ಅವರು ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡಿದರು. ಮಧ್ಯಾಹ್ನದೊಳಗೆ ಎಲ್ಲ ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಯಿತು; ಆದರೆ ಹಿಂಸಾಚಾರ ಮಾಡುವವರು ಕಾರಣವಿಲ್ಲದೆ ಅಲ್ಲಿಗೆ ಬಂದು ದಾಳಿ ಮಾಡಿದರು’ ಎಂದು ಹೇಳಿದರು.

3. ಇಲ್ಲಿನ ಪೋಲೀಸ ಠಾಣೆಯ ಮುಖ್ಯಸ್ಥ ಅಬ್ದುಲ ಕರೀಮ ಅವರು ಮಾತನಾಡಿ, ‘ಹಿಂಸಾಚಾರ ಮಾಡುವವರು ದೇವಸ್ಥಾನಗಳಿಗೆ ಹಾನಿ ಮಾಡಲು ಯತ್ನಿಸಿದರು ಆದರೆ ದೇವಸ್ಥಾನಗಳಿಗೆ ಹೆಚ್ಚಿನ ಹಾನಿ ಆಗಿಲ್ಲ’, ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆ’ ಎಂದು ಹೇಳುವ ಬಾಂಗ್ಲಾದೇಶ ಈ ಬಗ್ಗೆ ಬಾಯಿ ತೆರೆಯುವುದಿಲ್ಲ !