ಬಾಂಗ್ಲಾದೇಶದಲ್ಲಿ ಇಸ್ಲಾಮಿ ಪಕ್ಷಗಳಿಂದ ‘ಇಸ್ಕಾನ್’ ವಿರುದ್ಧ ಸಂಚು
ಢಾಕಾ – ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ‘ಇಸ್ಕಾನ್’ನ ಮೇಲೆ ನಿರ್ಬಂಧ ಹೇರುವಂತೆ ಆಗ್ರಹಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ, ಈಗ ಬಾಂಗ್ಲಾದೇಶದ ಇಸ್ಲಾಮಿ ಪಕ್ಷಗಳು ‘ಇಸ್ಕಾನ್’ನನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಅದರ ಮೇಲೆ ನಿರ್ಬಂಧ ಹೇರಲು ಒತ್ತಾಯಿಸಿದೆ. ಜಮಿಯತ್ ಉಲಮಾ-ಎ-ಬಾಂಗ್ಲಾದೇಶದ ಅಬ್ದುಲ್ ಯೂಸುಫ್ ಅವರು ‘ಇಸ್ಕಾನ್’ನನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಕರೆದಿದ್ದಾರೆ. ‘ಮಹಮ್ಮದ್ ಯೂನುಸ್ ಸರಕಾರವು ‘ಇಸ್ಕಾನ್’ನ ಮೇಲೆ ತಡಮಾಡದೇ ತಕ್ಷಣ ನಿರ್ಬಂಧ ಹೇರಬೇಕು’, ಎಂದು ಇಸ್ಲಾಮಿ ಪಕ್ಷಗಳು ಒಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಅವರು ‘ಇಸ್ಕಾನ್’ನ ಸಾಧು ಮತ್ತು ಸಂತರನ್ನು ‘ಸಶಸ್ತ್ರ ಹೋರಾಟಗಾರರು’ ಎಂದು ವರ್ಣಿಸಿದ್ದಾರೆ. ಈ ಪಕ್ಷಗಳು ಬಾಂಗ್ಲಾದೇಶದಲ್ಲಿ ಕಠಿಣ ಇಸ್ಲಾಮಿಕ್ ಕಾನೂನು ತರಲು ಆಗ್ರಹಿಸಿದ್ದಾರೆ.
ಚಿನ್ಮಯ ಕೃಷ್ಣ ದಾಸ್ ಅವರ ಇನ್ನಿಬ್ಬರು ಸಹಚರರ ಬಂಧನ
ಬಾಂಗ್ಲಾದೇಶದ ಚಿತಗಾಂವನಲ್ಲಿ ಬಂಧಿಸಲಾಗಿರುವ ‘ಇಸ್ಕಾನ್’ ಸದಸ್ಯ ಚಿನ್ಮಯ ಕೃಷ್ಣ ದಾಸ್ ಅವರ ಇನ್ನಿಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಚಿನ್ಮಯ ಕೃಷ್ಣ ದಾಸ ಅವರಿಗೆ ಊಟವನ್ನು ನೀಡಲು ಹೋಗಿದ್ದರು.
ಚಿನ್ಮಯ ಕೃಷ್ಣ ದಾಸ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ! – ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಚಿನ್ಮಯ ಕೃಷ್ಣ ದಾಸ ಅವರ ಬಂಧನದ ಕುರಿತು ಯೂನುಸ್ ಸರಕಾರದ ವಿರುದ್ಧ ಟೀಕಿಸಿದ್ದಾರೆ. ಚಿನ್ಮಯ ಕೃಷ್ಣ ದಾಸ್ ಅವರನ್ನು ಬಂಧಿಸಿರುವುದು ಕಾನೂನುಬಾಹಿರವಾಗಿದೆ. ಸನಾತನ ಧರ್ಮದ ಒಬ್ಬ ದೊಡ್ಡ ನಾಯಕರನ್ನು ತಪ್ಪು ಪದ್ಧತಿಯಲ್ಲಿ ಬಂಧಿಸಲಾಗಿದೆ. ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಇಸ್ಲಾಮಿ ಸಂಘಟನೆಗಳ ಈ ಸಂಚನ್ನು ವಿಫಲಗೊಳಿಸಲು ಭಾರತ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ! |