ಗೀರ ಸೋಮನಾಥ (ಗುಜರಾತ್)ನಲ್ಲಿ ಅಕ್ರಮ ಮಸೀದಿ ಮತ್ತು ದರ್ಗಾ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ನವ ದೆಹಲಿ – ಗುಜರಾತ್‌ನಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸಲು ಆದೇಶ ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಅದೇ ಸಮಯದಲ್ಲಿ, ಗುಜರಾತ್ ಸರಕಾರವು ನ್ಯಾಯಾಲಯಕ್ಕೆ, ‘ಅತಿಕ್ರಮಣ ಮುಕ್ತ ಭೂಮಿ ಸರಕಾರದ ನಿಯಂತ್ರಣದಲ್ಲಿಯೇ ಉಳಿಯುವುದು ಮತ್ತು ಯಾವುದೇ ಮೂರನೇ ವ್ಯಕ್ತಿಗೆ ಹಸ್ತಾಂತರಿಸುವುದಿಲ್ಲ’ ಎಂದು ಭರವಸೆ ನೀಡಿದೆ. ಆಡಳಿತದಿಂದ ಗೀರ ಸೋಮನಾಥ ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿ ಮತ್ತು ದರ್ಗಾಗಳು ಸೇರಿದಂತೆ ಮುಸಲ್ಮಾನರ ಮನೆಗಳನ್ನು ಕೆಡವಲಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಔಲಿಯಾ-ಎ-ದಿನ್ ಸಮಿತಿಯ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆದಿತ್ತು. ಗುಜರಾತ ಉಚ್ಚ ನ್ಯಾಯಾಲಯವು ಕಳೆದ ತಿಂಗಳು ಸೋಮನಾಥ ದೇವಸ್ಥಾನದ ಬಳಿಯಿರುವ ಪ್ರಭಾಸ ಪಾಟಣ ಗ್ರಾಮದಲ್ಲಿ ನಡೆಸಿರುವ ಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಔಲಿಯಾ-ಎ-ದೀನ್ ಸಮಿತಿಯು ತನ್ನ ಅರ್ಜಿಯಲ್ಲಿ, ಮುಸ್ಲಿಮರ ಸುಮಾರು 9 ಧಾರ್ಮಿಕ ಪೂಜಾ ಸ್ಥಳಗಳನ್ನು ಕೆಡವಲಾಗಿದೆ ಎಂದು ಹೇಳಿತ್ತು. ಇದರೊಂದಿಗೆ ಅನೇಕ ಗೋರಿಗಳು, ದರ್ಗಾ ಮತ್ತು ಮಸೀದಿಗಳನ್ನು ಕೆಡವಲಾಗಿದೆ. ಇವೆಲ್ಲವೂ ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಎಲ್ಲಾ ನಿರ್ಮಾಣಗಳು 100 ವರ್ಷಗಳಿಗಿಂತಲೂ ಅಧಿಕ ಕಾಲಾವಧಿಯಿಂದ ಅಲ್ಲಿದ್ದವು ಎಂದು ಹೇಳಿದೆ. (ಹಾಗಿದ್ದರೆ, ಆಡಳಿತ ಕ್ರಮ ಕೈಗೊಳ್ಳುತ್ತಿತ್ತೇ ? `ನಂಬುವಂತೆ ಸುಳ್ಳು ಹೇಳು’ ಈ ವೃತ್ತಿಯ ಕಾಯಿದೆ ವಿರೋಧಿ ಔಲಿಯಾ-ಎ-ದಿನ್ ಸಮಿತಿ ! – ಸಂಪಾದಕರು)

ಸಂಪಾದಕೀಯ ನಿಲುವು

ಮೊದಲು ಅಕ್ರಮವಾಗಿ ಧಾರ್ಮಿಕ ಸ್ಥಳಗಳನ್ನು ನಿರ್ಮಿಸುವುದು ಮತ್ತು ತದನಂತರ ಆಡಳಿತವು ಅದರ ಮೇಲೆ ಕ್ರಮ ಕೈಗೊಳ್ಳಲು ಪ್ರಾರಂಭಿಸಿದರೆ, ಅವರು ಕಿರಿಯ, ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ವರೆಗೆ ವಿರೋಧಿಸುತ್ತಾರೆ, ಇದಕ್ಕಾಗಿ ‘ಬಡವರು’, ‘ಹಿಂದುಳಿದ ವರ್ಗಗಳು’ ಮತ್ತು `ಅಸುರಕ್ಷಿತ’ರಾಗಿರುವ ಮುಸಲ್ಮಾನರಿಗೆ ಯಾರು ಹಣವನ್ನು ಪೂರೈಸುತ್ತಾರೆ ? ಎನ್ನುವುದನ್ನು ಕಂಡುಹಿಡಿಯಬೇಕಾಗಿದೆ !