Trudeau Refused To Resign : ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಟ್ರುಡೊ ನಿರಾಕರಣೆ !

ಕೆನಡಾ ಪ್ರಧಾನಿ ಜಸ್ಟಿನ ಟ್ರುಡೋ

ಒಟಾವಾ (ಕೆನಡಾ) – ಕೆನಡಾ ಪ್ರಧಾನಿ ಜಸ್ಟಿನ ಟ್ರುಡೋ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಡಳಿತಾರೂಢ ಲಿಬರಲ ಪಕ್ಷದ 20 ಸಂಸದರು ಅವರಿಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಹಾಗೂ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಿದ್ದರು. ಟ್ರುಡೊ ಅವರ ಕುಸಿಯುತ್ತಿರುವ ಜನಪ್ರಿಯತೆಯು ಅದರ ಹಿಂದಿನ ಕಾರಣವಾಗಿತ್ತು. ಹಾಗೆಯೇ ಕೆಲವು ದಿನಗಳ ಹಿಂದೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಟ್ರುಡೋ ಅವರ ಪಕ್ಷ ಸೋಲು ಅನುಭವಿಸಿತು. `ಟ್ರುಡೋ ಅವರಿಗೆ ದೇಶದಲ್ಲಿ ವಿರೋಧ ಹೆಚ್ಚಾಗುತ್ತಿದೆ’ ಎಂದು ಆಡಳಿತಾರೂಢ ಪಕ್ಷದ ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಟ್ರುಡೋ ಮಾತ್ರ ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಓರ್ವ ಪತ್ರಕರ್ತನು ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಮಾಹಿತಿಯನ್ನು ನೀಡಿದರು. ಟ್ರುಡೋ ಅವರ ಈ ಘೋಷಣೆಯ ಬಗ್ಗೆ ಅವರ ಪಕ್ಷದ ಸಂಸದರೊಬ್ಬರು ಖೇದವನ್ನು ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಭಯೋತ್ಪಾದಕರನ್ನು ಪೋಷಿಸಿದ ಟ್ರುಡೊ ಅವರ ರಾಜಕೀಯ ಅಸ್ತಿತ್ವವನ್ನು ಕೆನಡಾ ಜನರು ಮುಂದಿನ ವರ್ಷದ ಚುನಾವಣೆಯಲ್ಲಿ ಮುಗಿಸಿದರೆ ಆಶ್ಚರ್ಯವೆನಿಸುವುದಿಲ್ಲ !