ಬಾಗಲಪುರ(ಬಿಹಾರ)ದಲ್ಲಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ

  • ಮೂರ್ತಿಯ ಆಭರಣಗಳ ಕಳವು !

  • ಆಕ್ರೋಶಿತ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

  • ಪೊಲೀಸರಿಂದ ಲಾಠಿ ಚಾರ್ಜ್ ಮತ್ತು ಗಾಳಿಯಲ್ಲಿ ಗುಂಡು

ಭಾಗಲಪುರ (ಬಿಹಾರ್) – ಇಲ್ಲಿ ಸಂಹೌಲ ಪ್ರದೇಶದಲ್ಲಿರುವ ಒಂದು ದೇವಸ್ಥಾನದಲ್ಲಿ ಅಪರಿಚಿತನಿಂದ ಅಕ್ಟೋಬರ್ ೧೯ ರಾತ್ರಿ ಶ್ರೀ ದುರ್ಗಾದೇವಿ, ಶ್ರೀರಾಮ, ಸೀತೆ, ರಾಧಾ ಮತ್ತು ಶ್ರೀ ಕೃಷ್ಣ ಇವರ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಮೂರ್ತಿಯ ಆಭರಣಗಳನ್ನೂ ಕೂಡ ಕಳವು ಮಾಡಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಗುಂಪಿನಿಂದ ಕಲ್ಲು ತೂರಾಟ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಲ್ಲಿ ತಲುಪಿದ ಪೊಲೀಸರು ಮೊದಲು ಲಾಠಿಚಾರ್ಜ್ ಮಾಡಿದರು ಮತ್ತು ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು. ಜನರು ಇಲ್ಲಿಯ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಹಿಂದೆ ಇದ್ದ ದೇವಸ್ಥಾನದಲ್ಲಿ ಈ ರೀತಿ ಘಟನೆ ಹೇಗೆ ಘಟಿಸಿದೆ ? ಎಂದು ಪ್ರಶ್ನಿಸಲಾಗುತ್ತಿದೆ.

ಬೆಳಿಗ್ಗೆ ಈ ಘಟನೆಯ ಮಾಹಿತಿ ದೊರೆಯುತ್ತಲೇ ಆಕ್ರೋಶಗೊಂಡಿರುವ ಜನರು ಘೋಘಾ-ಸನಹೌಲ ಮುಖ್ಯ ರಸ್ತೆ ತಡೆನಡೆಸಿದ್ದರು. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಿಂದ ಅವರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಪರಿಸ್ಥಿತಿಯ ಗಾಂಭೀರ್ಯತೆ ಗಮನಕ್ಕೆ ತೆಗೆದುಕೊಂಡು ಘಟನಾ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ನೇಮಿಸಲಾಗಿದೆ.

ಸಂಪಾದಕೀಯ ನಿಲುವು

  • ಬಿಹಾರದಲ್ಲಿ ಭಾಜಪ ಮತ್ತು ಜನತಾದಳ (ಸಂಯುಕ್ತ) ಪಕ್ಷದ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
  • ದೇಶದಲ್ಲಿ ಯಾವುದೇ ಪಕ್ಷದ ಸರಕಾರ ಇದ್ದರೂ ಹಿಂದುಗಳ ದೇವಸ್ಥಾನದ ಮೇಲೆ ದಾಳಿಗಳು ನಡೆಯುತ್ತಿವೆ, ಇದು ದೇಶದಲ್ಲಿ ಹಿಂದೂಗಳು ಅಸುರಕ್ಷಿತವಾಗಿದ್ದಾರೆ, ಇದೇ ತೋರಿಸುತ್ತದೆ !

ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಅವನು ‘ಹುಚ್ಚ’ನೆಂದು ಹೇಳಿದರು !

ಪೊಲೀಸರು ಈ ಧ್ವಂಸದ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರಸಿದ್ಧಿ ಪತ್ರ ಪ್ರಸಾರ ಮಾಡಿ ಬಂಧಿಸಿರುವ ಆರೋಪಿ ‘ಹುಚ್ಚ’ ಇರುವುದಾಗಿ ಹೇಳಿದೆ. ‘ಸಾಮಾಜಿಕ ಜಾಲತಾಣದಲ್ಲಿ ದಾರಿ ತಪ್ಪಿಸುವ ಸಮಾಚಾರ ಮತ್ತು ವದಂತಿಗಳನ್ನು ಹಬ್ಬಿಸಬಾರದೆಂದು ಪೊಲೀಸರು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಈ ರೀತಿಯ ದಾವೆಯ ಮೂಲಕ ಬಿಹಾರ ಪೋಲಿಸರಿಗೆ ಜನರು ‘ಹುಚ್ಚರು’ ಎಂದು ಅನಿಸುತ್ತದೆಯೇ ?
  • ಈ ರೀತಿಯ ಹುಚ್ಚನಿಗೆ ಹಿಂದುಗಳ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಧ್ವಂಸ ಮಾಡುವುದು ಮತ್ತು ಮೂರ್ತಿಯ ಮೇಲಿನ ಆಭರಣಗಳು ಕಳವು ಮಾಡುವ ಬುದ್ದಿ ಹೇಗೆ ಬರುತ್ತದೆ, ಇದು ಬಿಹಾರ ಪೋಲಿಸರು ಹೇಳಬೇಕು !