ಅಪ್ರಾಪ್ತೆಯ ಅಶ್ಲೀಲ ದೃಶ್ಯ ತೋರಿಸಿದ್ದರಿಂದ ನಿರ್ಮಾಪಕಿ ಏಕ್ತಾ ಕಪುರ ವಿರುದ್ಧ ಅಪರಾಧ ದಾಖಲು !

‘ಗಂದಿ ಬಾತ’ ಈ ವೆಬ್ ಸರಣಿಯಲ್ಲಿನ ದೃಶ್ಯಗಳಿಂದಾಗಿ ಪೋಕ್ಸೊ ಕಾಯ್ದೆಯಡಿ ಅಪರಾಧ ದಾಖಲು !

ಮುಂಬಯಿ – ‘ಆಲ್ಟ ಬಾಲಾಜಿ’ ಒಟಿಟಿ ಮೇಲಿನ ಅಶ್ಲೀಲ ವೆಬ್ ಸರಣಿಯಲ್ಲಿ (ಆನ್ ಲೈನ ಪ್ರಸಾರವಾಗುವ ವಿಡಿಯೋ ಮಾಲಿಕೆಯಲ್ಲಿ) ಅಪ್ರಾಪ್ತೆಯರ ಅಶ್ಲೀಲ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಒಟಿಟಿಯ ಆಡಳಿತ ನಿರ್ದೇಶಕಿ ಶೋಭಾ ಕಪೂರ್ ಮತ್ತು ಅವರ ಪುತ್ರಿ ನಿರ್ಮಾಪಕಿ ಏಕ್ತಾ ಕಪುರ ವಿರುದ್ಧ ಪ್ರಕರಣ ದಾಖಲಾಗಿದೆ. ಬೊರಿವಲಿಯ (ಮುಂಬಯಿ) ಸ್ವಪ್ನಿಲ ಹಿರೆ ಅವರ ದೂರಿನ ಮೇರೆಗೆ, ಎಂ.ಎಚ್.ಬಿ. ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.

ಹಿರೆ ಇವರು ಸಲ್ಲಿಸಿರುವ ದೂರಿನಲ್ಲಿ ‘ಗಂದಿ ಬಾತ್’, ‘ಕ್ಲಾಸ್ ಆಫ್ 2017’ ಮತ್ತು ‘ಕ್ಲಾಸ್ ಆಫ್ 2020’ ಈ ವೆಬ್ ಸರಣಿಗಳಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ’, ಎಂದು ತಿಳಿಸಲಾಗಿದೆ. ‘ಅಪ್ರಾಪ್ತ ಬಾಲಕಿಯರು ಶಾಲಾ ಸಮವಸ್ತ್ರದಲ್ಲಿಯೇ ಅಶ್ಲೀಲ ಕೃತ್ಯಗಳನ್ನು ಮಾಡುತ್ತಿರುವುದನ್ನು ತೋರಿಸಲಾಗಿದೆ, ಹಾಗೆಯೇ ಅವರ ಬಾಯಿಯಿಂದ ಅಶ್ಲೀಲ ಸಂಭಾಷಣೆಗಳನ್ನೂ ತೋರಿಸಲಾಗಿದೆ. ಮಕ್ಕಳ ಮೇಲೆ ಇದರಿಂದ ಪ್ರತಿಕೂಲ ಪರಿಣಾಮ ಆಗಬಹುದು’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರಿಗೆ ದೂರು ನೀಡುವುದರೊಂದಿಗೆ ಹಿರೆ ಇವರು ಬೊರಿವಲಿಯ ಜಿಲ್ಲಾ ನ್ಯಾಯಾಲಯದಲ್ಲಿಯೂ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ನಂತರ, ಪೊಲೀಸರು ಅಕ್ಟೋಬರ್ 18 ರಂದು ಅಪರಾಧವನ್ನು ದಾಖಲಿಸಿದ್ದಾರೆ.
ಕಳೆದ ತಿಂಗಳು ಸೆಪ್ಟೆಂಬರ್ 27 ರಂದು, ಸರ್ವೋಚ್ಚ ನ್ಯಾಯಾಲಯವು ಚಿಕ್ಕ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಷಯದ ಬಗ್ಗೆ ಮಹತ್ವದ ತೀರ್ಪು ನೀಡಿತ್ತು. ಮಕ್ಕಳು ಇಂತಹ ಅಶ್ಲೀಲ ವಿಷಯಗಳನ್ನು ನೋಡುವುದು, ಪ್ರಕಟಿಸುವುದು ಮತ್ತು ಡೌನ್ಲೋಡ್ ಮಾಡುವುದು ಅಪರಾಧವಾಗಿದೆಯೆಂದು ನ್ಯಾಯಾಲಯ ಹೇಳಿತ್ತು.

ಸಂಪಾದಕೀಯ ನಿಲುವು

  • ಅಶ್ಲೀಲತೆಯನ್ನು ಹರಡಿ ಸಮಾಜದ ನೈತಿಕತೆಯನ್ನು ನಾಶಮಾಡುವಲ್ಲಿ ಕಾರಣೀಭೂತರಾಗಿರುವ ಇಂತಹ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !
  • ವೆಬ್ ಸೀರೀಸಗಳನ್ನು ‘ಸೆನ್ಸಾರ್ ಬೋರ್ಡ್’ಅಡಿಯಲ್ಲಿ ತಂದು ಅವುಗಳ ಮೇಲೆ ನಿಯಮಗಳನ್ನು ವಿಧಿಸುವುದು ಏಕೆ ಆವಶ್ಯಕವಾಗಿದೆಯೆನ್ನುವುದು ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ !