ಇಸ್ರೇಲ್ ನಿಂದ ಲೆಬನಾನ್ ಮೇಲೆ ವೈಮಾನಿಕ ದಾಳಿ; 21 ಜನರ ಸಾವು

ಬೈರೂತ್ – ಅಕ್ಟೋಬರ್ 14 ರಂದು, ಇಸ್ರೇಲ್ ಉತ್ತರ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್‌ನಿಂದ ಪಲಾಯನ ಮಾಡಿದ ಜನರು ಉತ್ತರ ಲೆಬನಾನ್‌ನ ಟ್ರಿಪೋಲಿಯಲ್ಲಿನ ಏತೋಉೂ ಇಲ್ಲಿನ ಒಂದು ಪ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಟ್ರಿಪೋಲಿಯಾದ ಜನರಿಗೆ ‘ಲೆಬನಾನ್‌ನ ಸುರಕ್ಷಿತ ಭಾಗ’ ಎಂದು ಪರಿಗಣಿಸಲಾಗಿದೆ; ಆದರೆ ಇಸ್ರೇಲ್ ಮೊದಲ ಬಾರಿಗೆ ಇಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ಇದಕ್ಕೂ ಮುನ್ನ ಬೈರುತ್ ಸೇರಿದಂತೆ ಹಿಜ್ಬುಲ್ಲಾ ನೆಲೆಗಳನ್ನು ಹೊಂದಿರುವ ಪ್ರತಿಯೊಂದು ಪ್ರದೇಶಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.

ಗಾಜಾದಲ್ಲಿ ಮುಂದುವರಿದಿದ ಇಸ್ರೇಲ್‌ನ ದಾಳಿ : 29 ಸಾವು

ಇಸ್ರೇಲಿನ ಸೈನ್ಯವು ಇತ್ತೀಚೆಗೆ ದಕ್ಷಿಣ ಗಾಜಾದಲ್ಲಿರುವ ಸಲಾಹ್- ಅಲ್-ದಿನ್ ಮಸೀದಿಯ ಮೇಲೆ ಬಾಂಬ್ ಎಸೆದಿತ್ತು. ಇದರಲ್ಲಿ 29 ಜನರ ಹತ್ಯೆಯಾಗಿದೆ. ನಾಗರಿಕರ ಮಧ್ಯೆ ಅಡಗಿರುವ ಭಯೋತ್ಪಾದಕರನ್ನು ಗುರಿಯಾಗಿಸಿ ಈ ದಾಳಿ ಮಾಡಿದೆ ಎಂದು ಇಸ್ರೈಲಿ ಸೈನ್ಯ ಹೇಳಿದೆ.