ಹಿಂದುಗಳ ದೇವಸ್ಥಾನದಲ್ಲಿ ಆಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣ ನಡೆಯಬಾರದು ! – ಕೇರಳ ಉಚ್ಚ ನ್ಯಾಯಾಲಯ

  • ಕೇರಳ ಉಚ್ಚ ನ್ಯಾಯಾಲಯದ ಮಹತ್ವಪೂರ್ಣ ನಿರೀಕ್ಷಣೆ !

  • ಕೇರಳ ಸರಕಾರ ಮತ್ತು ಕೋಚಿನ ದೇವಸ್ವಂ ಬೋರ್ಡ್ ಇವರಿಂದ ಸ್ಪಷ್ಟನೆ ಕೇಳಿದೆ !

ತಿರುವನಂತಪುರಂ (ಕೇರಳ) – ದೇವಸ್ಥಾನ ಇದು ಮುಖ್ಯವಾಗಿ ಪ್ರಾರ್ಥನಾ ಸ್ಥಳಗಳಾಗಿವೆ. ಅಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣದ ಸ್ಥಳಗಳಾಗಲು ಸಾಧ್ಯವಿಲ್ಲ, ಎಂದು ಮಹತ್ವಪೂರ್ಣ ನಿರೀಕ್ಷಣೆಯನ್ನು ಕೇರಳ ಉಚ್ಚ ನ್ಯಾಯಾಲಯದಿಂದ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಚಲನಚಿತ್ರಗಳ ಚಿತ್ರೀಕರಣ ನಡೆಸುವ ಅನುಮತಿ ಹೇಗೆ ನೀಡಲಾಯಿತು, ಇದರ ಸ್ಪಷ್ಟನೆ ಕೂಡ ನ್ಯಾಯಾಲಯವು ಕೇರಳ ಸರಕಾರ ಮತ್ತು ಕೋಚಿನ ದೇವಸ್ಥಾನ ಬೋರ್ಡಿಗೆ ನೀಡಲು ಹೇಳಿದೆ. ತ್ರಿಪುನಿಥುರಾ ಶ್ರೀ ಪೂರ್ಣನಾಥಾಯಸ ದೇವಸ್ಥಾನದಲ್ಲಿ ಚಲನಚಿತ್ರದ ಚಿತ್ರೀಕರಣಕ್ಕೆ ನೀಡಿರುವ ಅನುಮತಿಗೆ ಸವಾಲು ಹಾಕುವ ಅರ್ಜಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಅದರ ಬಗ್ಗೆ ನ್ಯಾಯಾಲಯವು ಮೇಲಿನ ಟಿಪ್ಪಣಿ ನೀಡಿದೆ.

೧. ಈ ಅರ್ಜಿಯಲ್ಲಿ ದೇವಸ್ಥಾನ ಪರಿಸರದಲ್ಲಿ ಆಧಾರ್ಮಿಕ ಚಲನಚಿತ್ರ ಚಿತ್ರಿಕರಣಕ್ಕೆ ಅನುಮತಿ ನೀಡಿರುವ ಕುರಿತು ಪ್ರಶ್ನೆ ಕೇಳಲಾಗಿದೆ. ಅರ್ಜಿದಾರರು ನಡೆಸಿರುವ ಯುಕ್ತಿವಾದದಲ್ಲಿ, ಇಂತಹ ಕೃತಿಗಳಿಂದ ಕೇವಲ ಉಪಾಸನೆಯ ಪಾವಿತ್ರ್ಯದ ಅವಮಾನ ಆಗಿದೆ ಎಂದು ಅಲ್ಲ, ಬದಲಾಗಿ ಆಧ್ಯಾತ್ಮಿಕ ಪದ್ಧತಿಗಳಿಗಾಗಿ ಈ ಸ್ಥಳಗಳಿಗೆ ಭೇಟಿ ನೀಡುವ ಶ್ರದ್ಧಾವಂತರ ಭಾವನೆಗೆ ಕೂಡ ನೋವು ಉಂಟಾಗುವ ಅಪಾಯ ಇರುತ್ತದೆ.

೨. ವ್ಯಾಪಾರಿ ಚಿತ್ರೀಕರಣದಿಂದ ಆಗುವ ಅಗೌರವದ ಕಡೆಗೆ ಗಮನಹರಿಸುತ್ತಾ ನ್ಯಾಯಾಲಯವು ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆ ಕಾಪಾಡುವ ಮಹತ್ವದ ಬಗ್ಗೆ ಪುನರುಚ್ಚರಿಸಿತು.

೩. ಅರ್ಜಿಯಲ್ಲಿ ವಿಶಿಷ್ಟ ಘಟನೆಗಳ ಮೇಲೆ ಬೆಳಕು ಚೆಲ್ಲಲಾಯಿತು, ಅದರಲ್ಲಿ ಅವರು ಹಬ್ಬ ಹರಿದಿನದ ಸಮಯದಲ್ಲಿ ಚಲನಚಿತ್ರದಲ್ಲಿ ಕೆಲಸ ಮಾಡುವ ಕೆಲವು ಕಲಾವಿದರು ಮದ್ಯಪಾನ ಮಾಡಿ ಮತ್ತು ಚಪ್ಪಲಿ ಧರಿಸಿ ದೇವಸ್ಥಾನಗಳಲ್ಲಿ ಪ್ರವೇಶ ಮಾಡಿರುವ ಸಮಾಚಾರಗಳು ಇವೆ.

ಸಂಪಾದಕೀಯ ನಿಲುವು

ಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !