ಓಟಾವಾ (ಕೆನಡಾ) – ಕೆನಡಾದಲ್ಲಿನ ಹೌಸ್ ಆಫ್ ಕಾಮನ್ಸ್ ನ ಸದಸ್ಯ ಮತ್ತು ನ್ಯೂ ಡೆಮೊಕ್ರಟಿಕ್ ಪಾರ್ಟಿಯ (ಎನ್.ಡಿ.ಪಿ.ಯ) ನಾಯಕ ಜಗಮಿತ ಸಿಂಹ ಇವರು ಕೆನಡಾದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಸಿಂಹ ಇವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರ ಆಪ್ತ ಸಾಂಸದರೆಂದು ಗುರುತಿಸಿಕೊಂಡಿದ್ದಾರೆ. ಸಿಂಹ ಇವರು ಭಾರತೀಯ ಮುತ್ಸತ್ತಿಗಳನ್ನು ಹೊರಹಾಕುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಜಗಮಿತ ಸಿಂಹ ಇವರು, ಕೆನಡಾದಲ್ಲಿನ ಸಿಖ್ ಸಮುದಾಯಕ್ಕೆ ಭಾರತೀಯ ಅಧಿಕಾರಿಗಳಿಂದ ಭಯ, ಬೆದರಿಕೆ, ಕಿರುಕುಳ ಮತ್ತು ಹಿಂಸಾಚಾರವನ್ನು ಎದುರಿಸಬೇಕಾಗುತ್ತದೆ. ಸಿಖ್ಕರ ಸುಲಿಗೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
೧. ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಮುತ್ಸತ್ತಿಗಳನ್ನು ಹೊರಹಾಕಲು ಬೆಂಬಲಿಸಿದ್ದಾರೆ. ಇದರ ಜೊತೆಗೆ ಕೆನಡಾದಲ್ಲಿ ಕಾರ್ಯನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇದ ಹೇರಲು ಕೂಡ ಆಗ್ರಹಿಸಿದ್ದಾರೆ. ಕೆನಡಾದ ನೆಲದಲ್ಲಿ ಯಾರು ಕೆನಡಾ ವಿರೋಧಿ ಕಾರ್ಯ ಚಟುವಟಿಕೆ ಮಾಡುತ್ತಾರೆ, ಅವರ ಮೇಲೆ ಕೆನಡಾ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಕೂಡ ಆವಶ್ಯಕವಾಗಿದೆ, ಎಂದು ಕೂಡ ಅವರು ಹೇಳಿದರು.
೨. ಖಲಿಸ್ತಾನವಾದಿ ಹರದೀಪ ಸಿಂಹ ನಿಜ್ಜರ ಇವನ ಹತ್ಯೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳ ಕೈವಾಡವಿತ್ತು, ಅದರ ಕುರಿತು ಕೆನಡಾ ಸರಕಾರದ ಹತ್ತಿರ ಸಶಕ್ತ ಸಾಕ್ಷಿಗಳು ಇವೆ ಎಂದು ಕೂಡ ಸಿಂಹ ಹೇಳಿದರು.
೩. ಜಸ್ಟಿನ್ ಟ್ರುಡೋ ಇವರ ಪಕ್ಷವು ಎನ್.ಡಿ.ಪಿ.ಯ ಸಹಾಯದಿಂದ ಅಧಿಕಾರ ಪಡೆದಿತ್ತು. ಮಧ್ಯಂತರದಲ್ಲಿ ಸಿಂಹ ಇವರು ಕೆನಡಾ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದಿದ್ದರು; ಆದರೂ ಕೂಡ ಟ್ರುಡೋ ಮತ್ತು ಇವರ ಸಂಬಂಧ ಒಳ್ಳೆಯದಾಗಿಯೇ ಇರುವುದೆಂದು ಹೇಳಲಾಗುತ್ತಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯುವುದಕ್ಕಾಗಿ ಎನ್.ಡಿ.ಪಿ. ಪಕ್ಷದ ಬೆಂಬಲದ ಆವಶ್ಯಕತೆ ಬರಬಹುದು. ಆದ್ದರಿಂದ ಸಿಂಹ ಇವರು ಖಲಿಸ್ತಾನಿ ಚಟುವಟಿಕೆಗಳಿಗೆ ಟ್ರುಡೋ ಇವರು ಯಾವಾಗಲೂ ಸೊಪ್ಪು ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.
ಸಂಅದಕೀಯ ನಿಲುವು
|