ಒಟಾವಾ (ಕೆನಡಾ) – ‘ಸಿಖ್ಸ್ ಫಾರ್ ಜಸ್ಟೀಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನು ಇವನು ಕೆನಡಾದ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರಾ ಆರ್ಯ ಗೆ ಜೀವ ಬೆದರಿಕೆ ಹಾಕಿದ್ದಾನೆ. ಚಂದ್ರಾ ಆರ್ಯ ಇವರು ಕೆನಡಾದಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಭಯೋತ್ಪಾದಕತೆಯ ಬಗ್ಗೆ ನಿರಂತರವಾಗಿ ಟೀಕಿಸುತ್ತಿದ್ದಾರೆ. ಇತ್ತೀಚೆಗೆ ಚಂದ್ರಾ ಆರ್ಯ ಇವರು ಕೆನಡಾದ ಸಂಸತ್ತಿನಲ್ಲಿ ಕೆನಡಾ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಖಲಿಸ್ತಾನಿ ಭಯೋತ್ಪಾದನೆಯೊಂದಿಗೆ ನೇರ ಸಂಬಂಧ ಇದೆಯೆಂದು ಹೇಳಿದ್ದರು.
ಪನ್ನು ಸಂಸದ ಚಂದ್ರಾ ಆರ್ಯ ಅವರಿಗೆ ಬೆದರಿಕೆ ಹಾಕಿದ ಆಡಿಯೋ ಸಂದೇಶವನ್ನು ಪ್ರಸಾರ ಮಾಡಲಾಗಿದೆ. 2 ನಿಮಿಷದ ಈ ಸಂದೇಶದಲ್ಲಿ ಪನ್ನು ಚಂದ್ರಾ ಆರ್ಯನ ಮೇಲೆ ದೇಶದ್ರೋಹದ ಅಪರಾಧವನ್ನು ದಾಖಲಿಸುವಂತೆ ಕೋರಿದ್ದಾನೆ. ಪನ್ನೂ `ಚಂದ್ರಾ ಆರ್ಯ ಇವರು ‘ಭಾರತ ಸರಕಾರದ ಮುಖವಾಣಿ ಆಗಿರುವಂತೆ ನಡೆದುಕೊಳ್ಳುತ್ತಾರೆ ಮತ್ತು ಖಲಿಸ್ತಾನ ಬೆಂಬಲಿಗರ ಬಗ್ಗೆ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ’ ಎಂದು ಹುರುಳಿಲ್ಲದ ಆರೋಪ ಮಾಡಿದರು. ‘ಚಂದ್ರಾ ಆರ್ಯ ಇವರಿಗೆ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ‘ಚಂದ್ರಾ ಆರ್ಯ, ನೀವು ನಾಶವಾಗುವ ದಾರಿ ಕಾಯಿರಿ’ ಎಂದು ಬೆದರಿಕೆ ಹಾಕಿದ್ದಾನೆ.
ಸಂಪಾದಕೀಯ ನಿಲುವುಕೆನಡಾದ ಪ್ರಜೆಯಾಗಿರುವ ಪನ್ನು ಅದೇ ದೇಶದ ಸಂಸದನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಮತ್ತು ಅವನ ಮೇಲೆ ಟ್ರುಡೊ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಇದರಿಂದ ಟ್ರೂಡೊ ಸರಕಾರದ ದ್ವಂದ್ವನೀತಿ ಬಹಿರಂಗವಾಗುತ್ತದೆ. ಇಂತಹ ಸರಕಾರಕ್ಕೆ ಭಾರತದ ವಿರುದ್ಧ ಆರೋಪ ಮಾಡುವ ಅಧಿಕಾರವಿಲ್ಲ, ಇದನ್ನು ಭಾರತವು ವಿಶ್ವದ ವೇದಿಕೆಯಿಂದ ಹೇಳಬೇಕು ! |