ಬಹರಾಯಿಚ (ಉತ್ತರಪ್ರದೇಶ) ಇಲ್ಲಿ ಶ್ರೀದುರ್ಗಾದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ದಾಳಿ

  • ಓರ್ವ ಹಿಂದೂವಿನ ಬರ್ಬರ ಹತ್ಯೆ

  • ಆಕ್ರೋಶಗೊಂಡ ಹಿಂದುಗಳಿಂದ ಮುಸಲ್ಮಾನರ ಮನೆ ಮತ್ತು ಅಂಗಡಿಗಳಿಗೆ ಬೆಂಕಿ

ಬಹರಾಯಿಚ (ಉತ್ತರಪ್ರದೇಶ) – ಇಲ್ಲಿಯ ರೆಹೂಮ ಮನ್ಸೂರ್ ಈ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಮಹಾರಾಜಗಂಗ ಈ ಪ್ರದೇಶದಿಂದ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನಾ ಮೆರವಣಿಗೆ ಹೋಗುತ್ತಿರುವಾಗ ಡಿಜೆ ಹಾಕಿದ್ದರಿಂದ ನಡೆದ ವಿವಾದದಿಂದಾಗಿ ಮತಾಂಧ ಮುಸಲ್ಮಾನರಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸುತ್ತಾ ದಾಳಿ ಮಾಡಿದರು. ಇದಕ್ಕೆ ಹಿಂದುಗಳಿಂದ ಕೂಡ ಪ್ರತ್ಯುತ್ತರ ನೀಡಿದ ನಂತರ ಮುಸಲ್ಮಾನರು ರಾಮ ಗೋಪಾಲ ಮಿಶ್ರ (ವಯಸ್ಸು ೨೨ ವರ್ಷ) ಮೇಲೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಇರಿದು ಬರ್ಬರ ಹತ್ಯೆ ಮಾಡಿದರು. ಇದರಿಂದ ಹಿಂದುಗಳು ಇನ್ನೂ ಆಕ್ರೋಶಗೊಂಡು ಅಲ್ಲಿಯ ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಮಹಮ್ಮದ್ ಫಹೀಮ್, ಮಹಮ್ಮದ್ ನಾನಕಾವು, ಮಹಮ್ಮದ್ ಸರಫರಾಜ್, ಮಹಮ್ಮದ್ ಸಾಹಿರ್ ಖಾನ್, ಮಹಮ್ಮದ್ ಮಾರುಫ್ ಅಲಿ, ಮಹಮ್ಮದ್ ಅಬ್ದುಲ್ ಹಮೀದ್ ಸಹಿತ ೨೫ ಜನರನ್ನು ಬಂಧಿಸಿದ್ದಾರೆ. ಈಗ ಮಹಾರಾಜಗಂಜ ಇಲ್ಲಿ ಅಘೋಷಿತ ಕರ್ಫ್ಯೂ ಇದೆ. ಹಾಗೂ ಇಂಟರ್ನೆಟ್ ಬಂದ್ ಮಾಡಲಾಗಿದೆ.

ಘಟನೆಯ ವಿವರ ?

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಮೆರವಣಿಗೆ ಹೋಗುತ್ತಿರುವಾಗ ಡಿಜೆ ಹಾಕಿದ್ದರಿಂದ ವಿವಾದ ಸೃಷ್ಟಿಯಾಯಿತು. ಅಬ್ದುಲ್ ಹಮೀದ್ ಇವನ ಮಕ್ಕಳು ಸಾಬಲು, ಸರಪರಾಜ್ ಮತ್ತು ಫಹಿಮ್ ಇವನ ಜೊತೆಗೆ ಘಟನ ಸ್ಥಳಕ್ಕೆ ತಲುಪಿದರು ಮತ್ತು ಅವರು ಬೈಗುಳ ಬಯ್ಯಲು ಆರಂಭಿಸಿದರು. ಆ ಸಮಯದಲ್ಲಿ ಇತರ ಮುಸಲ್ಮಾನರು ಮನೆಯ ಛಾವಣಿಯಿಂದ ಕಲ್ಲು ತೂರಾಟ ನಡೆಸಿದರು. ಅದರಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿಯ ಕೈ ಮುರಿಯಿತು. ನಂತರ ಜನರು ವಿಸರ್ಜನೆ ಮೆರವಣಿಗೆ ನಿಲ್ಲಿಸಿ ವಿರೋಧಿಸಲು ಆರಂಭಿಸಿದರು. ಹಿಂದುಗಳು ಕಲ್ಲು ತೂರಾಟಕ್ಕೆ ಪ್ರತ್ಯುತ್ತರ ನೀಡಿದರು ಮತ್ತು ಅದರಲ್ಲಿನ ರಾಮ ಗೋಪಾಲ ಮಿಶ್ರ ಇವನು ಅಬ್ದುಲ್ ಹಮೀದ್ ಇವರ ಮನೆಯ ಛಾವಣಿಯ ಮೇಲೆ ಏರಿದನು ಮತ್ತು ಅಲ್ಲಿಯ ಹಸಿರು ಧ್ವಜ ತೆಗೆದು ಹಾಕಿ ಅಲ್ಲಿ ಕೇಸರಿ ಧ್ವಜ ಹಾಕಿದನು. ಇದರ ನಂತರ ಮತಾಂಧ ಮುಸಲ್ಮಾನರು ಅವನನ್ನು ಎಳೆದು ಮನೆಗೆ ಕರೆದು ಕೊಂಡು ಹೋದರು ಮತ್ತು ಅಲ್ಲಿ ಅವನ ಉಗುರುಗಳು ಎಳೆದು ಕಿತ್ತಿದರು. ಅದರ ನಂತರ ಅವನ ತಲೆಗೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಆದ್ದರಿಂದ ಅವನು ಸ್ಥಳದಲ್ಲೇ ಅಸುನೀಗಿದನು. ರಾಮ ಗೋಪಾಲ್ ಇವನನ್ನು ರಕ್ಷಿಸುವುದಕ್ಕಾಗಿ ಬಂದಿರುವ ರಾಜನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ರಾಜನ್ ಇವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಿಂಸಾಚಾರದಲ್ಲಿ ೧೨ ಜನರು ಗಾಯಗೊಂಡಿದ್ದಾರೆ. ೩ ತಿಂಗಳ ಹಿಂದೆಯೇ ರಾಮಗೋಪಾಲ ಮಿಶ್ರ ಇವನ ವಿವಾಹವಾಗಿತ್ತು.

ಈ ಘಟನೆಯ ನಂತರ ಆಕ್ರೋಶಗೊಂಡ ಜನರು ಮುಸಲ್ಮಾನರ ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ದ್ವಿಚಕ್ರವಾಹನದ ಒಂದು ದೊಡ್ಡ ಅಂಗಡಿಗೂ ಕೂಡ (ಶೋರೂಂಗೆ) ಬೆಂಕಿ ಹಚ್ಚಲಾಯಿತು. ಹಾಗೂ ಒಂದು ಆಸ್ಪತ್ರೆಗೂ ಬೆಂಕಿ ಹಚ್ಚಲಾಯಿತು. ಪೊಲೀಸರ ಕೆಲವು ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ.

ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲ ! – ಹಿಂದುಗಳ ಎಚ್ಚರಿಕೆ

ಎಲ್ಲಿಯವರೆಗೆ ‘ರಾಮ ಗೋಪಾಲ್ ಮಿಶ್ರ ಇವನ ಹಂತಕರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲವೋ ಅಲ್ಲಿಯವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ, ಎಂದು ಹಿಂದುಗಳು ಹೇಳಿದ್ದಾರೆ. ಅವರು ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಹೋರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮ ಗೋಪಾಲ ಮಿಶ್ರಯವರ ತಾಯಿಯು ‘ಹತ್ಯೆಯ ಸೇಡು ಹತ್ಯೆಯಿಂದಲೇ ಆಗಬೇಕೆಂದು’ ಹೇಳಿದ್ದಾರೆ. ಹಾಗೂ ಅವನ ಸಹೋದರಿ ಕೂಡ ಎಲ್ಲಿಯವರೆಗೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಹುಗಿಯುವುದಿಲ್ಲ, ಅಲ್ಲಿಯವರೆಗೆ ಸಹೋದರನ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಹೇಳಿದರು.

ಶವ ಪರೀಕ್ಷೆ ಮಾಡುವಾಗ ರಾಮ ಗೋಪಾಲ್ ಇವನಿಗೆ ಗುಂಡು ಹಾರಿಸುವುದರ ಜೊತೆಗೆ ಚಾಕುವಿನಿಂದ ಇರಿದು ಕೊಂದಿರುವುದು ತಿಳಿದು ಬಂದಿದೆ. ಅಕ್ಟೋಬರ್ ೧೪ ರಂದು ಬೆಳಿಗ್ಗೆ ಶವ ಮನೆಗೆ ತಲುಪಿದ ನಂತರ ೫ -೬ ಸಾವಿರ ಹಿಂದುಗಳು ಸೇರಿದ್ದರು. ಜನರು ಶವವನ್ನು ತೆಗೆದು ಕೊಂಡು ಸುಮಾರು ೫ ಕಿಲೋಮೀಟರ್ ಅಂತ್ಯಯಾತ್ರೆ ನಡೆಸಿದರು. ಆ ಸಮಯದಲ್ಲಿ ಕೆಲವು ಸ್ಥಳಗಳಲ್ಲಿ ಗುಂಪಿನಿಂದ ಬೆಂಕಿ ಅವಘಡ ಮಾಡಿದವು. ಅನೇಕ ಸ್ಥಳಗಳಲ್ಲಿ ಆಕ್ರೋಶಗೊಂಡ ಹಿಂದುಗಳು ಅನೇಕ ಮನೆಗಳಿಗೆ ಬೆಂಕಿ ಹಚ್ಚಿದರು. ಮಹಸಿ ತಹಸೀಲ್ ನ ಮುಖ್ಯ ಮಾರುಕಟ್ಟೆಯಲ್ಲಿ ಬೆಂಕಿ ಹಚ್ಚಿದರು. ಪೊಲೀಸರು ಅವರನ್ನು ಹಿಡಿತಕ್ಕೆ ತರುವಲ್ಲಿ ಅಸಹಾಯಕರಾಗಿ ಕಂಡು ಬಂದರು.

ಮುಕದರ್ಶಕ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ! – ಮೃತ ರಾಮ ಗೋಪಾಲನ ಸಹೋದರ ವೈಭವರಿಂದ ಆಗ್ರಹ

ಮೃತ ರಾಮ ಗೋಪಾಲ್ ಇವನ ಸಹೋದರ ವೈಭವ ಮಿಶ್ರ ಇವನು, ನಾವು ಮೂರ್ತಿ ತೆಗೆದುಕೊಂಡು ಹೋಗುತ್ತಿದ್ದೆವು, ಆಗ ಅಬ್ದುಲ್ ಹಮೀದ್ ಇವನ ಮನೆಯಿಂದ ಅನಿರೀಕ್ಷಿತವಾಗಿ ಕಲ್ಲು ತೂರಾಟ ನಡೆಯಿತು. ಪೊಲೀಸರು ಅಲ್ಲೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನನ್ನ ಹಿರಿಯ ಸಹೋದರ ಮುಂದೆ ಬಂದು ಕಲ್ಲು ತೂರಾಟ ಮಾಡುವವರನ್ನು ನಿಲ್ಲಿಸುವ ಪ್ರಯತ್ನ ಮಾಡಿದನು; ಆದರೆ ಪೊಲೀಸರು ಹಿಂದುಗಳನ್ನೇ ಹಿಂದೆ ತಳ್ಳುತ್ತಿದ್ದರು. ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದರು. ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕೆಂಬ ನಮ್ಮ ಇಚ್ಛೆಯಾಗಿದೆ ಎಂದು ಹೇಳಿದರು.

 

ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಜನರು ಆಕ್ರೋಶಗೊಂಡರು ! – ಪೋಲೀಸ್ ಅಧಿಕಾರಿಯ ದಾವೆ

ಪೊಲೀಸ ಅಧಿಕಾರಿ ಬೃಂದಾ ಶುಕ್ಲ ಇವರು, ವಿಸರ್ಜನೆ ಮೆರವಣಿಗೆಯ ಮೇಲೆ ನಡೆದಿರುವ ಕಲ್ಲು ತೂರಾಟದ ಘಟನೆಯನ್ನು ಪೂಜಾ ಸಮೀತಿಯ ಜನರು ವಿರೋಧಿಸಿದ್ದರು, ಆಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು. (ಕಲ್ಲು ತೂರಾಟ ನಡೆಸುವವರ ಮೇಲೆ ಲಾಠಿಚಾರ್ಜ್ ಮಾಡುವ ಬದಲು ಹಿಂದುಗಳ ಮೇಲೆ ಲಾಠಿಚಾರ್ಜ್ ಮಾಡಿರುವುದರಿಂದ ಹಿಂದುಗಳು ವಿರೋಧಿಸಿದರು, ಅದು ಹೇಗೆ ತಪ್ಪಾಗುತ್ತದೆ ? ಈ ಲಾಠಿ ಚಾರ್ಜ್ ದ ವಿಚಾರಣೆ ನಡೆಯಬೇಕು ! – ಸಂಪಾದಕರು) ಅದರ ನಂತರ ಕಾಲ್ತುಳಿತ ಆಯಿತು. ಆದ್ದರಿಂದ ಬಿಗುವಿನ ವಾತಾವರಣ ಇನ್ನು ಹೆಚ್ಚಾಯಿತು. ಈ ಪ್ರಕರಣದಲ್ಲಿ ಪೊಲೀಸರು ಎರಡು ಕಡೆಯ ೨೫ ಜನರನ್ನು ವಶಕ್ಕೆ ಪಡೆದಿದ್ದಾರೆ, ಅವರ ವಿಚಾರಣೆ ನಡೆಯುತ್ತಿದೆ. ಜನರನ್ನು ಸಮಾಧಾನ ಪಡಿಸಿದ ನಂತರ ಅಧಿಕಾರಿಗಳು ಮೂರ್ತಿಯ ವಿಸರ್ಜನೆ ಆರಂಭಿಸಿದರು. ಈ ಹಿಂಸಾಚಾರದಿಂದ ಪರಿಸರದಲ್ಲಿನ ಸುಮಾರು ೧ ಸಾವಿರ ೧೦೦ ಮೂರ್ತಿಗಳ ವಿಸರ್ಜನೆ ನಿಲ್ಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ ನಂತರ ಜನರು ಮೂರ್ತಿಯ ವಿಸರ್ಜನೆ ಮಾಡಲು ಆರಂಭಿಸಿದರು.

ಹಿಂಸಾಚಾರ ಮಾಡಿದವರನ್ನು ಬಿಡುವುದಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಈ ಘಟನೆಯನ್ನು ಗಂಭೀರವಾಗಿಯೇ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹಿಂಸಾಚಾರ ನಡೆಸಿದವರನ್ನು ಬಿಡುವುದಿಲ್ಲ, ಎಂದು ಎಚ್ಚರಿಕೆ ನೀಡಿದ್ದಾರೆ. ಅದರ ಜೊತೆಗೆ ಈ ಘಟನೆಗಾಗಿ ಯಾರು ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ತೋರಿಸಿದ ಪೊಲೀಸ ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಕೂಡ ಅವರು ಹೇಳಿದ್ದಾರೆ.

೨ ಪೊಲೀಸ ಅಧಿಕಾರಿ ವಜಾ

ಈ ಪ್ರಕರಣದಲ್ಲಿ ನಿಷ್ಕಾಳಜಿತನ ತೋರಿಸಿರುವ ೨ ಪೊಲೀಸ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

ಸಂಪಾದಕೀಯ ನಿಲುವು

  • ಉತ್ತರಪ್ರದೇಶದಲ್ಲಿ ಭಾಜಪದ ಹಿಂದುತ್ವನಿಷ್ಠ ಸರಕಾರ ಇರುವಾಗ ಹಿಂದೂಗಳಿಗೆ ಈ ಸ್ಥಿತಿ ಬರಬಾರದು ಇಲ್ಲವಾದರೆ ‘ಹಿಂದುಗಳ ರಕ್ಷಣೆ ಯಾರು ಮಾಡುವರು ?’ ಈ ರೀತಿಯ ಪ್ರಶ್ನೆ ಉದ್ಭವಿಸಬಹುದು !
  • ಯೋಗಿ ಆದಿತ್ಯನಾಥ ಇವರ ಸರಕಾರ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವಾಗ ಕೂಡ ಅವರ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ, ಇದೆ ಇದರಿಂದ ಗಮನಕ್ಕೆ ಬರುತ್ತದೆ ! ಆದ್ದರಿಂದ ಹಿಂದುಗಳಿಗೆ ಯಾವ ಪರಿಸ್ಥಿತಿ ಎದುರಿಸಬೇಕಾಗುವುದು, ಇದನ್ನು ಅರಿತುಕೊಂಡು ಅವರು ಸಂಘಟಿತರಾಗಬೇಕು !