ಜಾರ್ಖಂಡ್ ನಲ್ಲಿ ಮುಸಲ್ಮಾನರಿಂದ ಶ್ರೀದುರ್ಗಾದೇವಿಯ ಮೂರ್ತಿ ವಿಸರ್ಜನೆಗೆ ವಿರೋಧ; ಬಿಗುವಿನ ವಾತಾವರಣ

ಪೊಲೀಸರು ಮುಸಲ್ಮಾನರ ಪರ ವಹಿಸುತ್ತಿದ್ದಾರೆ ಎಂದು ಹಿಂದೂಗಳ ಆರೋಪ

ಗಢವಾ (ಜಾರ್ಖಂಡ್) – ಇಲ್ಲಿ ಮತಾಂಧ ಮುಸಲ್ಮಾನರು ಶ್ರೀ ದುರ್ಗಾದೇವಿಯ ಮೂರ್ತಿ ವಿಸರ್ಜನೆ ಮೆರವಣಿಗೆ ತಡೆದಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಲ್ಲಿ ಎರಡು ಬೇರೆ ಬೇರೆ ಘಟನೆಗಳು ನಡೆದಿದೆ. ಹಿಂದುಗಳು ಯಾವ ಮಾರ್ಗದಿಂದ ಮೆರವಣಿಗೆ ನಡೆಸಬೇಕೆಂದು ಇಚ್ಛಿಸುತ್ತಿದ್ದರು, ಆ ಮಾರ್ಗದ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದರು. ಅಸಮಾಧಾನಗೊಂಡಿರುವ ಹಿಂದುಗಳು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

೧. ಮೊದಲನೆಯ ಪ್ರಕರಣ ಗಢವಾ ಇಲ್ಲಿಯ ಮತಗಢದ್ದಾಗಿದೆ. ಇಲ್ಲಿ ಅಕ್ಟೋಬರ್ ೧೩ ರಂದು ಹಿಂದುಗಳು ಮೆರವಣಿಗೆ ನಡೆಸಿದಾಗ ಮುಸಲ್ಮಾನರು ‘ಇದು ನಿಷೇಧಿತ ಮಾರ್ಗವಾಗಿದೆ’ ಎಂದು ಹೇಳುತ್ತಾ ಅವರನ್ನು ತಡೆದರು. ಅದರ ನಂತರ ಬಿಗುವಿನ ವಾತಾವರಣ ನಿರ್ಮಾಣವಾಯಿತು. ವಾದವಿವಾದ ನಡೆದು ಮುಸಲ್ಮಾನರು ಕಲ್ಲುತೂರಾಟ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು ಹಾಗೂ ಅಶ್ರಯ ವಾಯು ಉಪಯೋಗಿಸಿದರು. ಅದರ ನಂತರ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಓರ್ವ ಗಾಯಗೊಂಡನು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಪೊಲೀಸರು ಮುಸಲ್ಮಾನರ ಪರ ವಹಿಸಿದ್ದರು ಎಂದು ಹಿಂದುಗಳು ಆರೋಪಿಸಿದ್ದಾರೆ. ಆದ್ದರಿಂದ ಪೊಲೀಸರು ಮತ್ತು ಹಿಂದೂ ಸಂಘಟನೆ ಇವರಲ್ಲಿ ವಿವಾದ ನಡೆಯಿತು. ಯಾವ ಮಾರ್ಗದಿಂದ ವಿಸರ್ಜನೆ ಮೆರವಣಿಗೆ ನಡೆಸಬೇಕಿತ್ತು, ಆ ಮಾರ್ಗದಿಂದ ಈ ಹಿಂದೆ ಕೂಡ ವಿವಾದ ನಡೆದಿತ್ತು ಎಂದು ಪೊಲೀಸರ ಹೇಳಿಕೆಯಾಗಿದೆ. ಹಿಂಸಾಚಾರದಲ್ಲಿ ಕೆಲವು ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಪೊಲೀಸರು ಮುಸಲ್ಮಾನರ ಬದಲು ಕೆಲವು ಹಿಂದುಗಳನ್ನೇ ಬಂಧಿಸಿದ್ದಾರೆ. ಈಗ ಅಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

೨. ಇನ್ನೊಂದು ಪ್ರಕರಣ ಗಢವಾ ಜಿಲ್ಲೆಯಲ್ಲಿನ ಲಖನಾ ಗ್ರಾಮದಲ್ಲಿನದ್ದಾಗಿದೆ. ಅಲ್ಲಿ ಕೂಡ ಮುಸಲ್ಮಾನರು ಮೆರವಣಿಗೆಗೆ ವಿರೋಧಿಸಿ ಅದನ್ನು ತಡೆದರು. ‘ಈ ಮಾರ್ಗದಿಂದ ವಿಸರ್ಜನೆ ಮೆರವಣಿಗೆ ನಡೆಸಲಾಗದು’ ಎಂದು ಅವರು ಹೇಳಿದರು. ಆ ಸಮಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮತ್ತು ಸರಕಾರಿ ಅಧಿಕಾರಿ ಇವರು ಎರಡು ಕಡೆಯವರ ಜನರ ಜೊತೆಗೆ ಚರ್ಚಿಸಿದರು; ಆದರೆ ಯಾವುದೇ ಉಪಾಯ ದೊರೆಯಲಿಲ್ಲ. ಇದರಿಂದ ಭಕ್ತರು ಅಸಮಾಧಾನ ಗೊಂಡರು.
ಆಡಳಿತದ ಬೇಜವಾಬ್ದಾರಿತನದ ಕುರಿತು ಆರೋಪಿಸುತ್ತಾ ಘೋಷಣೆಗಳು ಕೂಗಿದರು.

ಘಟನಾ ಸ್ಥಳಕ್ಕೆ ತಲುಪಿರುವ ಭಾಜಪದ ಮಾಜಿ ಶಾಸಕ ಸತ್ಯೇಂದ್ರನಾಥ ತಿವಾರಿ ಇವರು ‘ಮುಸಲ್ಮಾನರು ಶಕ್ತಿಯ ಉಪಯೋಗ ಮಾಡಿದ್ದಾರೆ’, ಎಂದು ಆರೋಪಿಸಿದರು. ಅವರು, ಯಾವ ರಸ್ತೆಯಲ್ಲಿ ಮೆರವಣಿಗೆ ನಿಲ್ಲಿಸಿದ್ದರು ಆ ರಸ್ತೆ ಸರಕಾರದ ಹಣದಿಂದ ತಯಾರಿಸಲಾಗಿದೆ. ಈ ರಸ್ತೆಯಿಂದ ಪ್ರತಿ ವರ್ಷ ದೇವಿಯ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ಯಾವಾಗ ಮುಸಲ್ಮಾನರ ಮೊಹೊರಮ ಮೆರವಣಿಗೆ ಈ ರಸ್ತೆಗೆ ಬರುತ್ತದೆ ಆಗ ಹಿಂದೂಗಳು ಮುಸಲ್ಮಾನರಿಗೆ ಪಾನೀಯ ಹಂಚುತ್ತಾರೆ. (ಈಗ ಹೇಗೆ ಮಾಡಬೇಕೆ ? ಇದನ್ನು ಹಿಂದುಗಳು ಯೋಚನೆ ಮಾಡಬೇಕು ! – ಸಂಪಾದಕರು)

ಎರಡು ಪಕ್ಷದ ಚರ್ಚೆಯ ನಂತರ ಈ ಪ್ರಕರಣ ಬಗೆಹರಿದಿದೆ ಎಂದು ಪೊಲೀಸರು ಹೇಳಿದರು. ಕೆಲವು ಹೊರಗಿನ ಜನರು ಈ ವಿವಾದಿತ ಪರಿಸ್ಥಿತಿ ನಿರ್ಮಾಣ ಮಾಡಿರುವರು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಕೂಡ ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಅವರು ಹಿಂದುಗಳ ಪರವಾಗಿಲ್ಲ, ಮುಸಲ್ಮಾನರ ಪರವಾಗಿಯೇ ಇರುವರು ! ಇದರ ಬಗ್ಗೆ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಮುಂತಾದ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ !