ಮುಂಬಯಿ – ಮಹಾರಾಷ್ಟ್ರದ ಪುರಾತನ ಮತ್ತು ವಿಶ್ವಪ್ರಸಿದ್ಧ ಶ್ರೀ ಅಷ್ಟವಿನಾಯಕ ದೇವಸ್ಥಾನಗಳಲ್ಲಿ ಶ್ರೀ ಮಯೂರೇಶ್ವರ ದೇವಸ್ಥಾನ (ಮೋರಗಾವ, ಪುಣೆ), ಚಿಂತಾಮಣಿ ದೇವಸ್ಥಾನ (ಥೇವೂರ, ಪುಣೆ), ಶ್ರೀ ವಿಘ್ನೇಶ್ವರ ದೇವಸ್ಥಾನ (ಓಝರ್, ಪುಣೆ), ಶ್ರೀ ಮಹಾಗಣಪತಿ ದೇವಸ್ಥಾನ (ರಾಂಜಣಗಾಂವ ದೇವಸ್ಥಾನ, ಪುಣೆ), ಶ್ರೀ ವರದವಿನಾಯಕ ದೇವಸ್ಥಾನ (ಮಹಡ, ರಾಯಗಡ), ಶ್ರೀ ಬಲ್ಲಾಳೇಶ್ವರ ದೇವಸ್ಥಾನ (ಪಾಲಿ, ರಾಯಗಡ) ಮತ್ತು ಶ್ರೀ ಸಿದ್ಧಿವಿನಾಯಕ ದೇವಸ್ಥಾನ (ಸಿದ್ಧಟೆಕ, ಜಿಲ್ಲೆ ಅಹಲ್ಯಾನಗರ) ಈ 7 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ 92 ಕೋಟಿ 19 ಲಕ್ಷ ರೂಪಾಯಿಗಳ ಅನುದಾನ ಮಂಜೂರಾಗಿದೆ.
ಇದರಲ್ಲಿ ಶ್ರೀ ಮಯೂರೇಶ್ವರ ದೇವಸ್ಥಾನಕ್ಕೆ 7 ಕೋಟಿ 30 ಲಕ್ಷ ರೂಪಾಯಿಗಳು, ಶ್ರೀ ಚಿಂತಾಮಣಿ ದೇವಸ್ಥಾನಕ್ಕೆ 6 ಕೋಟಿ 62 ಲಕ್ಷ ರೂಪಾಯಿಗಳು, ಶ್ರೀ ವಿಘ್ನೇಶ್ವರ ದೇವಸ್ಥಾನಕ್ಕೆ 6 ಕೋಟಿ 89 ಲಕ್ಷ ರೂಪಾಯಿಗಳು, ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ 6 ಕೋಟಿ 35 ಲಕ್ಷ ರೂಪಾಯಿಗಳು, ಶ್ರೀ ವರದ ವಿನಾಯಕ ದೇವಸ್ಥಾನಕ್ಕೆ 13 ಕೋಟಿ 95 ಲಕ್ಷ ರೂಪಾಯಿಗಳು, ಶ್ರೀ ಬಲ್ಲಾಳೇಶ್ವರ ದೇವಸ್ಥಾನಕ್ಕೆ 14 ಕೋಟಿ 90 ಲಕ್ಷ ರೂಪಾಯಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ 6 ಕೋಟಿ 66 ಲಕ್ಷ ರೂಪಾಯಿಗಳು ಹೀಗೆ ಅನುದಾನ ಮಂಜೂರಾತಿ ಮಾಡಲಿದೆ. ಇದರಿಂದ ದೇವಸ್ಥಾನಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಪರಿಸರ ನಿರ್ವಹಣೆ ಜತೆಗೆ ವಿದ್ಯುದ್ದೀಕರಣ ಮತ್ತಿತರ ಕಾರ್ಯಗಳನ್ನು ಮಾಡಲಾಗುವುದು. ಜೀರ್ಣೋದ್ಧಾರ ಮಾಡುವಾಗ ದೇವಸ್ಥಾನದ ಮೂಲ ರೂಪವನ್ನು ಕಾಪಾಡಲು ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾಮಗಾರಿಗಳು ನಡೆಯಲಿದೆ. ಸಂಬಂಧಿಸಿದ ಜಿಲ್ಲೆಗಳ ಉಸ್ತುವಾರಿ ಸಚಿವರ ಅಧ್ಯಕ್ಷತೆಯಡಿಯಲ್ಲಿ ಸ್ಥಾಪಿಸಲಾದ ಜಿಲ್ಲಾಮಟ್ಟದ ಸಮಿತಿಯು ಈ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳ ಪ್ರಸ್ತಾವನೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಉನ್ನತ ಮಟ್ಟದ ಸಮಿತಿಗೆ ಕಳುಹಿಸಿತು. ಸರಕಾರ ಅವುಗಳನ್ನು ಅನುಮೋದಿಸಿದೆ.