ಬಟೇಂಗೆ ತೋ ಕಟೇಂಗೆ | (ಪ್ರತ್ಯೇಕವಾದರೆ ಸಾಯುವೆವು, ಒಟ್ಟಿಗಿದ್ದರೆ ಬದುಕುವೆವು)

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಉತ್ತರಪ್ರದೇಶದ ಪ್ರಖರ ಮುಖ್ಯಮಂತ್ರಿ ಹಾಗೂ ಭಾಜಪದ ನಾಯಕ ಯೋಗಿ ಆದಿತ್ಯನಾಥರ ‘ಬಟೇಂಗೆ ತೋ ಕಟೇಂಗೆ’, ಈ ಹೇಳಿಕೆಯು ಮುಸಲ್ಮಾನ ಸಮಾಜದ ಅಂತರಂಗವನ್ನು ಸ್ಪಷ್ಟಪಡಿಸುವ ಹೇಳಿಕೆಯಾಗಿದೆ. ಅದನ್ನು ಕೂಡ ಅವರು ಕೇವಲ ೩ ಶಬ್ದಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಮುಸಲ್ಮಾನ ಸಮಾಜದ ಹಿಡಿತದಿಂದ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಿದ್ದರೆ ಮತ್ತು ತಮ್ಮ ಅಸ್ತಿತ್ವ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರವನ್ನು ಜೋಪಾನ ಮಾಡಲಿಕ್ಕಿದ್ದರೆ, ಹಿಂದೂಗಳು ಸಂಘಟಿತರಾಗದ ಹೊರತು ಬೇರೆ ಪರ್ಯಾಯವಿಲ್ಲ’, ಎನ್ನುವ ಮಾತನ್ನು ಯೋಗಿ ಆದಿತ್ಯನಾಥರು ಹೇಳಿದ್ದಾರೆ.

೧. ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ ಅಧ್ಯಕ್ಷೆ ಬೇಗಮ್‌ ಖಲಿದಾ ಝಿಯಾ ಇವರು ಹಿಂದೂ ಮತ್ತು ಬೌದ್ಧ ಧರ್ಮದವರಿಗೆ ನೀಡಿದ ಎಚ್ಚರಿಕೆ

ಮುಸಲ್ಮಾನ ಸಮಾಜ ತನ್ನ ಸಮಾಜದ ಹೊರತು ಬೇರೆ ಯಾವುದೇ ಸಮಾಜಕ್ಕೆ ಯಾವುದೇ ರೀತಿಯ ಸೌಲಭ್ಯವನ್ನು ಕೊಡುವುದಿಲ್ಲ. ಇತರರೊಂದಿಗೆ ಮನುಷ್ಯತ್ವದಿಂದ, ಮಾನವತೆಯಿಂದ ವರ್ತಿಸಲು ಅವರ ಧರ್ಮಗ್ರಂಥ ಅನುಮತಿ ನೀಡುವುದಿಲ್ಲ.

ಬೇಗಮ್‌ ಖಲಿದಾ ಝಿಯಾ

ಮುಸಲ್ಮಾನೇತರ ಸಮಾಜದೊಂದಿಗೆ ವೈರತ್ವವನ್ನು ಇಟ್ಟುಕೊಳ್ಳಬೇಕೆಂದು ಅವರ ಧರ್ಮಗ್ರಂಥ ಆಜ್ಞೆ ನೀಡುತ್ತದೆ. ಪ್ರಜಾಪ್ರಭುತ್ವ, ವಿಚಾರಸ್ವಾತಂತ್ರ್ಯ, ಆಚಾರಸ್ವಾತಂತ್ರ್ಯ ಈ ಸಭ್ಯ ಸಮಾಜದಲ್ಲಿನ ವ್ಯಕ್ತಿಸ್ವಾತಂತ್ರ್ಯಕ್ಕೆ ಇಸ್ಲಾಮೀ ರಾಜ್ಯದಲ್ಲಿ ಯಾವುದೇ ಸ್ಥಾನವಿಲ್ಲ. ಇದರ ಉತ್ತಮ ಉದಾಹರಣೆಯೆಂದರೆ, ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ಮತ್ತು ಬೌದ್ಧ ಧರ್ಮದವರ ಹತ್ಯೆಯ ಪ್ರಕರಣ. ಅದರ ವಿಷಯದಲ್ಲಿ ಬಾಂಗ್ಲಾದೇಶದಲ್ಲಿನ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ ಅಧ್ಯಕ್ಷೆ ಬೇಗಮ್‌ ಖಲೀದಾ ಝಿಯಾ ಇವರು ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುವ ಹಿಂದೂಗಳ ಮತ್ತು ಬೌದ್ಧರ ಹತ್ಯಾಕಾಂಡದ ವಿಷಯದಲ್ಲಿ ದುಃಖ ವ್ಯಕ್ತ ಪಡಿಸುತ್ತಾ ಮುಂದಿನಂತೆ ಬರೆದಿದ್ದಾರೆ…

‘I regrate the cotinuing massacre of Hindus and Buddhists in Bangaladesh, but Bangladesh is an Islamic Nation and not secular. Now the muslims are in majority here. Under the circumstances if Hindus and Buddhists want to live safely, they should either convert to Islam or go to India.’

ಅರ್ಥ : ಬಾಂಗ್ಲಾದೇಶದಲ್ಲಿ ನಿರಂತರ ನಡೆಯುವ ಹಿಂದೂ ಮತ್ತು ಬೌದ್ಧರ ಹತ್ಯಾಕಾಂಡದ ಬಗ್ಗೆ ನನಗೆ ದುಃಖವಾಗುತ್ತಿದೆ; ಆದರೆ ಬಾಂಗ್ಲಾದೇಶ ಒಂದು ಇಸ್ಲಾಮೀ ರಾಷ್ಟ್ರವಾಗಿದೆ. ಇದು ಜಾತ್ಯತೀತ ರಾಷ್ಟ್ರವಲ್ಲ. ಈಗ ಇಲ್ಲಿ ಮುಸಲ್ಮಾನ ಸಮಾಜ ಬಹುಸಂಖ್ಯಾತವಿದೆ. ಹೀಗಿರುವಾಗ ಹಿಂದೂ ಮತ್ತು ಬೌದ್ಧರಿಗೆ ಸುರಕ್ಷಿತವಾಗಿ ಜೀವನ ನಡೆಸಲಿಕ್ಕಿದ್ದರೆ, ಅವರು ಇಸ್ಲಾಮ್‌ ಪಂಥವನ್ನು ಸ್ವೀಕರಿಸಬೇಕು ಅಥವಾ ಭಾರತಕ್ಕೆ ಹೋಗಬೇಕು.)

ಬಾಂಗ್ಲಾದೇಶದಲ್ಲಿನ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ ಮಹಿಳಾ ಅಧ್ಯಕ್ಷೆಗೆ ಆಗುವ ದುಃಖ, ಇದು ಅತ್ಯಂತ ನಾಟಕೀಯವಾಗಿದೆ. ನಿಜ ಹೇಳಬೇಕೆಂದರೆ, ಅವರ ಈ ದುಃಖವೆಂದರೆ ಮೊಸಳೆ ಕಣ್ಣೀರಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ವ್ಯಕ್ತಪಡಿಸಿದ ವಿಚಾರವು, ಇಸ್ಲಾಮಿಗೆ ಪ್ರಜಾಪ್ರಭುತ್ವ ಹಾಗೂ ವ್ಯಕ್ತಿಸ್ವಾತಂತ್ರ್ಯ ಒಪ್ಪಿಗೆಯಿಲ್ಲವೆಂಬುದನ್ನು ತೋರಿಸುತ್ತದೆ. ‘ಮುಸಲ್ಮಾನ ಸಮಾಜವು ಇನ್ನಿತರ ಮಾನವ ಸಮಾಜವನ್ನು ಸುಖದಿಂದ ಜೀವಿಸಲು ಬಿಡದಿರುವ ಸಮಾಜವಾಗಿದೆ’, ಇದರ ಉತ್ತರವನ್ನು ಅವರು ಈ ಸಂದೇಶದ ಮೂಲಕ ಜಗತ್ತಿಗೆ ತೋರಿಸಿದ್ದಾರೆ.

೨. ಬ್ಯಾರಿಸ್ಟರ್‌ ಖಲಿದ ಉಮರ ಇವರು ಇಸ್ಲಾಮೀ ಆಡಳಿತದ ವಿಷಯದಲ್ಲಿ ಸ್ಪಷ್ಟಪಡಿಸಿದ ನಿಜ ಸ್ವರೂಪ !

ನಿಜ ಹೇಳಬೇಕೆಂದರೆ ಇಸ್ಲಾಮ್‌ಗೆ ಪ್ರಜಾಪ್ರಭುತ್ವ ಒಪ್ಪಿಗೆಯಿಲ್ಲ. ಜಗತ್ತಿನ ಯಾವುದೇ ಇಸ್ಲಾಮೀ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದು ನಮಗೆ ಕಂಡುಬರುವುದಿಲ್ಲ. ಕೆಲವು ವರ್ಷಗಳ ಹಿಂದೆ ಲಂಡನ್‌ ನಲ್ಲಿನ ಬ್ಯಾರಿಸ್ಟರ್‌ ಖಾಲೀದ ಉಮರ ಇವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಲೇಖನದಲ್ಲಿ ಅವರು ಮುಂದಿನಂತೆ ಬರೆದಿದ್ದಾರೆ…. ಜಗತ್ತಿನಲ್ಲಿ ೫೭ ಇಸ್ಲಾಮೀ ರಾಷ್ಟ್ರಗಳಿವೆ. ಅವುಗಳ ಪೈಕಿ ಒಂದೇ ಒಂದು ರಾಷ್ಟ್ರದಲ್ಲಿಯೂ ಜಾತ್ಯತೀತ ಪ್ರಜಾಪ್ರಭುತ್ವವಿಲ್ಲ. ಇಸ್ಲಾಮ್‌ನ ಇತಿಹಾಸವನ್ನು ಗಮನಿಸಿದರೆ, ಇಸ್ಲಾಮೀ ಆಡಳಿತದ ವಾರಸುದಾದರರು ವಿಶ್ವಾಸಘಾತಕ ಕೃತ್ಯ, ವಿಷ, ಖಡ್ಗಹತ್ಯೆ, ನೇಣು ಕಂಬಕ್ಕೇರಿಸುವುದು ಅಥವಾ ಅಧಿಕಾರ ಬದಲಾವಣೆಯಿಂದ ಅಧಿಕಾರಕ್ಕೆ ಬಂದಿದ್ದಾರೆ. ಆದ್ದರಿಂದ ಇಸ್ಲಾಂನ ಆಡಳಿತದಡಿಯಲ್ಲಿ ಯಾವ ಸಮಾಜ ಇದೆಯೋ, ಅದು ಸಾಮಾಜಿಕ ಹಾಗೂ ಬೌದ್ಧಿಕ ದೃಷ್ಟಿಕೋನದಿಂದ ಪ್ರಜಾಪ್ರಭುತ್ವಕ್ಕಾಗಿ ಯೋಗ್ಯ ಸಮಾಜವಲ್ಲ. ಬೆಹರೀನ್, ಕತಾರ, ಸೌದೀ ಅರೇಬಿಯಾ ಮತ್ತು ಇಂತಹ ಅನೇಕ ದೇಶಗಳಲ್ಲಿ ರಾಜಕೀಯ ಪಕ್ಷಗಳ ಮೇಲೆ ನಿರ್ಬಂಧವಿದೆ.’ ಇದೇ ಲೇಖನದಲ್ಲಿ ಬ್ಯಾರಿಸ್ಟರ್‌ ಖಾಲಿದ ಉಮರ ಹೇಳುತ್ತಾರೆ, ‘ಇಸ್ಲಾಮಿನ ಆಡಳಿತದಲ್ಲಿ ಅಲ್ಲಾನ ಹೆಸರಿನಲ್ಲಿ ಸರ್ವಾಧಿಕಾರಶಾಹಿ ಇರುತ್ತದೆ, ಅದರಲ್ಲಿ ಜನರ ಮೇಲೆ ಪ್ರಭಾವ ಇರುವವರಿಗೆ, ಅಂದರೆ ಕುರಾನ್‌ಗನುಸಾರ ರಾಜ್ಯ ಮಾಡುವ ಅಧಿಕಾರವಿರುತ್ತದೆ. ಇಂದು ನಾವು ಅದಕ್ಕೆ ‘ಮಾರ್ಶಲ್‌ ಲಾ’ (ಸೈನಿಕ ಕಾನೂನು) ಎನ್ನುತ್ತೇವೆ. ಅಲ್ಲಿ ಶಿರಗಣನೆಯಿಲ್ಲ, ಶಿರಚ್ಛೇದವಾಗುತ್ತದೆ.’

೩. ಬ್ಯಾರಿಸ್ಟರ್‌ ಅಸದುದ್ದೀನ ಓವೈಸಿ ಇವರ ಫುತ್ಕಾರ

‘ಎಮ್‌.ಐ.ಎಮ್‌.’ ಈ ರಾಜಕೀಯ ಪಕ್ಷದ ಅಧ್ಯಕ್ಷ ಸಂಸದ ಬ್ಯಾರಿಸ್ಟರ್‌ ಅಸದುದ್ದೀನ ಓವೈಸಿ ಇತ್ತೀಚೆಗಷ್ಟೆ ಏನು ಹೇಳಿದ್ದರೋ, ಅದನ್ನು ಇಲ್ಲಿ ನೆನಪಿಸುವ ಅಗತ್ಯವಿದೆ. ‘ಈ ದೇಶದಲ್ಲಿ ಪ್ರಧಾನಿಯಾಗಿ ಮೋದಿ ಅಥವಾ ಮುಖ್ಯಮಂತ್ರಿಯ ಯೋಗಿ ಶಾಶ್ವತರಲ್ಲ. ಅವರು ಈ ಹುದ್ದೆಯಿಂದ ಹೋದ ನಂತರ ನಾವು ಏನು ಮಾಡುತ್ತೇವೆ ನೋಡಿ.’ ಅವರ ಈ ಉದ್ಗಾರ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾದೇಶದ ಬೆಗಮ್‌ ಖಾಲಿದಾ ಝಿಯಾ ಇವರ ಬಾಂಗ್ಲಾದೇಶದ ಹಿಂದೂ ಮತ್ತು ಬೌದ್ಧರ ಹತ್ಯಾಕಾಂಡದ ವಿಷಯದ ಉದ್ಗಾರ ಇವೆರಡೂ ಹೊಂದಾಣಿಕೆಯಾಗುತ್ತವೆ.

೪. ಮುಸಲ್ಮಾನರ ದ್ವಿಮುಖ ನಿಲುವು

ಮುಮ್ತಾಜ ಅಹಮದ ಇವರ ‘ಫಂಡಾಮೆಂಟಲಿಸಮ್, ರಿವಿವಾಲಿಸ್ಟ್ಸ್‌ ಎಂಡ್‌ ವಾಯಲೆನ್ಸ್ ಇನ್‌ ಸೌಥ್‌ ಏಷ್ಯಾ’ (Fundamentalism, Revivalists & Violence In South Asia), ಈ ಹೆಸರಿನ ಒಂದು ಪುಸ್ತಕದಲ್ಲಿ ಮುಸಲ್ಮಾನರ ರಾಜಕಾರಣದ ದ್ವಿಮುಖ ನಿಲುವನ್ನು ವ್ಯಕ್ತಪಡಿಸುವ ಒಂದು ಪರಿಚ್ಛೇದವಿದೆ. ‘What is most interesting to note is that while the Jamaat in Pakistan denounces secularism as an evil force and the greatest threat to Islam. The Jamaat of India is equally vigorous in defending secularism as a blessing & as a gurantee for the safe future for Islam in India.’

(ಅರ್ಥ : ಗಮನಿಸಬೇಕಾದ ವಿಷಯವೆಂದರೆ, ಪಾಕಿಸ್ತಾನದ ಜಾಮಾತದ ಅಭಿಪ್ರಾಯಕ್ಕನುಸಾರ ಪಾಕಿಸ್ತಾನದಲ್ಲಿ ಸರ್ವಧರ್ಮ ಸಮಭಾವವೆಂದರೆ, ಸೈತಾನೀ ಶಕ್ತಿಯು ಪಾಕಿಸ್ತಾನದ ಮೇಲೆ ಹೇರಿದ ಹೆದರಿಕೆ ಆಗಿದೆ. ಹಿಂದೂಸ್ಥಾನದ ಜಾಮಾತ ಮಾತ್ರ ಸರ್ವಧರ್ಮಸಮಭಾವವನ್ನು ಎಲ್ಲ ರೀತಿಯಿಂದ ಪುರಸ್ಕರಿಸುವುದು ಕಾಣಿಸುತ್ತದೆ; ಏಕೆಂದರೆ ಹಿಂದುಸ್ಥಾನದಲ್ಲಿರುವ ಸರ್ವಧರ್ಮ ಸಮಭಾವ ಮುಸಲ್ಮಾನರಿಗೆ ವರದಾನವಾಗಿದ್ದು ಹಿಂದೂಸ್ಥಾನದಲ್ಲಿ ಭವಿಷ್ಯದಲ್ಲಿ ಇಸ್ಲಾಮ್‌ನ್ನು ಸುರಕ್ಷಿತವಾಗಿಡುವ ಭರವಸೆ ನೀಡುವುದಾಗಿದೆ. (ಆಧಾರ : ‘ಹಿಂದುತ್ವ ಆಣಿ ಇತರ ವಿಚಾರ ಧಾರಾ’)

ಇದನ್ನು ಗಮನಿಸಿದರೆ ಮುಸಲ್ಮಾನ ಸಮಾಜ ಪ್ರಜಾಪ್ರಭುತ್ವ ಮತ್ತು ಜಾತ್ಯತೀತವಾದವನ್ನು ತಿರಸ್ಕರಿಸುವ ಸಮಾಜವಾಗಿದೆ.

೫. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಎಚ್ಚರಿಕೆಯನ್ನು ಹಿಂದೂಗಳು ಗಮನಿಸುವುದರ ಹಿಂದಿನ ಮಹತ್ವದ ಉದ್ದೇಶ

ಶ್ರೀ. ದುರ್ಗೇಶ ಜಯವಂತ ಪರೂಳಕರ

ಇಸ್ಲಾಮೀ ಜಗತ್ತಿನತ್ತ ದೃಷ್ಟಿ ಹಾಯಿಸಿದರೆ ಈ ವಿಷಯ ನಮ್ಮ ಗಮನಕ್ಕೆ ಬರುತ್ತದೆ, ಹಾಗೆಯೇ ಯುರೋಪ್‌ ಖಂಡದಲ್ಲಿ ಮುಸಲ್ಮಾನ ಸಮಾಜ ಬಹುಸಂಖ್ಯಾತವಾದ ತಕ್ಷಣ ನಿರ್ಮಾಣವಾದ ಪರಿಸ್ಥಿತಿ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಇದರ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ‘ಬಟೇಂಗೆ ತೋ ಕಟೇಂಗೆ’, ಎಂಬ ಎಚ್ಚರಿಕೆ ನೀಡಿ ಹಿಂದೂಗಳು ಸಂಘಟಿತರಾಗಬೇಕೆಂದು ನೀಡಿದ ಕರೆಯಲ್ಲಿ ಇರುವ ಅವರ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರ ಈ ಎಚ್ಚರಿಕೆಯನ್ನು ದುರ್ಲಕ್ಷಿಸಿದರೆ, ನಾವು ಪುನಃ ಪಾರತಂತ್ರ್ಯಕ್ಕೆ ಹೋಗುವ ಕಾಲ ಬರುವುದು. ನಾವು ಅಂತಹ ಪರಿಸ್ಥಿತಿಯನ್ನು ಎದುರಿಸುವಂತಾಗಬಾರದೆಂದು ಮುಸಲ್ಮಾನರ ಮಾತನ್ನು ನಂಬಬಾರದು ಹಾಗೂ ಮುಸಲ್ಮಾನರನ್ನು ಓಲೈಸುವ ದೇಶದಲ್ಲಿನ ಹಿಂದೂ ರಾಜಕಾರಣಿಗಳಿಗೆ ಮತದಾನ ಮಾಡಬಾರದು. ಹಿಂದೂ ಸಮಾಜ ಸಂಪೂರ್ಣ ಒಗ್ಗಟ್ಟಾದರೆ ಮುಸಲ್ಮಾನರ ಈ ದೇಶವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡುವ ಕನಸಿಗೆ ತಣ್ಣೀರೆರಚಬಹುದು ಎಂಬುದರಲ್ಲಿ ಸಂಶಯವಿಲ್ಲ.

೬. ಹಿಂದೂ ಸಮಾಜ ಬೋಧ ಪಡೆಯುವ ಅವಶ್ಯಕತೆ !

ದೇಶದಲ್ಲಿನ ಹಿಂದೂ ಸಮಾಜ ಯೋಗಿ ಆದಿತ್ಯನಾಥರ ಎಚ್ಚರಿಕೆಯನ್ನು ಅರ್ಥ ಮಾಡಿಕೊಂಡು ಒಗ್ಗಟ್ಟಾಗುವುದು ಅತ್ಯಂತ ಆವಶ್ಯಕವಾಗಿದೆ. ಹಿಂದೂಗಳಿಗೆ ಈ ಕಾಲ ಅತ್ಯಂತ ಸತ್ತ್ವಪರೀಕ್ಷೆಯದ್ದಾಗಿದೆ. ಐಕ್ಯತೆ, ಒಗ್ಗಟ್ಟು ಮತ್ತು ಸಂಘಟನ ಶಕ್ತಿಯ ಬಲವು ಮುಸಲ್ಮಾನರ ಪಾಶವೀ ವೃತ್ತಿಯನ್ನು ಸೋಲಿಸಲು ಸಕ್ಷಮವಾಗಿದೆ. ಸಿಂಹಗಳ ಒಂದು ಹಿಂಡು (ಗುಂಪು) ಒಂದು ಎಮ್ಮೆಯ ಮೇಲೆ ಆಕ್ರಮಣ ಮಾಡಿತು. ಆ ಒಂದೇ ಎಮ್ಮೆ ಆ ಗುಂಪಿನೊಂದಿಗೆ ಹೋರಾಡುತ್ತಾ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು; ಆ ಎಮ್ಮೆ ಸಿಂಹಗಳ ಗುಂಪಿಗೆ ಶರಣಾಗಲಿಲ್ಲ. ಅದು ತನ್ನ ಸಂಘರ್ಷವನ್ನು ಮುಂದುವರಿಸಿತು. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಎಮ್ಮೆಗಳ ಒಂದು ದೊಡ್ಡ ಗುಂಪು ಬಂತು ಹಾಗೂ ಆ ಗುಂಪು ಸಿಂಹಗಳ ಗುಂಪಿನ ಮೇಲೆ ಆಕ್ರಮಣ ಮಾಡಿತು. ಅನಿರೀಕ್ಷಿತವಾಗಿ ಆಗಿರುವ ಈ ಆಕ್ರಮಣವನ್ನು ಸಿಂಹಗಳ ಗುಂಪು ನಿರೀಕ್ಷಿಸಿರಲಿಲ್ಲ. ಕೊನೆಗೆ ವನರಾಜನೆಂದು ಗುರುತಿಸಲ್ಪಡುವ ಸಿಂಹದ ಗುಂಪಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಪಲಾಯನಗೈಯಬೇಕಾಯಿತು. ಇದನ್ನು ತೋರಿಸುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ಕಂಡು ಬರುತ್ತಿದೆ. ಇದರಿಂದ ಹಿಂದೂಗಳು ಪಾಠ ಕಲಿಯಬೇಕು ಹಾಗೂ ಯೋಗಿ ಆದಿತ್ಯನಾಥರ ‘ಬಟೇಂಗೆ ತೋ ಕಟೇಂಗೆ’, ಈ ಎಚ್ಚರಿಕೆಯ ಗಾಂಭೀರ್ಯವನ್ನು ಗಮನಿಸಿ ಎಮ್ಮೆಗಳ ಗುಂಪನ್ನು ಅನುಸರಿಸಬೇಕು.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಹಾಗೂ ಲೇಖಕರು, ಡೊಂಬಿವಿಲಿ, (೨೮.೮.೨೦೨೪)