ಗೀರ ಸೋಮನಾಥ ಇಲ್ಲಿಯ ಮಸೀದಿ ನೆಲಸಮ ಮಾಡಿರುವ ಸರಕಾರದ ಕ್ರಮ ಯೋಗ್ಯ ! – ಗುಜರಾತ್ ಉಚ್ಚ ನ್ಯಾಯಾಲಯ

  • ಅಕ್ರಮ ಮಸೀದಿ, ಗೋರಿಗಳು ಮತ್ತು ಮುಸಲ್ಮಾನರ ಮನೆಗಳು ನೆಲೆಸಮ ಮಾಡಿದ ಪ್ರಕರಣ

  • ಕ್ರಮ ಕೈಗೊಳ್ಳುವ ಮೊದಲಿನ ಸ್ಥಿತಿ ಹಿಂದಿನಂತೆ ಮಾಡಲು ವಕ್ಫ್ ಸಂಘಟನೆಯಿಂದ ಅರ್ಜಿ ದಾಖಲಿಸಿ ಆಗ್ರಹಿಸಲಾಗಿತ್ತು !

ಕರ್ಣಾವತಿ (ಗುಜರಾತ್) – ರಾಜ್ಯದಲ್ಲಿನ ಗೀರ ಸೋಮನಾಥದಲ್ಲಿ ಸಪ್ಟೆಂಬರ್ ೨೮ ರಂದು ಒಂದು ಸ್ಥಳೀಯ ಆಡಳಿತದಿಂದ ಸರಕಾರಿ ಜಮೀನನಲ್ಲಿನ ಮಸೀದಿ, ದರ್ಗಾ, ಗೋರಿ ಮುಂತಾದ ಅನೇಕ ಅಕ್ರಮ ಕಟ್ಟಡಗಳನ್ನು ನೆಲೆಸಮ ಮಾಡಿತು. ದೇಶದ ಮಟ್ಟದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧದಲ್ಲಿನ ಇದು ಎಲ್ಲಕ್ಕಿಂತ ದೊಡ್ಡ ಕ್ರಮ ಎಂದು ಹೇಳಲಾಗುತ್ತಿದೆ. ಈ ಕ್ರಮದ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ನೆಲೆಸಮ ಮಾಡಿರುವ ಕಟ್ಟಡಗಳನ್ನು ಹಿಂದಿನಂತೆ ಮಾಡಲು ಆಗ್ರಹಿಸಲಾಗಿತ್ತು. ಅದಕ್ಕೆ ಅಕ್ಟೋಬರ್ ೩ ರಂದು ಉಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿ ಯಥಾ ಸ್ಥಿತಿ ಮಾಡಲು ನಿರಾಕರಿಸಿತು.

೧. ‘ಔಲಿಯಾ-ಏ-ದೀನ ಕಮಿಟಿ’ ಈ ವಕ್ಫ್ ಸಂಘಟನೆಯಿಂದ ಅರ್ಜಿ ದಾಖಲಿಸಲಾಗಿತ್ತು.

೨. ನ್ಯಾಯಾಲಯವು ರಾಜ್ಯ ಸರಕಾರದ ಕ್ರಮ ಯೋಗ್ಯವಾಗಿದೆ ಎಂದು ಅದಕ್ಕೆ ನೋಟಿಸ್ ಜಾರಿಗೊಳಿಸಿ, ಕಾರ್ಯಾಚರಣೆಯ ಸಂದರ್ಭದಲ್ಲಿನ ಮಾಹಿತಿ ಪೂರೈಸಿ. ಹಾಗೂ ಅರ್ಜಿದಾರ ಸಂಘಟನೆಗಳಿಗೂ ಕೂಡ ಮಾಹಿತಿ ನೀಡುಲು ನ್ಯಾಯಾಲಯ ಆದೇಶ ನೀಡಿದೆ.

೩. ನ್ಯಾಯಮೂರ್ತಿ ಸಂಗೀತ ಕೆ. ವಿನೇಶ ಇವರ ಏಕ ಸದಸ್ಯ ಖಂಡಪೀಠದ ಮುಂದೆ ಇದು ಕೂಡ, ಕಾನೂನು ದೃಷ್ಟಿಯಿಂದ ಈ ರೀತಿಯ ಕಾರ್ಯಾಚರಣೆ ನಡೆಸಬಾರದು, ಆ ರೀತಿಯ ಯಾವುದೇ ತಡೆಯಾಜ್ಞೆ ನ್ಯಾಯಾಲಯವಾಗಲಿ ಅಥವಾ ಸರಕಾರಿ ಅಧಿಕಾರಿಗಳಾಗಲಿ ನೀಡಿರಲಿಲ್ಲ, ಎಂಬುದು ಸ್ಪಷ್ಟ ಪಡಿಸಿದೆ. ಆದ್ದರಿಂದ ಸರಕಾರ ನಡೆಸಿರುವ ಕಾರ್ಯಾಚರಣೆ ಕಾನೂನ ಬಾಹಿರವಾಗಲ್ಲ ಎಂದು ಹೇಳಿದೆ.

ಏನು ಈ ಪ್ರಕರಣ ?

ಸಪ್ಟೆಂಬರ್ ೨೭ ರಂದು ೧೦೨ ಎಕರೆ ಪ್ರದೇಶದಲ್ಲಿನ ೫೦ ಕ್ಕಿಂತಲು ಹೆಚ್ಚಿನ ಅಕ್ರಮ ಮಸೀದಿ, ದರ್ಗಾಗಳು, ಗೋರಿಗಳು, ಮುಜಾವರ್ ಇವರ ಮನೆಗಳು ಇವುಗಳ ಮೇಲೆ ೩೫ ಕ್ಕಿಂತಲೂ ಹೆಚ್ಚಿನ ಬುಲ್ಡೋಜರ್ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಉಜ್ಜೈನಿ ಇಲ್ಲಿಯ ‘ಮಹಾಕಾಲ ಕಾರಿಡಾರ್’ ನಂತೆ ಸೋಮನಾಥ ಇಲ್ಲಿ ಕೂಡ ಕಾರಿಡಾರ್ ಸಜ್ಜುಗೊಳಿಸಲಾಗುವುದು. ಈ ಅಕ್ರಮ ಕಾಮಗಾರಿ ಸರಕಾರ ನೋಟಿಸ್ ವಿಧಿಸಿದರು ಕೂಡ ಅದನ್ನು ತೆರವುಗೊಳಿಸದೆ ಇರುವುದರಿಂದ ಕೊನೆಗೆ ಸರಕಾರವೇ ಸ್ವತಃ ಈ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ಸಮಯದಲ್ಲಿ ಆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಸೇರಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿ ಇರಿಸುವುದಕ್ಕಾಗಿ ೧ ಸಾವಿರದ ೪೦೦ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ವಿವಿಧ ರಾಜ್ಯಗಳಲ್ಲಿನ ಸರಕಾರ ಮುಸಲ್ಮಾನರಿಗೆ ಹೆದರದೆ ಯೋಗ್ಯ ಕ್ರಮ ಕೈಗೊಳ್ಳುತ್ತಿರುವುದರಿಂದ ಈಗ ಅದರ ಸಂಘಟನೆಗಳು ರೋಷದಿಂದ ಎದ್ದರೆ ಆಶ್ಚರ್ಯ ಏನಿಲ್ಲ ! ಇಂತಹ ಅರ್ಜಿಯ ಮೂಲಕ ಮತಾಂಧ ಮುಸಲ್ಮಾನರು ನ್ಯಾಯಾಲಯದಲ್ಲಿ ಗೊಂದಲ ನಿರ್ಮಾಣ ಮಾಡುವ ದೂರ್ತ ಪ್ರಯತ್ನವಾಗಿದೆ. ಈಗ ಅದಕ್ಕೆ ‘ಅರ್ಜಿ ಜಿಹಾದ್’ ಅಂದರೆ ತಪ್ಪಾಗಲಾರದು !