ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ

ನವದೆಹಲಿ – ದೆಹಲಿ ಪೊಲೀಸರ ಅಪರಾಧ ವಿಭಾಗವು ದೆಹಲಿಯ ಮೆಹರೌಲಿಯಲ್ಲಿ 560 ಕೆ.ಜಿ. ಕೊಕೇನ್ ಅನ್ನು ವಶಪಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 2 ಸಾವಿರ ಕೋಟಿ ರೂಪಾಯಿಯಷ್ಟು ಇದೆ. ಈ ಪ್ರಕರಣದಲ್ಲಿ ಪೋಲೀಸರು ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಆರೋಪಿಗಳಾದ ಹಾಶಿಮಿ ಮೊಹಮ್ಮದ್ ವಾರಿಸ್ ಮತ್ತು ಅಬ್ದುಲ್ ನಾಯಬ್ ಅವರಿಂದ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೆಹಲಿಯಲ್ಲಿ ವಶಕ್ಕೆ ಪಡೆದ ಎಲ್ಲಾಕ್ಕಿಂತ ಅತಿ ದೊಡ್ಡ ಘಟನೆ ಎಂದು ಪರಿಗಣಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬನ ಹೆಸರು ತುಷಾರ್ ಗೋಯಲ್ ಎಂದು ಇದೆ, ಅವನು ದೆಹಲಿಯಲ್ಲಿನ ವಸಂತ ವಿಹಾರದ ನಿವಾಸಿಯಾಗಿದ್ದಾನೆ. ಅವನ ಜೊತೆಯಲ್ಲಿ ಅವನ ಇಬ್ಬರು ಸ್ನೇಹಿತರಾದ ಹಿಮಾಂಶು ಮತ್ತು ಔರಂಗಜೇಬ್ ಇವರೂ ಇದ್ದರು. ಮೂವರು ಆರೋಪಿಗಳನ್ನು ಮುಂಬಯಿನ ಕುರ್ಲಾದಿಂದ ಭರತ್ ಜೈನ್ ಇವನ ಜೊತೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಮೊದ ಸಿಂಹ್ ಕುಶವಾಹ ಇವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !