ಮಣಿಪುರದಲ್ಲಿ, ಕೌತ್ರುಕ್ ಗ್ರಾಮದಲ್ಲಿ ಹಿಂದೂ ಮೈತೆಯಿ ಸಮುದಾಯದ ಮೇಲೆ ಅತ್ಯಾಧುನಿಕ ಡ್ರೋನ್‌ಗಳಿಂದ ದಾಳಿ ಮಾಡಿದ್ದಾರೆ. ಇದರಲ್ಲಿ ಹಿಂದೂ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಮಗಳು ಗಾಯಗೊಂಡರು. ಇನ್ನೊಂದೆಡೆ ಮಂಟಪದಲ್ಲಿ ಪೂಜೆ ಸಲ್ಲಿಸುತ್ತಿದ್ದ ಹಿಂದೂ ಮೈತೇಯಿ ಸಮುದಾಯದ ವ್ಯಕ್ತಿಯೊಬ್ಬರನ್ನು ಕ್ರೈಸ್ತ ಕುಕಿಯವರೇ ಹತ್ಯೆ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಕಿ ಮತ್ತು ಮೈತೆಯಿ ನಡುವೆ ಭಯಂಕರ ರೀತಿಯಲ್ಲಿ ಸಂಘರ್ಷ ನಡೆಯು ತ್ತಲೇ ಇದೆ. ಈ ಹಿಂಸಾಚಾರವು ವಾದ, ಜಗಳ, ಸಣ್ಣ ಅಥವಾ ದೊಡ್ಡ ಚಕಮಕಿಗೆ ಸೀಮಿತವಾಗಿಲ್ಲ. ಇದೀಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಜೀವವನ್ನು ತೆಗೆದುಕೊಳ್ಳುತ್ತಿದೆ. ಜಿಹಾದಿ ಭಯೋತ್ಪಾದನೆಯ ಸ್ವರೂಪ ಅನೇಕ ಪ್ರಕಾರದಲ್ಲಿದ್ದರೂ, ಮುಖ್ಯವಾಗಿ ಅತ್ಯಾಧುನಿಕ ರೈಫಲ್‌ಗಳು, ಬಾಂಬ್‌ಗಳು, ಗ್ರೆನೇಡ್‌ಗಳ ಮೂಲಕ ಭಾರತೀಯರು ಮತ್ತು ಭಾರತೀಯ ಸೇನೆಯ ವಿರುದ್ಧ ಹೋರಾಡುತ್ತಿದ್ದಾರೆ. ಇದು ಭಾರತದ ಗಡಿಪ್ರದೇಶಗಳಲ್ಲಿ ಹೋರಾಡುತ್ತಿರುವುದರಿಂದ, ಅಲ್ಲಿ ಗಡಿ ಭದ್ರತಾ ಪಡೆ ಮತ್ತು ಭಾರತೀಯ ಸೇನೆಯ ಸೈನಿಕರು ಇರುತ್ತಾರೆ. ಎರಡೂ ಕಡೆಯವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಇದನ್ನು ಯುದ್ಧವೆಂದು ಹೋರಾಡುತ್ತಿದ್ದಾರೆ. ಇದರಲ್ಲಿ ಕೆಲವೊಮ್ಮೆ ಭಯೋತ್ಪಾದಕರು ಸಾಯುತ್ತಾರೆ, ಕೆಲವೊಮ್ಮೆ ಸೈನಿಕರು ವೀರ ಮರಣವನ್ನು ಹೊಂದುತ್ತಾರೆ. ಆದರೆ ಯಾವಾಗ ಒಂದು ಕಡೆ ಮಾತ್ರ ಅತ್ಯಾಧುನಿಕ ಆಯುಧಗಳಿದ್ದು ಮತ್ತು ಇನ್ನೊಂದು ಕಡೆ ಯಾವುದೇ ಶಸ್ತ್ರಾಸ್ತ್ರಗಳೇ ಇಲ್ಲದಿದ್ದಾಗ ಪರಿಸ್ಥಿತಿ ಏನಾಗುತ್ತದೆ ? ಆಗ ಶಸ್ತ್ರಾಸ್ತ್ರಗಳಿಲ್ಲದವರೇ ನಿರಂತರವಾಗಿ ಕೊಲ್ಲಲ್ಪಡುತ್ತಾರೆ ಮತ್ತು ಮಣಿಪುರದಲ್ಲಿ ಈಗ ಅದೇ ನಡೆಯುತ್ತಿರುವುದು ಕಾಣಿಸುತ್ತಿದೆ.
ಮೈತೆಯಿಗಳಲ್ಲಿ ಭಯದ ವಾತಾವರಣ.
ಮಣಿಪುರದಲ್ಲಿ ಕುಕಿ ಮತ್ತು ಮೈತೆಯಿಯ ನಡುವೆ ಸಂಘರ್ಷ ಆರಂಭವಾದಾಗ ಕುಕಿಗಳ ಕೈಯಲ್ಲಿ ಕಬ್ಬಿಣದ ರಾಡು, ಹಾಕಿ ಸ್ಟಿಕ್, ದೊಡ್ಡ ದೊಣ್ಣೆ ಮುಂತಾದವು ಕಾಣಿಸಿಕೊಳ್ಳುತ್ತಿದ್ದವು, ಇನ್ನೂ ಕೆಲವರ ಕೈಯಲ್ಲಿ ಬಂದೂಕು, ರೈಫಲ್‌ಗಳೂ ಕಾಣಿಸುತ್ತಿದ್ದವು. ಇದರಲ್ಲಿ ಸಾಮಾನ್ಯ ಕುಕಿ ಮತ್ತು ಭಯೋತ್ಪಾದಕ ಕುಕಿ ಯಾರು ? ಇದು ಕೂಡ ಗಮನಕ್ಕೆ ಬರುವುದಿಲ್ಲ, ಅಷ್ಟೊಂದು ಹೋಲಿಕೆ ಇರುತ್ತದೆ. ಅವರು ಹಿಂದೂ ಮೈತೇಯಿ ಗುಂಪಿನ ಮೇಲೆ ದಾಳಿ ಮಾಡಿದಾಗ, ಮೈತೆಯಿಗಳಿಗೆ ಪ್ರತಿರೋಧಕ್ಕೆ ಆಸ್ಪದವೇ ಸಿಗುತ್ತಿರಲಿಲ್ಲ; ಆದರೆ ಮೈತೆಯಿ ಗುಂಪು ಏನಾದರೂ ಮಾಡಿ ಸೇಡು ತೀರಿಸಿಕೊಳ್ಳುತ್ತಿತ್ತು ಮತ್ತು ದಾಳಿ ನಡೆಸುತ್ತಿತ್ತು. ಆದರೆ ಈಗ ಮಾತ್ರ ಕಷ್ಟವಾಗಿದೆ; ಏಕೆಂದರೆ ಅವರು ಇದೇ ಮೊದಲ ಬಾರಿ ಡ್ರೋನ್‌ಗಳಿಂದ ದಾಳಿ ನಡೆಸಿದ್ದಾರೆ. ಡ್ರೋನ್‌ಗಳ ಮೂಲಕ ಬಾಂಬ್‌ಗಳನ್ನು ಎಸೆಯುವುದು, ಇದು ದೊಡ್ಡ ಭಯೋತ್ಪಾದಕ ಸಂಚಿನ ಭಾಗವಾಗಿದೆ. ಇದರಿಂದ ಸಹಜವಾಗಿಯೇ ಕೌತ್ರುಕ್ ಗ್ರಾಮದ ಮೈತೆಯಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಮತ್ತು ಸಮೀಪದ ಗ್ರಾಮಗಳ ಗ್ರಾಮಸ್ಥರು ಕುಕಿ ಭಯೋತ್ಪಾದಕರ ದಾಳಿಯಿಂದಾಗಿ ಬಹಳ ಸಮಯದಿಂದ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಸಾಮಾನ್ಯ ಜೀವನವನ್ನು ನಡೆಸಲು ಪ್ರಾರಂಭಿಸುವಷ್ಟರಲ್ಲಿಯೇ ಮತ್ತೆ ಹೊಸ ದಾಳಿಯಾಗಿದೆ. ಇದರಿಂದ ಮತ್ತೆ ೧೫೦ ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳೀಯ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಸ್ವತಂತ್ರ ಕುಕೀ ಪ್ರದೇಶಕ್ಕೆ ಬೇಡಿಕೆ
ಕ್ರೈಸ್ತ ಕುಕಿಗಳು ಸ್ವತಂತ್ರ ಕುಕಿ ರಾಜ್ಯಕ್ಕಾಗಿ ಬೇಡಿಕೆಯನ್ನಿಟ್ಟಿದ್ದಾರೆ. ಈ ಪ್ರದೇಶವು ಅವರಿಗೆ ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್ ರಾಜ್ಯಗಳಿಂದ ಬೇಕಾಗಿದೆ. ಕುಕಿ ಮತ್ತು ಮೈತೇಯಿ ಸಮುದಾಯಗಳು ಶಾಂತಿಯಿಂದ ಬಾಳುವಂತಾಗಬೇಕು, ಹಿಂಸಾಚಾರ ಕಡಿಮೆ ಆಗಬೇಕು ಎಂಬ ಕಾರಣಗಳನ್ನು ಮುಂದಿಟ್ಟು ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲಾಗುತ್ತಿದೆ. ಮತಾಂತರದಿಂದ ರಾಷ್ಟ್ರಾಂತರ ವಾಗುತ್ತದೆ ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂ ಮೈತೆಯಿ ಸಮುದಾಯವು ಕಣಿವೆಗಳಲ್ಲಿ, ಅಂದರೆ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಮತ್ತು ಕುಕಿಗಳು, ನಾಗಾಗಳು ಎತ್ತರದ ಪರ್ವತಗಳಲ್ಲಿ ವಾಸಿಸುವರಾಗಿದ್ದಾರೆ. ಮೂಲದಲ್ಲಿ, ಹಿಂದೂ ಮೈತೆಯಿಗಳನ್ನೂ ಅಲೆಮಾರಿ ಪಂಗಡಕ್ಕೆ ಸಮಾವೇಶಗೊಳಿಸುವ ಮೂಲಕ ಆ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಯಿತು ಮತ್ತು ಹಿಂಸಾಚಾರ ಭುಗಿಲೆದ್ದಿತು. ಇದನ್ನು ಕುಕಿಗಳು ಬಲವಾಗಿ ವಿರೋಧಿಸಿದರು ಮತ್ತು ಈಗಲೂ ವಿರೋಧಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರತಿದಿನ ಎರಡೂ ಕಡೆಯವರು ಕೊಲ್ಲಲ್ಪಡುತ್ತಿದ್ದರೂ, ಕುಕಿಗಳ ಆಕ್ರಮಣಕಾರಿ ಬಣಗಳು ಹಿಂದೂಗಳನ್ನು ನಾಶಗೊಳಿಸುವುದರ ಹಿಂದಿವೆ. ಕುಕಿ ಮತ್ತು ನಾಗಾ ಇವರು ಹೋರಾಟಗಾರರು ಮತ್ತು ಅಲೆಮಾರಿ ಪಂಗಡದ ಜನಾಂಗದವರಾಗಿದ್ದಾರೆ. ಕುಕಿಗಳ ವಾಸ್ತವ್ಯ ನಾಗಾಲ್ಯಾಂಡ್, ಮೇಘಾಲಯ, ಆಸ್ಸಾಂ ಮತ್ತು ನೆರೆಯ ಮ್ಯಾನ್ಮಾರ್‌ನಲ್ಲಿದೆ. ಇವರು ಅಲೆಮಾರಿ ಪಂಗಡದ ಜನಾಂಗದವರಾಗಿರುವುದರಿಂದ, ಅವರು ಅನೇಕ ದಶಕಗಳಿಂದ ನಿರಂತರವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿರುತ್ತಾರೆ. ನಾಗಾ ಬುಡಕಟ್ಟಿನವರೂ ಹೀಗೆಯೇ ಇರುವುದರಿಂದ, ಎರಡು ಗುಂಪುಗಳ ನಡುವೆ ಸ್ಥಾನ, ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಘರ್ಷಣೆಗಳು ನಡೆದಿದೆ. ಎರಡೂ ಕಡೆಯವರ ಹೋರಾಟಗಾರರ ಗುಂಪು ತಯಾರಿದೆ. ವಿಶೇಷವಾಗಿ ಕುಕಿಗಳಿಗೆ ಮ್ಯಾನ್ಮಾರ್‌ನಿಂದ ಸಹಾಯ ಸಿಗುತ್ತದೆ. ಈಗ ಭಾರತವನ್ನು ಅಶಾಂತವಾಗಿಡಲು ಅವರ ಕೆಲವು ಗುಂಪುಗಳಿಗೆ ಚೀನಾದ ಸಹಾಯವೂ ಸಿಗುತ್ತದೆ. ಪರಿಣಾಮವಾಗಿ, ಅವರು ಶಸ್ತ್ರಾಸ್ತ್ರಗಳಿಂದ ಸುಸಜ್ಜಿತರಾಗಿದ್ದಾರೆ. ಅವರಲ್ಲಿ ಹೋರಾಟ ನಡೆಸುವ ಅನೇಕ ಗುಂಪುಗಳು ಕಾರ್ಯ ನಿರತ ವಾಗಿವೆ ಮತ್ತು ಅವರಲ್ಲಿ ಕೆಲವು ಗುಂಪುಗಳೊಂದಿಗೆ ಕೇಂದ್ರ ಸರಕಾರ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದೆ. ಈಗ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷದಲ್ಲಿ ಈ ಸಶಸ್ತ್ರ ಗುಂಪುಗಳು, ಅಂದರೆ ಕುಕಿ ಬುಡಕಟ್ಟಿನ ಸೈನಿಕರು ಕಾರ್ಯ ನಿರತರಾಗಿರುವುದರಿಂದ ಹಿಂಸಾಚಾರ ಹೆಚ್ಚುತ್ತಿದೆ ಎಂದು ಕೇಂದ್ರ ಸರಕಾರದ ಊಹೆಯಾಗಿದೆ. ಈ ಒಪ್ಪಂದಗಳನ್ನು ಕುಕಿ ಗುಂಪು ಮುರಿಯುತ್ತಿದೆ. ಈ ಒಪ್ಪಂದಗಳ ಪ್ರಕಾರ, ಕುಕಿಗಳ ಸಶಸ್ತ್ರ ಗುಂಪುಗಳು ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ; ಆದರೆ ಹಾಗೆ ಆಗುತ್ತಿಲ್ಲ. ಕೇವಲ ಶೇ. ೧-೨ ರಷ್ಟಿದ್ದ ಕ್ರೈಸ್ತ ಕುಕಿಗಳ ಜನಸಂಖ್ಯೆ ಈಗ ಮಣಿಪುರದಲ್ಲಿ ಶೇ. ೨೬ ಕ್ಕೆ ಏರಿಕೆಯಾಗಿದ್ದು, ಮೈತೇಯಿ ಜನಸಂಖ್ಯೆ ಶೇ. ೫೫ ರಿಂದ ಶೇ. ೪೯ ಕ್ಕೆ ಕುಸಿದಿದೆ. ಅಂದರೆ ಕುಕಿ ಸಮುದಾಯದವರು ವಾಸಿಸುವ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಮ್ಯಾನ್ಮಾರ್‌ನ ಗಡಿ ಪ್ರದೇಶಗಳಿಗೆ ಕುಕಿಗಳಿಗೆ ಸುಲಭವಾಗಿ ಹೋಗಿ ಬರಲು ಸಾಧ್ಯವಾಗುತ್ತಿದೆ. ಭಾರತೀಯ ಸೇನೆ ಮತ್ತು ಪೊಲೀಸರಿಗೂ ಇದನ್ನು ನಿಯಂತ್ರಿಸಲು ಕಷ್ಟವಾಗಿದೆ. ಇದಕ್ಕೆ ಮೈತೆಯಿ ಸಮುದಾಯದಿಂದ ಆಕ್ಷೇಪವಿದೆ. ಅವರ ಜನಸಂಖ್ಯೆಯು ಕ್ಷೀಣಿಸುತ್ತಿದೆ ಮತ್ತು ಕುಕಿಗಳ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಕುಕಿ ಭಯೋತ್ಪಾದಕರು ತಮ್ಮ ಭುಜದ ಮೇಲೆ ಸಾಗಿಸಬಹುದಾದ ಬಾಂಬ್ ಎಸೆಯುವ ಸಣ್ಣ ತೋಫುಗಳನ್ನು ಮತ್ತು ಎಕೆ-೪೭ ರೈಫಲ್‌ಗಳನ್ನು ಹಿಡಿದುಕೊಂಡು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಾ ‘ನಾವು ಮೈತೆಯಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಹೇಳುತ್ತಿರುವ ಒಂದು ವೀಡಿಯೊ ಪ್ರಸಾರ ಆಗಿದೆ. ಮಣಿಪುರದ ಮುಖ್ಯಮಂತ್ರಿ ಮತ್ತು ಭಾಜಪ ಬಿರೇನಸಿಂಗ್ ಸ್ವತಃ ಮೈತೆಯಿ ಸಮುದಾಯಕ್ಕೆ ಸೇರಿದವರು. ಹಾಗಾಗಿ ಅವರು ಪೊಲೀಸರಿಂದ ಕುಕಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಕುಕಿ ಗುಂಪು ಆರೋಪಿಸಿದೆ. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತಹ ನಿರರ್ಥಕ ಮಾತನಾಡುವ ಮತ್ತು ಬೇಜವಾಬ್ದಾರಿತನದಿಂದ ವರ್ತಿಸುವ ನಾಯಕರು ಈ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಾರೆ. ಈ ಹಿಂದೆ ಇಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚು ಕಾಲ ಅಧಿಕಾರದಲ್ಲಿತ್ತು. ಮಣಿಪುರದ ಪರಿಸ್ಥಿತಿ ಅರಿತುಕೊಳ್ಳದೇ ಭಾಜಪವು ದ್ವೇಷ ಹರಡಿರುವುದರಿಂದ ಅಂತರ್ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ, ಈ ಸಂಘರ್ಷವನ್ನು ಕಡಿಮೆ ಮಾಡಲು ಅವರು ಏಕೆ ಪ್ರಯತ್ನಿಸಲಿಲ್ಲ ? ಕುಕಿಗಳಿಗೆ ಪ್ರತ್ಯೇಕ ರಾಜ್ಯ ನೀಡಿದರೆ ಇತರ ಬುಡಕಟ್ಟು ಪಂಗಡದವರೂ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವರು ಹಾಗಾಗಿ ಕೇಂದ್ರ ಸರಕಾರವು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಮೈತೆಯಿ ಹಿಂದೂಗಳನ್ನು ರಕ್ಷಿಸಬೇಕು.