ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಖಂಡ ಈ ರಾಜ್ಯಗಳಲ್ಲಿ ಲವ್ ಜಿಹಾದ್‌ನ ಬೇರೆ ಬೇರೆ ೩ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳಲ್ಲಿ ಉತ್ತರಪ್ರದೇಶದಲ್ಲಿನ ಆರ್ಷದ, ಮಧ್ಯಪ್ರದೇಶದಲ್ಲಿನ ಶಾದಾಬ ಮತ್ತು ಉತ್ತರಖಂಡದಲ್ಲಿನ ಶಹಜಾದ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಉತ್ತರ ಪ್ರದೇಶದಲ್ಲಿನ ಲಕ್ಷ್ಮಣಪುರಿ ಇಲ್ಲಿಯ ಸಂತ್ರಸ್ತೆಗೆ ಗೋಮಾಂಸ ತಿನಿಸುವ ಪ್ರಯತ್ನ ಮಾಡಿದರೇ ಮಧ್ಯಪ್ರದೇಶದಲ್ಲಿನ ಹರದಾದ ಆದಿವಾಸಿ ಹುಡುಗಿಯನ್ನು ಇಸ್ಲಾಂಗೆ ಮತಾಂತರ ಮಾಡುವ ಷಡ್ಯಂತ್ರ ರೂಪಿಸಲಾಗಿತ್ತು. ಉತ್ತರಾಖಂಡದಲ್ಲಿನ ಡೆಹ್ರಾಡೂನ್ ಎಲ್ಲಿಯಾ ಓರ್ವ ವಿಚ್ಛೇದಿತ ಮಹಿಳೆಯ ತಾಯಿಯೂ ಆಕೆಯ ಹುಡುಗಿಯನ್ನು ರಕ್ಷಿಸಲು ಕರೆ ನೀಡಿದ್ದಾಳೆ.
ಉತ್ತರಪ್ರದೇಶ : ಅರ್ಷದ್ ಹಿಂದೂ ಹುಡುಗಿಗೆ ಗೋಮಾಂಸ ತಿನಲ್ಲು ಅನಿವಾರ್ಯಗೊಳಿಸಿದ
ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ಸಪ್ಟೆಂಬರ್ ೨೭ ರಂದು ಓರ್ವ ಹಿಂದೂ ಮಹಿಳೆಯು ಇಲ್ಲಿಯ ಮಡೆಗಂಜ ಪೊಲೀಸ ಠಾಣೆಗೆ ದೂರು ನೀಡಿದಳು. ಸಂತ್ರಸ್ತೆಯು ದೂರಿನಲ್ಲಿ, ಒಂದುವರೆ ವರ್ಷದ ಹಿಂದೆ ಆಕೆಯ ಸ್ನೇಹಿತನ ಹುಟ್ಟು ಹಬ್ಬದ ಔತಣದ ಕಾರ್ಯಕ್ರಮದಲ್ಲಿ ಅರ್ಷದ್ ಎಂಬ ಮುಸಲ್ಮಾನನ ಪರಿಚಯವಾಯಿತು. ನಂತರ ಪ್ರೀತಿಗೆ ತಿರುಗಿತು. ಸಂತ್ರಸ್ತೆಯ ಹೇಳಿಕೆಯ ಪ್ರಕಾರ ಅರ್ಷದ್ ಆಕೆಯ ಇಚ್ಛೆಯ ವಿರುದ್ಧ ದೈಹಿಕಕ ಸಂಬಂಧ ಬೆಳೆಸಲು ಆರಂಭಿಸಿದನು. ಅರ್ಷದ್ ಅನೇಕ ಬಾರಿ ಆಕೆಯ ಜೊತೆಗೆ ದೈಹಿಕ ಸಂಬಂಧ ಇರಿಸಿರುವುದರಿಂದ ಆಕೆ ಎರಡು ಬಾರಿ ಗರ್ಭಿಣಿಯಾದಳು. ಅರ್ಷದ್ ಎರಡು ಬಾರಿ ಆಕೆಯ ಗರ್ಭಪಾತ ಮಾಡಿಸಿದನು. ಸಂತ್ರಸ್ತೆಯು ಅರ್ಷದ್ ನ ಮೇಲೆ ವಿವಾಹಕ್ಕಾಗಿ ಒತ್ತಡ ಹೇರಿದ ನಂತರ ಅವನು ಆಕೆಗೆ ಮೊದಲು ಇಸ್ಲಾಂ ಸ್ವೀಕರಿಸುವ ಶರತ್ತು ವಿಧಿಸಿದನು. ಹಾಗೂ ಗೋಮಾಂಸ ತಿನ್ನಲು ಒತ್ತಡ ಹೇರಿದನು. ಸಂತ್ರಸ್ತೆಯು ಅರ್ಷದ್ ನ ತಂದೆಗೆ ಅವನ ಹುಡುಗನ ಕೃತ್ಯದ ವಿಷಯವಾಗಿ ಹೇಳಿದಾಗ ಅವರು ಸಹಾಯ ಮಾಡುವ ಬದಲು ಸುಮ್ಮನಿರಲು ಹೇಳಿದರು. ಸುಮ್ಮನಿರದಿದ್ದರೆ ಆಕೆಗೆ ಕೊಲ್ಲುವ ಬೆದರಿಕೆ ಕೂಡ ನೀಡಿದರು. ಅರ್ಷದ್ ನ ಓರ್ವ ಸಂಬಂಧಿಕರು ರಶೀದ್ ಇವನು ಕೂಡ ಸಂತ್ರಸ್ತೆಗೆ ಬೆದರಿಸಿದನು. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಅರ್ಷದ್ ನನ್ನು ಬಂಧಿಸಿದ್ದಾರೆ. ಹಿಂದೂ ಮಹಾಸಭೆಯಿಂದ ಅರ್ಷದ್ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.
ಮಧ್ಯಪ್ರದೇಶ : ೧೯ ವರ್ಷದ ಬುಡಕಟ್ಟು ಜನಾಂಗದ ಯುವತಿಯ ಮೇಲೆ ಮತಾಂತರಕ್ಕಾಗಿ ಒತ್ತಡ ಮಧ್ಯಪ್ರದೇಶದ ಹರದಾ ಜಿಲ್ಲೆಯಲ್ಲಿನ ೧೯ ವರ್ಷದ ಬುಡಕಟ್ಟು ಜನಾಂಗದ ಯುವತಿಯು ಆಕೆಯ ಕುಟುಂಬ ಸಹಿತ ಜಿಲ್ಲೆಯಲ್ಲಿನ ಹಂಡಿಯ ಪೊಲೀಸ್ ಠಾಣೆಯಲ್ಲಿ ಸಪ್ಟೆಂಬರ್ ೨೭ ರಂದು ದೂರು ದಾಖಲಿಸಿದಳು. ಸಂತ್ರಸ್ತೇ ದೂರಿನಲ್ಲಿ, ೨ ವರ್ಷದ ಹಿಂದೆ ಆಕೆ ಸಿಹೋರ ಜಿಲ್ಲೆಯಲ್ಲಿನ ಶಾದಾಬ ಎಂಬ ಯುವಕನ ಬಲೆಗೆ ಸಿಲುಕಿದಳು. ಶಾದಾಬನು ಪ್ರೀತಿಯ ನಾಟಕವಾಡಿ ಸಂತ್ರಸ್ತೆಯನ್ನು ೨ ವರ್ಷಗಳ ಕಾಲ ಲೈಂಗಿಕ ಶೋಷಣೆ ಮಾಡಿದನು. ಹಾಗೆ ವಿರೋಧಿಸಿದ ನಂತರ ಅವನು ಸಂತ್ರಸ್ತೆಗೆ ವಿವಾಹದ ಆಶ್ವಾಸನೆ ನೀಡಿ ಸುಮ್ಮನಾಗಿ ಸುತ್ತಿದ್ದನು. ಈ ವರ್ಷ ಮೇ ೨೯ ರಂದು ಸಂತ್ರಸ್ತೇ ಮನೆಯಲ್ಲಿ ಒಬ್ಬಳೇ ಇರುವಾಗ ಶಾದಾಬ್ ಅಲ್ಲಿಗೆ ಬಂದನು ಮತ್ತು ಆಕೆಗೆ ಇಸ್ಲಾಂ ಸ್ವೀಕರಿಸದ ನಂತರವೇ ವಿವಾಹ ಮಾಡಿಕೊಳ್ಳುವುದಾಗಿ ಹೇಳಿದನು. ಆಗಸ್ಟ್ ೨೩ ರಂದು ಶಾಬಾದನು ಮತ್ತೊಮ್ಮೆ ಸಂತ್ರಸ್ತೆಯನ್ನು ಸಂಪರ್ಕಿಸಿ ಆಕೆಯ ಜೊತೆಗೆ ದೈಹಿಕ ಸಂಬಂಧ ಹೊಂದಿದನು. ಈ ಸಮಯದಲ್ಲಿ ಅವನು ಮತ್ತೊಮ್ಮೆ ಆಕೆಗೆ ಮತಾಂತರಗೊಳ್ಳಲು ಹೇಳಿದನು. ಹಾಗೂ ಯಾರಿಗಾದರೂ ಹೇಳದಂತೆ ಜೀವ ಬೆದರಿಕೆ ಕೂಡ ಹಾಕಿದ. ಕೊನೆಗೆ ಸಂತ್ರಸ್ತೆಯು ಕುಟುಂಬದವರಿಗೆ ಮಾಹಿತಿ ನೀಡಿದಳು. ಅದರ ನಂತರ ಅವರು ಶಾದಾಬ ಇವನ ವಿರುದ್ಧ ದೂರು ದಾಖಲಿಸಿದರು.
ಉತ್ತರಾಖಂಡ : ಮತಾಂಧನು ತನ್ನ ಸುಳ್ಳು ಹೆಸರು ಹೇಳಿ ವಿಚ್ಛೇದಿತ ಮಹಿಳೆಗೆ ವಂಚನೆ
ಉತ್ತರಾಖಂಡದ ರಾಜಧಾನಿ ಡೆಹರಾಡೂನ್ ನಲ್ಲಿನ ಶಹಜಾದನು ತನ್ನ ಸುಳ್ಳು ಹೆಸರು ಹೇಳಿ ವಿಚ್ಛೇದಿತ ಎರಡು ಮಕ್ಕಳ ತಾಯಿಯಾಗಿರುವ ಹಿಂದೂ ಮಹಿಳೆಯನ್ನು ವಂಚಿಸಿದ್ದಾನೆ. ಈ ಪ್ರಕರಣದಲ್ಲಿ ಮಹಿಳೆಯ ತಾಯಿ ಸಪ್ಟೆಂಬರ್ ೨೬ ರಂದು ರಾಯಪುರ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾಳೆ ಮತ್ತು ಶಹಜಾದ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾಳೆ. ದೂರಿನಲ್ಲಿ ಆಕೆ, ಅವರ ೩೦ ವರ್ಷದ ಮಗಳು ವಿಚ್ಛೇದಿತ ಮತ್ತು ಎರಡು ಮಕ್ಕಳ ತಾಯಿ ಆಗಿದ್ದಾಳೆ. ಈಗ ಆಕೆ ತನ್ನ ಎರಡು ಮಕ್ಕಳ ಸಹಿತ ಆಕೆಯ ತವರು ಮನೆಯಲ್ಲಿ ವಾಸಿಸುತ್ತಿದ್ದಾಳೆ. ಲಾಕ್ಡೌನ್ ಸಮಯದಲ್ಲಿ ಈ ಮಹಿಳೆಗೆ ಶಹಜಾದ ಎಂಬ ಯುವಕನ ಜೊತೆಗೆ ಪರಿಚಯವಾಯಿತು. ಆ ಸಮಯದಲ್ಲಿ ಅವನು ತನ್ನ ಹೆಸರು ಮೋನು ಚೌದರಿ ಎಂದು ಹೇಳಿದ್ದನು. ಮೋನು ಚೌದರಿ ಅಲಿಯಾಸ್ ಶಹಜಾದ್ ಇವನು ಮೂಲತಃ ದೆಹಲಿಯ ನಿವಾಸಿಯಾಗಿದ್ದಾನೆ. ಕೆಲವು ದಿನಗಳ ಸಂಭಾಷಣೆಯಲ್ಲಿ ಶಹಜಾದನು ಸಂತ್ರಸ್ತ ಮಹಿಳೆಯನ್ನು ತನ್ನ ಬಲೆಗೆ ಸಿಲುಕಿಸಿದನು. ಮೋನು ಮುಸಲ್ಮಾನನೆಂದು ಬೆಳಕಿಗೆ ಬಂದ ನಂತರ ಕೂಡ ಈ ಮಹಿಳೆ ಅವನ ಜೊತೆಗೆ ವಿವಾಹ ಮಾಡಿಕೊಳ್ಳಲು ದೃಢವಾಗಿದ್ದಳು. ಸಂತ್ರಸ್ತ ಮಹಿಳೆಯ ತಾಯಿಯು, ಯಾವಾಗ ನಾನು ಆಕೆಯನ್ನು ತಡೆದೇನು ಆಗ ಆಕೆ ಸಿಟ್ಟಿನಿಂದ ಮನೆ ಬಿಟ್ಟು ಹೋಗಿ ಶಹಜಾದನ ಜೊತೆಗೆ ಇದ್ದಳು. ಹೋಗುವಾಗ ಎರಡು ಮಕ್ಕಳನ್ನು ನಮ್ಮ ಮನೆಯಲ್ಲಿ ಬಿಟ್ಟಳು ಮತ್ತು ನಮ್ಮ ಗಾಡಿ ಕೂಡ ತೆಗೆದುಕೊಂಡು ಹೋದಳು. ಶಹಜಾದನು ಸಂತ್ರಸ್ತೆಗೆ ಬ್ರೈನ್ ವಾಶ್ ಮಾಡಿದ್ದಾನೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದು ಶಹಜಾದನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳು ಶಾಶ್ವತವಾಗಿ ತಡೆಯುವದಕ್ಕಾಗಿ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು ! |