ಬೆಂಗಳೂರು – ನಾಗಮಂಗಲ ಗಲಭೆ ಕುರಿತು ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ರಾಜ್ಯ ಉಪ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ಇವರು, ನಾಗಮಂಗಲ ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ನಮ್ಮ ಇಲಾಖೆಯ ತಪ್ಪುಗಳು ಕಂಡುಬಂದಿದೆ. ಎಲ್ಲಾ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗಮಂಗಲ ಗಲಭೆ ಪ್ರಕರಣವು ಪೂರ್ವ ಯೋಜಿತ ಪಿತೂರಿ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಘಟನಾ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಘಟನೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆದರೂ ಘಟನೆಯಲ್ಲಿ ಪೊಲೀಸ್ ಇಲಾಖೆ ಏನು ತಪ್ಪು ಮಾಡಿದೆ, ಯಾವ ಸಂದರ್ಭದಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ಉಪ ಪೊಲೀಸ್ ಮಹಾನಿರ್ದೇಶಕರು ಏನೂ ಹೇಳಿಲ್ಲ. ಪೊಲೀಸ್ ಇಲಾಖೆ ಆಂತರಿಕ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಕೊನೆಗೂ ಗೃಹ ಸಚಿವರ ಆದೇಶದಂತೆಯೇ ನಡೆದುಕೊಳ್ಳಲಿದೆ ಪೊಲೀಸ್ ಇಲಾಖೆ ! ಹೀಗಿರುವಾಗ ಉಪ ಪೊಲೀಸ್ ಮಹಾನಿರ್ದೇಶಕರು ಕಾಂಗ್ರೆಸ್ ಸರಕಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ತಪ್ಪನ್ನು ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ? |